ಪ್ರಮುಖ ಸುದ್ದಿ
ಕಲಬುರ್ಗಿಯಲ್ಲಿ 144 ಜಾರಿಃ ಡಿಸಿ ಶರತ್ ಆದೇಶ
ಕಲಬುರ್ಗಿಯಲ್ಲಿ 144 ಜಾರಿಃ ಡಿಸಿ ಶರತ್ ಆದೇಶ
ಕಲಬುರ್ಗಿಃ ಕೊರೊನಾ ವೈರಸ್ ತೀವ್ರತೆ ಹೆಚ್ಚಾಗುತ್ತಿರುವ ಹಿನ್ನೆಲೆ ಕಲಬುರ್ಗಿ ಯಲ್ಲಿ ಮುಂಜಾಗೃತ ಕ್ರಮವಾಗಿ ಜಿಲ್ಲೆಯಲ್ಲಿ 144 ಕಲಂ ಜಾರಿಗೊಳಿಸಿ ಜಿಲ್ಲಾಧಿಕಾರಿ ಶರತ್ ಬಿ. ಆದೇಶ ನೀಡಿದ್ದಾರೆ.
ಈಚೆಗೆ ಕೊರೊನಾ ವೈರಸ್ ಸೋಂಕಿತನೋರ್ವ ಮೃತಪಟ್ಟಾಗಿನಿಂದ ಕಲಬುರ್ಗಿ ಸ್ತಬ್ಧಗೊಂಡಿತ್ತು. ಕಳೆದ ಮೂರು ನಾಲ್ಕು ದಿನದಿಂದ ಅಂಗಡಿ ಮುಂಗಟ್ಟುಗಳು ಮುಚ್ಚಲಾಗಿತ್ತು.
ಜನರ ಸಂಚಾರ ಕಡಿಮೆಯಾಗಿದ್ದರು, ಆದರೂ ರಸ್ತೆ ಮೇಲೆ ಜನ ಒಡಾಡುತ್ತಿರವದು ನಿಲ್ಲಿಸಿರಲಿಲ್ಲ. ಜನ ಸಮುದಾಯದ ಆರೋಗ್ಯ ಕಾಪಾಡುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ144 ಜಾರಿ ಕ್ರಮಕೈಗೊಳ್ಳಲಾಗಿದೆ. ಜನ ಗುಂಪು ಗುಂಪಾಗಿ ಸಂಚರಿಸುವದನ್ನು ನಿಲ್ಲಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.