ಪ್ರಮುಖ ಸುದ್ದಿಸಾಹಿತ್ಯ

ಮೇರು ಸಾಹಿತಿಗಳ ಅಗಲಿಕೆ ಕನ್ನಡ ಸಾಹಿತ್ಯ ನಷ್ಟ- ಡಾ.ಹೊಸ್ಮನಿ

ಸಾಹಿತಿ ಸಿದ್ಲಿಂಗಯ್ಯ ಮತ್ತು ಕುಷ್ಠಗಿ ಅವರಿಗೆ ನುಡಿ ನಮನ

yadgiri, ಶಹಾಪುರ: ಸಾಹಿತಿಗಳಾದ ಡಾ.ಸಿದ್ಲಿಂಗಯ್ಯ ಮತತು ವಸಂತ ಕುಷ್ಠಗಿಯವರ ಅಗಲಿಕೆಯಿಂದ ನಾಡಿನ ಸಾಹಿತ್ಯ ಲೋಕ ಬಡವಾಗಿದೆ. ಇರ್ವರು ಅಪರೂಪ ಸಾಹಿತಗಳು ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ. ಡಾ.ಸಿದ್ಲಿಂಗಯ್ಯನವರು ಮೂಢ ನಂಬಿಕೆ, ಅಸ್ಪøಶ್ಯತೆ, ಅಸಮಾನತೆ, ಹಸಿವು, ಬಡತನಗಳೆಂಬ ದಾರಿದ್ರ್ಯತನ ವಿರುದ್ಧ ಕಠೋರ ಬರಹದ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದ್ದಾರೆ. ಅಂತಹ ಮಹನೀಯರನ್ನು ಕಳೆದುಕೊಂಡ ನಾವೆಲ್ಲ ಅನಾಥರೆನಿಸಿದ್ದೇವೆ ಎದು ಉಪನ್ಯಾಸಕ ಡಾ.ರವೀಂದ್ರನಾಥ ಹೊಸ್ಮನಿ ಅಶೃತರ್ಪಣ ಸಲ್ಲಿಸಿದರು.

ನಗರದ ಕಸಾಪ ಭವನದಲ್ಲಿ ಹಮ್ಮಿಕೊಂಡ ಈಚೆಗೆ ಅಗಲಿದ ಬಂಡಾಯ ಸಾಹಿತಿ ಡಾ.ಸಿದ್ಧಲಿಂಗಯ್ಯ ಹಾಗೂ ಕಲ್ಬುರ್ಗಿಯ ಹಿರಿಯ ಸಾಹಿತಿ ವಸಂತ ಕುಷ್ಠಗಿಯವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿ ಅವರು ಮಾತನಾಡಿದರು.

ಸಮಾಜದಲ್ಲಿನ ಹಸಿವು, ಬಡತನ, ಅಸ್ಪೃಶ್ಯತೆ, ಅಸಮಾನತೆ, ಮೂಢನಂಬಿಕೆ ಹೋಗಲಾಡಿಸಲು ಸಾಕಷ್ಟು ಶ್ರಮವಹಿಸಿ ಜೊತೆಗೆ ಕ್ರಾಂತಿಗೀತೆಗಳ ರಚಿಸುವುದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ ಡಾ. ಸಿದ್ಧಲಿಂಗಯ್ಯನವರು ಒಬ್ಬ ವ್ಯಕ್ತಿಯಾಗಿರದೆ ಮಹಾನ್ ಶಕ್ತಿಯಾಗಿದ್ದರು ಎಂದರು.

ಹಿರಿಯ ಸಾಹಿತಿ ಶಿವಣ್ಣ ಇಜೇರಿ ಮಾತನಾಡಿ, ಪೆÇ್ರ. ವಸಂತ ಕುಷ್ಟಗಿಯವರು ಸಾಹಿತಿಗಳಾಗಿ, ಸಂಘಟಕರಾಗಿ, ವೃತ್ತಿಯಿಂದ ಪ್ರಾಧ್ಯಾಪಕರಾಗಿ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ. ಸುಸಂಸ್ಕøತ ಮನೆತನದಿಂದ ಬಂದ ಅವರು, ಸರಳ ಹಾಗೂ ಸಜ್ಜನಿಕೆಗೆ ಹೆಸರುವಾಸಿಯಾಗಿದ್ದರು ಎಂದು ಗುಣಗಾನ ಮಾಡಿದರು

ಮುಖಂಡ ನೀಲಕಂಠ ಬಡಿಗೇರ ಮಾತನಾಡಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು. ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಸಿದ್ಧರಾಮ ಹೊನ್ಕಲ್, ಗುರುಬಸ್ಸಯ್ಯ ಗದ್ದುಗೆ, ತಾಲ್ಲೂಕು ಶಸಾಪ ಅಧ್ಯಕ್ಷ ಲಿಂಗಣ್ಣ ಪಡಶೆಟ್ಟಿ, ಕಸಾಪ ಅಧ್ಯಕ್ಷ ಸಿದ್ಲಿಂಗಪ್ಪ ಆನೇಗುಂದಿ, ಪ್ರಮುಖರಾದ ಬಸವರಾಜ ಹಿರೇಮಠ, ನಿವೃತ್ತ ಉಪತಹಸೀಲ್ದಾರ್ ಸಾಯಿಬಣ್ಣ ಮಡಿವಾಳಕರ್, ಶರಣಪ್ಪ ಮುಂಡಾಸ್, ದೇವಿಂದ್ರಪ್ಪ ಕನ್ಯಾಕೋಳೂರ, ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಪಂಚಾಕ್ಷರಿ ಹಿರೇಮಠ, ಬಸವರಾಜ ಸಿನ್ನೂರ ಹಾಗೂ ಇತರರು ಉಪಸ್ಥಿತರಿದ್ದರು.

 

Related Articles

Leave a Reply

Your email address will not be published. Required fields are marked *

Back to top button