ಪ್ರಮುಖ ಸುದ್ದಿ

ಯಾದಗಿರಿಃ ನಿಲ್ಲದ ಕೊರೊನಾಘಾತ, ನಾಲ್ವರಿಗೆ ಪಾಸಿಟಿವ್

ಯಾದಗಿರಿಃ ಮತ್ತೆ 4 ಜನರಿಗೆ ಕೊರೊನಾ ಪಾಸಿಟಿವ್

ಯಾದಗಿರಿಃ ಶುಕ್ರವಾರ ಮತ್ತೆ ಜಿಲ್ಲೆಯಲ್ಲಿ 4 ಜನರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 877 ಪ್ರಕರಣಗಳು ಬೆಳಕಿಗೆ ಬಂದಿವೆ. ಅದರಲ್ಲಿ 489 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಒಬ್ಬರು ಮೃತಪಟ್ಟಿರುತ್ತಾರೆ.

ಇದುವರೆಗೂ ಜಿಲ್ಲೆಯಲ್ಲಿ 20,402 ಮಾದರಿಗಳ ವರದಿ ನೆಗೆಟಿವ್ ಬಂದಿವೆ. ಹೊಸದಾಗಿ ಕಳುಹಿಸಲಾದ 835 ಮಾದರಿಗಳ ಸೇರಿದಂತೆ 1757 ಮಾದರಿಗಳ ವರದಿ ಇನ್ನೂ ಬರಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ರಿ.ರಜಪೂತ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುರಪುರ ತಾಲೂಕಿನ ದಿವಳಗುಡ್ಡದ 27 ವಷ೵ದ ಮಹಿಳೆ (ಪಿ-8227), ದಿವಳಗುಡ್ಡದ 31 ವಷ೵ದ ಪುರುಷ (ಪಿ-8228), ಯಾದಗಿರಿ ತಾಲೂಕಿನ ಲಿಂಗೇರಿ 78 ವಷ೵ದ ಮಹಿಳೆ(ಪಿ-8229), ತಾಲೂಕಿನ ಅಲಿಪುರ ಗ್ರಾಮದ 32 ವಷ೵ದ ಮಹಿಳೆ (ಪಿ-8229) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button