ಸಂಸ್ಕೃತಿ

ಬೀದರನಲ್ಲಿ ಅಂಭಾ ಭವಾನಿ ಪ್ರತಿಮೆ ಮೆರವಣಿಗೆ

ಮಂಗಲಪೇಟೆಃ ಅಂಬಾ ಭವಾನಿ ಉಧೋ ಉಧೋ..

ಬೀದರಃ ನಗರದ ಮಂಗಲಪೇಟೆ ಬಡಾವಣೆಯಲ್ಲಿ ಇರುವ ಜಗನ್ಮಾತೆ ಅಂಬಾ ಭವಾನಿ ದೇವಸ್ಥಾನದಲ್ಲಿರುವ ಭವಾನಿಯ ಭವ್ಯ ಪ್ರತಿಮೆಯನ್ನು ಹೂಗಳಿಂದ ಅಳಕಂರಿಸಿ, ಭಕ್ತಿಯಿಂದ ಪೂಜಿಸಿ ಅಲಂಕರಿಸಿದ ಎತ್ತಿನ ಬಂಡಿಯಲ್ಲಿ ನಗರದ ಶಾರ್ ಹನುಮ ಮಂದಿರವರೆಗೆ ಭಾಜಾ ಭಜಂತ್ರಿಗಳೊಂದಿಗೆ ವಿಜೃಂಭಣೆಯಿಂದ ಮೆರವಣಿಗೆ ಜರುಗಿತು.

ಮತ್ತೆ ತಡ ರಾತ್ರಿವರೆಗೆ ನಗರದ ವಿವಿಧ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆ ಹೊರಟು ವಾಪಸ್ ಮೂಲ ದೇವಸ್ಥಾನ ತಲುಪಲಿದೆ ಎಂದು ದೇವಸ್ಥಾನದ ಭಕ್ತ ಸಮೂಹ ವಿನಯವಾಣಿಗೆ ತಿಳಿಸಿದೆ.

ನವರಾತ್ರಿ ಉತ್ಸವ ಅಂಗವಾಗಿ 9 ದಿಮಗಳ ಕಾಲ ಪೂಜೆ ಪುನಸ್ಕಾರ ನಡೆದಿದ್ದು, ವಿಜಯದಶಮಿಯಂದು ಇಲ್ಲಿನ ಗರ್ಭ ಗುಡಿಯಲ್ಲಿ ಮಲಗಿರುವ ದೇವಿಯನ್ನು ಇಂದು ಮಂಗಳವಾರ ಧಾರ್ಮಿಕ ವಿಧಿ ವಿಧಾನದಂತೆ ಮಹಾರಾಷ್ಟ್ರದ ತುಳಜಾಪುರದ ಮೂಲ ದೇವಸ್ಥಾನದಲ್ಲಿ ನಡೆಯುವಂತೆ ಇಲ್ಲಿಯೂ ದೇವಿಯನ್ನು ಓರ್ವ ಭಕ್ತನಿಂದ ಎಬ್ಬಿಸುವ ನಿಯಮ ಅನುಸರಿಸಲಾಗುತ್ತಿದೆ.

ಅದರಂತೆ ಮಂಗಳವಾರ ಬೆಳಗ್ಗೆ ದೇವಿಯನ್ನು ಎಬ್ಬಿಸಿ, ವಿವಿಧ ಪೂಜಾ ವಿಧಿ ವಿಧಾನ ನಡೆಸುವ ಮೂಲಕ ದೇವಿಯನ್ನು ಹೂಗಳಿಂದ ಧೂಪ ದೀಪದಿಂದ ಬೆಳಗಿದರು. ಸಾಲು ಸಆಲು ಭಕ್ತಾಧಿಗಳು ದೇವಿಯ ಉಡಿಯನ್ನು ತುಂಬಿದರು.

ನಂತರ ಪ್ರಮುಖ ಮಾರ್ಗಗಳ ಮೂಲಕ ಪ್ರತಿ ವರ್ಷದಂತೆ ಮೆರವಣಿಗೆ ನಡೆಯಿತು. ದೇವಸ್ಥಾನದ ಅರ್ಚಕ ಜಗಧೀಶ ನೇತೃತ್ವದಲ್ಲಿ ಬಡಾವಣೆಯ ಸರ್ವ ಜಾತಿ ಜನಾಂಗದವರು ಭಾಗವಹಿಸಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಇದ್ದರು.

ಮಂಗಲಪೇಟೆ ಮತ್ತು ಮಡಿವಾಳೇಶ್ವರ ದೇವಸ್ಥಾನ ಬಳಿ ಬಡಾವಣೆಯ ಹಿರಿಯರು ಸುತ್ತಲಿನ ಗ್ರಾಮಗಳ ಭಕ್ತಾಧಿಗಳು ಸಾರ್ವಜನಿಕರು ಭಾಗವಹಿಸಿದ್ದರು.

ಮೆರವಣಿಗೆ ಯುದ್ದಕ್ಕೂ ಭಕ್ತಾಧಿಗಳು ಅಂಬಾ ಭವಾನಿ ಉದೋ ಉದೋ ಎಂದು ಘೋಷಣೆ ಮೊಳಗುತ್ತಿದ್ದವು. ಯುವಕರು ಹಿರಿಯರು ಧಾರ್ಮಿಕ ಸಂಗೀತದ ನಿನಾದಕ್ಕೆ ಕುಣಿದು ಕುಪ್ಪಳಿಸಿದರು. ಮಾರ್ಗ ಮಧ್ಯೆ ಭಕ್ತಾಧಿಗಳು ದೇವಿ ದರ್ಶನ ಪಡೆದರು. ಕಾಯಿ ಹೂ ಮಾಲೆ ಕುಂಕುಮ ಹರಿಶಿಣ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು.

Related Articles

Leave a Reply

Your email address will not be published. Required fields are marked *

Back to top button