ಮನೆಯಲ್ಲಿದ್ದವರ ಕೈಕಾಲು ಕಟ್ಟಿ ನಗನಾಣ್ಯ ದರೋಡೆ
ಕೋಲಾರಃ ಮನೆಯಲ್ಲಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಓರ್ವ ಪುರುಷನಿಗೆ ಗನ್ ತೋರಿಸಿ ಕೈ ಕಾಲು ಕಟ್ಟಿಹಾಕಿ ಮನೆಯಲ್ಲಿದ್ದ ಅಂದಾಜು 20 ಲಕ್ಷಕ್ಕೂ ಹೆಚ್ಚು ಹಣ ಮತ್ತು ಒಡವೆ ದೋಚಿಕೊಂಡು ಪರಾರಿಯಾದ ಘಟನೆ ನಗರದ ಡೂಂಲೈಟ್ ಸರ್ಕಲ್‍ನಲ್ಲಿ ನಡೆದಿದೆ.
ಐವರು ದುಷ್ಕರ್ಮಿಗಳು ತಂಡ ಈ ದುಷ್ಕøತ್ಯ ಎಸಗಿದ್ದಾರೆ ಎನ್ನಲಾಗಿದೆ. ಕೀರ್ತಿ ಫೈನಾನ್ಸ್ ಮಾಲೀಕ ಪ್ರಭಾಕರ್ ಎಂಬುವರ ಮನೆಯಲ್ಲಿಯೇ ದರೋಡೆ ನಡೆದಿದ್ದು, ದರೋಡೆ ಸಂದರ್ಭದಲ್ಲಿ ಮನೆಯವರ ಮೇಲೆ ಹಲ್ಲೆಯೂ ನಡೆಸಿದ್ದಾರೆ ಎನ್ನಲಾಗಿದೆ. ಸುಜಾತ ಸಿಂಧೂ, ಶೋಭಾ ಮೂರ್ತಿ ಮತ್ತು ಇವರ ತಂದೆ ಪ್ರಭಾಕರ ಈ ಮೂವರು ಹಲ್ಲೆಗೊಳಗಾಗಿದ್ದವರು. ಸ್ಥಳಕ್ಕೆ ನಗರ ಪೊಲೀಸ್‍ರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ತೀವ್ರ ತನಿಖೆಯಿಂದಲೇ ಸತ್ಯ ಹೊರಬರಬೇಕಿದೆ. ಅಲ್ಲದೆ ದರೋಡೆ ನಡೆಸಿದ ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆಯಾಗಬೇಕಿದೆ. ಕೋಲಾರ ಪೊಲೀಸರು ಈ ಕುರಿತು ಆರೋಪಿಗಳ ಬಂಧಿಸಲು ಬಲೆ ಬೀಸಿದ್ದಾರೆ. ಅಂದಾಜು ಒಂದು ಕೆಜಿ ಚಿನ್ನ ಹಾಗೂ 5.50 ಲಕ್ಷಕ್ಕೂ ಹೆಚ್ಚು ಹಣ ದೋಚಿದ್ದಾರೆ ಎಂದು ಮನೆಯವರಿಂದ ತಿಳಿದು ಬಂದಿದೆ.