ಕೊರೊನಾ ವಿರುದ್ಧ ಅನುಸರಿಸಿ ಸಪ್ತಸೂತ್ರ – ಮೋದಿ
ನವದೆಹಲಿಃ ದೇಶದಲ್ಲಿ ಕೊರೊನಾ ವೈರಸ್ ಸೋಂಕು ತಡೆಗಟ್ಟುವ ಹಿನ್ನೆಲೆ ಮೇ.3 ರವರೆಗೂ ಅಂದರೆ ಇನ್ನೂ 19 ದಿನಗಳವರೆಗೂ ಲಾಕ್ ಡೌನ್ ಮುಂದುವರೆಯಲಿದೆ ಎಂದು ಪ್ರಧಾನಿ ಮೋದಿಯವರು ತಿಳಿಸಿದರು.
ಕೊರೊನಾ ಮಹಾಮಾರಿ ತಡೆಗೆ ಸಂಬಂಧಿಸಿದಂತೆ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ದಿನಗೂಲಿ ನೌಕರರಿಗೆ ಮತ್ತು ಕೃಷಿ ಕಾರ್ಮಿಕರಿಗೆ ಹೊಸ ಮಾರ್ಗ ಅನ್ವಯ ವಿನಾಯಿತಿ ನೀಡಲಾಗುವದು. ಕೊರೊನಾ ಪೀಡಿತರಿಗಾಗಿ ಆಸ್ಪತ್ರೆಗಳಲ್ಲಿ 1 ಲಕ್ಷ ಬೆಡ್ ಮೀಸಲಿಡಲಾಗಿದೆ.
ಏ.20 ರವರೆಗೆ ಕೊರೊನಾ ಸೊಂಕು ತಡೆಯುವಲ್ಲಿ ಚೇತರಿಕೆ ಕಂಡು ಬಂದಲ್ಲಿ ಆಯಾ ಪ್ರದೇಶದ ಸ್ಥಿತಿಗತಿ ಅನುಗುಣವಾಗಿ ಲಾಕ್ ಡೌನ್ ಸಡಿಲಿಕೆ ಕುರಿತು ಕೆಲ ನಿರ್ಬಂಧಗಳನ್ನು ಸಡಿಲಿಸುವದಾಗಿ ಪ್ರಧಾನಿ ಘೋಷಿಸಿದ್ದಾರೆ.
ಸಪ್ತ ಸೂತ್ರ ಅನುಸರಿಸಲು ಸೂಚನೆ
1, ಮನೆಯಲ್ಲಿ ಹಿರಿಯ ನಾಗರೀಕರ ಬಗ್ಗೆ ಕಾಳಜಿ ವಹಿಸಿ
2, ಸಾಮಾಜಿಕ ಅಂತರದ ಲಕ್ಷ್ಮಣ ರೇಖೆಯನ್ನು ಯಾವುದೇ ಕಾರಣಕ್ಕೂ ದಾಟದಿರಿ.
3, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮಾರ್ಗಸೂಚಿ ಪಾಲಿಸಿ, ಆಯುಷ್ ಇಲಾಖೆ ಮಾರ್ಗದರ್ಶನ ಪಾಲಿಸಿ.
4, ಆರೋಗ್ಯ ಸೇತು ಆಯಪ್ ನ್ನು ಎಲ್ಲರೂ ಡೌನ್ ಲೋಡ್ ಮಾಡಿಕೊಳ್ಳಿ
5, ನಿಗರ್ಕತಕಿರು, ಬಡವರಿಗೆ ಸಹಾಯ ಮಾಡಿ
6, ಕಾರ್ಮಿಕರನ್ನು ಕೆಲಸದಿಂದ ತೆಗೆಯಬೇಡಿ
7, ಆರೋಗ್ಯ, ಶುಚಿತ್ವ ಕಾರ್ಯಕರ್ತರ ಬಗ್ಗೆ ಗಮನವಿರಲಿ ಎಂದು ಸಪ್ತ ಸೂತ್ರ ಅನುಸರಿಸಲು ಸೂಚನೆ ನೀಡಿದ್ದಾರೆ.