ಪ್ರಮುಖ ಸುದ್ದಿ
ಇಂದು ವಿಪಕ್ಷ ನಾಯಕನ ಆಯ್ಕೆ.-ಖರ್ಗೆ ಹೇಳಿಕೆ
ಇಂದು ವಿಪಕ್ಷ ನಾಯಕನ ಆಯ್ಕೆ.-ಖರ್ಗೆ
ಕಲಬುರ್ಗಿಃ ಕಾಂಗ್ರೆಸ್ ನಲ್ಲಿ ಯಾವುದೇ ಮೂಲ ಮತ್ತು ವಲಸಿಗ ಎಂಬುದಿಲ್ಲ. ಕಾಂಗ್ರೆಸ್ ದೊಡ್ಡ ಸಮುದ್ರ ಇದ್ದಂತೆ. ಇಲ್ಲಿ ಎಲ್ಲರೂ ಒಂದೆ. ಕಾಂಗ್ರೆಸ್ಪ ಪಕ್ಷದಲ್ಲಿ ಇಂದು ವಿಪಕ್ಷ ನಾಯಕನ ಆಯ್ಕೆ ನಡೆಯಲಿದೆ ಎಂದು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ.
ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಕಾಂಗ್ರೆಸ್ ನಲ್ಲಿ ಯಾವುದೇ ಒಡಕು ಭಿನ್ನವಿಲ್ಲ. ಎಲ್ಲರೂ ಒಗ್ಗಟ್ಟಾಗಿ ಪಕ್ಷವನ್ನು ಮುನ್ನಡೆಸಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.