ಪ್ರಮುಖ ಸುದ್ದಿ
ಕ್ರಿಶ್ಚಿಯನ್ ಅಭಿವೃದ್ಧಿ ಯೋಜನೆಯಡಿ ಅರ್ಜಿ ಆಹ್ವಾನ
ಯಾದಗಿರಿ– 2021-22ನೇ ಸಾಲಿನ ಹಿಂದೆ ದಿನಾಂಕ 11-06-2021ರಂದು ಪ್ರಾರಂಭವಾಗಿದ್ದು. ಕ್ರಿಶ್ಚಿಯನ್ ಅಭಿವೃದ್ಧಿ ಯೋಜನೆಯಡಿ ಯಾದಗಿರಿ ಜಿಲ್ಲೆಯ ಚರ್ಚ್ಗಳ ನವೀಕರಣ ಹಾಗೂ ಆವರಣ ಗೋಡೆ ನಿರ್ಮಾಣ ಸ್ಮಶಾನ ಆವರಣ ಗೋಡೆ ನಿರ್ಮಾಣ ಸಮುದಾಯ ಭವನ ನಿರ್ಮಾಣ ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳಿಗೆ ಅನುದಾನ ಬಿಡುಗಡೆ ಮಾಡುವ ಕಾರ್ಯಕ್ರಮಗಳಿಗೆ ಪ್ರಸ್ತಾವನೆ ಸಂಬಂಧಿಸಿದ ಚರ್ಚ್ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯಲ್ಲಿರುವ ಸಂಬಂಧಿಸಿದ ಚರ್ಚ್ ಸಂಸ್ಥೆಯವರು ಯಾದಗಿರಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳ ಕಾರ್ಯಾಲಯಕ್ಕೆ ಕಛೇರಿ ವೇಳೆಯಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳ ಕಛೇರಿ ದೂರವಾಣಿ ಸಂಖ್ಯೆ;08473-253235ಗೆ ಸಂಪರ್ಕಿಸಲು ತಿಳಿಸಿದೆ