ಕಾವ್ಯ
“ನಶ್ವರದ ಊರೋ” ಕವಿ ಶರಣು ಪಾಟೀಲ್ ರಚಿತ ಕಾವ್ಯ
ನಶ್ವರದ ಊರೋ
ಒಂದಲ್ಲ ಎರಡಲ್ಲ ನೂರಾರು ಚೆಲುವು
ಆ ಚೆಲುವಿನೊಳಗೆಲ್ಲ ನೀನೆ ಮೇರು
ಆ ಊರು ಆ ಸೂರು
ನೆನಪುಗಳು ನೂರು
ಆ ನೆನಪುಗಳಲ್ಲೆ ಎಳೆಯುತ್ತಿದೆ
ಬಾಳಿನ ತೇರು
ಆ ತೇರಿನ ಬಲಕ್ಕೆ ನಾನು
ತೇರಿನ ಎಡಕ್ಕೆ ನೀನು
ಇದ್ದರೆ ಅದು ಜೀವನ ಸಾರ
ಇಲ್ಲವಾದರೆ ಚಟ್ಟಕ್ಕೆ ಭಾರ
ಒತ್ತುವುದು ಯಾರೊ
ಒಗೆದವರು ಯಾರೊ
ನಾನು ದೂರೊ
ನೀನು ದೂರೊ
ಬಲ್ಲವರು ಯಾರೊ
ಎಲ್ಲವೂ ನಶ್ವರದ ಊರೊಳಗೆ
ಮರಳಿ ಬಂದವರು ಯಾರೊ
**ರಚನೆ**
ಶರಣು ಪಾಟೀಲ್
ಚಂದಾಪೂರ.