ಕಾವ್ಯ
“ಕಾಳ ಸಂತೆಯ ಖದೀಮರು” ರವಿ ಹಿರೇಮಠರ ಕವನ
“ಕಾಳ ಸಂತೆಯ ಖದೀಮರು”
ಇವರೇನು………
ಸತ್ಯಹರಿಶ್ಚಂದ್ರನಂತೆ
ನಿಯತ್ತಿನ ಮಾತು ಚಲ್ಲಿ.
ಮಿಟಕುತ್ತಿದ್ದಾರೆ.
ಶತ ಶತಮಾನಗಳ
ಕಾಲಕ್ಕೆ………
ಕಾಳ ಸಂತೆಯ ಹೆಗ್ಗಣಗಳು.
ಇಂಥವರ ನೆರಳ ಸೂಸುವ
ಅಂಧ ಅಭಿಮಾನಿಗಳು.
ಇಂಥವರಿಗೆ……
ಅಭಿಮಾನಿಗಳ ಸಂಘ ಬೇರೆ.
ತಮ್ಮ ಧಾಸ್ಯದ ಮನಸ್ಸಿಗೆ
ಪುಷ್ಟಿಕರಿಸಿದ್ದಾರೆ.
ಕಳ್ಳ-ಸುಳ್ಳನಿಗೆ
ಜೈ….ಜೈ…..ಎನ್ನುವ ಧ್ವನಿಯಲ್ಲಿ
ಗುಲಾಮಗಿರಿಯ ಅಬ್ಬರ.
ಲಜ್ಜೆಗೆಟ್ಟ ಮನಸ್ಸು
ಧನ ದಾಹಿಗಳು…….
ಧ್ವನಿ ಇಲ್ಲದವರ ವಂಚಿಸಿ!
ಐಶ್ವರ್ಯದ ಸಾಮ್ರಾಜ್ಯ ಕಟ್ಟಿದವರು.
ಮೇಲೆ ಸಭೂಬು
ಹೇಳುವುದು ಸತ್ಯದ ಕಥೆ.
ಅಲ್ಲ…..ಅಲ್ಲ…. ಕಾಳಸಂತೆಯ ಖದೀಮ.
ಧರ್ಪ, ಕೇಡತನದ ಖ್ಯಾತಿ
ಇಂಥವರ
ಮೈ ಚರಮ ಸುಲಿದು
ಅಗ್ರಹಾರದೊಳಗೆ ನೇತಾಕು.
ಮುಂದೆ ಮಾಡದ ಹಾಗೆ
ಬೇರೊಬ್ಬರಿಗೆ ಇವನ ಗುರುತು ಸಿಗಲಿ.
– ರವಿ ಹಿರೇಮಠ. ಶಹಾಪುರ
Vav Kya bat Hai, bold indeed
vaastavika parastitiyannu pratibimbisuva kavana