ಶಹಾಪುರ ಜನತೆಯಲ್ಲಿ ಕ್ಷಣಕಾಲ ಆತಂಕ ತಂದಿದ್ಯಾಕೆ.? ಗೊತ್ತಾ.?
ಸ್ಪಷ್ಟ ಪಡಿಸಿ ಅಭಯ ನೀಡಿದ ಸಿಪಿಐ ಹನುಮರಡ್ಡೆಪ್ಪ
ಬೇರೆಡೆಯ ಕೊರೊನಾ ರೋಗಿ ಶಹಾಪುರಕ್ಕೆ ಸ್ವಿಫ್ಟ್ ವದಂತಿ, ಜನಾಕ್ರೋಶ
ಶಹಾಪುರಃ ಸಮೀಪದ ಭೀಮರಾಯನ ಗುಡಿಯಲ್ಲಿ ಸ್ಥಾಪಿಸಲಾದ ಕೊರೊನಾ ಐಷೋಲೇಷನ್ ವಾರ್ಡ್‍ಗೆ ಯಾದಗಿರಿ ಜಿಲ್ಲೆಯ ಗುರಮಠಕಲ್ ವ್ಯಾಪ್ತಿಯ ಕೊರೊನಾ ರೋಗಿಗಳನ್ನು ಕರೆ ತರುತ್ತಿದ್ದಾರೆ ಎಂಬ ಸುದ್ದಿ ಕ್ಷಣಕಾಲದಲ್ಲಿ ನಗರದಲ್ಲಿ ಹರಡಿ ದಂಗುಗೊಳಿಸಿತ್ತು. ಈ ಕುರಿತು ತಲೆ ಕೆಡಿಸಿಕೊಂಡ ಸ್ಥಳೀಯ ನಾಗರಿಕ ಹೋರಾಟ ಸಮಿತಿ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಪರಮಾರ್ಶಿಸಲು ಕೇಳಿತು.
ಮನವಿಗೆ ತಕ್ಷಣ ಸ್ಪಂಧಿಸಿದ ಸಿಪಿಐ ಹನುಮರಡ್ಡೆಪ್ಪ, ಮೇಲಧಿಕಾರಿಗಳನ್ನು ಸಂಪರ್ಕಿಸಿ ವಿಚರಿಸಿದರು. ಅಲ್ಲದೆ ಶಹಾಪುರಕ್ಕೆ ಯಾರನ್ನು ತರಲಾಗುವದಿಲ್ಲ ಎಂದು ಸ್ಪಷ್ಟ ಪಡಿಸಿದರು. ಈ ಮೊದಲು ಐಸೋಲೇಷನ್‍ಗೆ ತರುವ ವಿಚಾರ ನಡೆದದ್ದು ನಿಜ. ಬೆಂಗಳೂರಿನ ಕೊರೊನಾ ರೋಗಿಯೊಬ್ಬರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೋರ್ವಳು ಗುರುಮಠಕಲ್ ವ್ಯಾಪ್ತಿಯ ಗೋಪಾಲಪುರ ಎಂಬ ಒಂದು ಗ್ರಾಮದವರಾಗಿದ್ದು, ಅವರ ಸಂಪರ್ಕದಲ್ಲಿದ್ದ ನಾಲ್ವರನ್ನು ಇಲ್ಲಿನ ಐಸೋಲೇಷನ್ ವಾರ್ಡ್‍ಗೆ ತರಲು ಯೋಜಿಸಿದ್ದರು. ಅದು ಇದೀಗ ಕ್ಯಾನ್ಸಲ್ ಆಗಿದೆ. ಅದೇ ಗ್ರಾಮ ಸಮೀಪದ ಪ್ರವಾಸಿ ಮಂದಿರದಲ್ಲಿ ಕ್ವಾರಂಟೀನ್ ನಲ್ಲಿಡಲಾಗಿದೆ ಎಂದು ಸ್ಪಷ್ಟ ಪಡಿಸಿ ಅಭಯ ನೀಡಿದರು.
ಯಾರೊಬ್ಬರು ಆತಂಕ ಪಡಬೇಡಿ. ಎಲ್ಲರೂ ಕೊರೊನಾ ರೋಗ ತಡೆಗೆ ಪ್ರಾಮಾಣಿಕವಾಗಿ ಸ್ಪಂಧಿಸಬೇಕು. ಪೊಲೀಸ್ ಸೇರಿದಂತೆ ವೈದ್ಯರು ಹಗಲು ರಾತ್ರಿ ಎನ್ನದೆ ಜೀವದ ಹಂಗು ತೊರೆದು ಕರ್ತವ್ಯನಿರತದಲ್ಲಿದ್ದಾರೆ. ಸಾರ್ವಜನಿಕರು ಮನೆ ಬಿಟ್ಟು ಹೊರಬರದಂತೆ ಎಚ್ಚರಿಕೆವಹಿಸಬೇಕೆಂದು ತಿಳಿಸಿದರು. ಬೇರಡೆಯಿಂದ ಕೊರೊನಾ ಶಂಕಿತ ಅಥವಾ ಪಾಸಿಟಿವ್ ವ್ಯಕ್ತಿಗಳನ್ನು ಚಿಕಿತ್ಸೆಗಾಗಿ ಇಲ್ಲಿಗೆ ತರುವದು ಬೇಡ. ನಮ್ಮ ತಾಲೂಕು ಸದ್ಯ ಆರೋಗ್ಯ ಇಲಾಕೆ ಮತ್ತು ಪೊಲೀಸರ ನಿರಂತರ ಪರಿಶ್ರಮದಿಂದ ಸುರಕ್ಷಿತವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಾಗರಿಕರ ಸಮಿತಿ ಮುಖಂಡರಾದ ಗುರು ಕಾಮಾ, ರಾಯಪ್ಪ ಸಾಲಿಮನಿ, ಸಯ್ಯದ್ ಖಾದ್ರಿ, ರಫೀಕ್ ಚೌದ್ರಿ, ರಾಜಕುಮಾರ ಚಿಲ್ಲಾಳ, ಪಾಶಾ ಪಟೇಲ್, ಮಲ್ಲಿಕಾರ್ಜುನ ಮುದ್ನೂರ, ಬಾಬಾ ಪಟೇಲ್, ಶಿವಕುಮಾರ ತಳವಾರ, ಸಿದ್ದು ಆರಬೋಳ ಸೇರಿದಂತೆ ಇತರರಿದ್ದರು.
———————-