ಪ್ರಮುಖ ಸುದ್ದಿ
BREAKING NEWS ಕೃಷಿ ಯಂತ್ರ ಖರೀದಿಃ ಸಬ್ಸಿಡಿ ಶೇ.50ರಿಂದ 75ಕ್ಕೆ ಏರಿಕೆ – ಬಿ.ಸಿ.ಪಾಟೀಲ್
ಕೃಷಿ ಯಂತ್ರ ಖರೀದಿಃ ಸಬ್ಸಿಡಿ ಶೇ.50ರಿಂದ 75ಕ್ಕೆ ಏರಿಕೆ
ಬೆಂಗಳೂರುಃ ಸಾಮಾನ್ಯ ವರ್ಗದ ಜನರು ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲು ನೀಡಲಾಗುತ್ತಿರುವ ಸಬ್ಸಿಡಿ ಶೇ.50 ರಿಂದ 75 ಕ್ಕೆ ಏರಿಕೆ ಮಾಡಲು ಕೃಷಿ ಸಚಿವ ಬಿ.ಸಿ.ಪಾಟೀಲ್ ವಿಧಾನಸಭೆಗೆ ತಿಳಿಸಿದರು.
ಶಾಸಕ ಆನಂದ್, ಸಿದ್ದು ನ್ಯಾಮೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸಾಮಾನ್ಯ ವರ್ಗದ ಜನರು ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲು ಈವರೆಗೂ ಶೇ.40 ರಷ್ಟು ಇದ್ದ ಸಬ್ಸಿಡಿ ಈಗ ಶೇ.75ಕ್ಕೆ ಏರಿಸುವ ಬಗ್ಗೆ ಚರ್ಚೆ ನಡೆಸಲಾಗಿ ಅಂತಿಮವಾಗಿ ಮತ್ತೊಂದು ಬಾರಿ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕೇಂದ್ರ ಸರ್ಕಾರದಿಂದ ನಮಗೆ ಈ ಬಾರಿ ಹೆಚ್ಚಿನ ಅನುದಾನ ಸಿಕ್ಕಿಲ್ಲ. ರಾಜ್ಯ ಸರ್ಕಾರದ ಅನುದಾನದಲ್ಲೇ ನಾವು ಸಬ್ಸಿಡಿ ಕೊಡುತ್ತಿದ್ದೇವೆ. ಹಣಕಾಸಿನ ಲಭ್ಯತೆ ಮೇಲೆ ನಾವು ಹಂತ ಹಂತವಾಗಿ ಯಂತ್ರೋಪಕರಣಗಳ ಖರೀದಿಗೆ ಹಣ ಮಂಜೂರು ಮಾಡುವುದಾಗಿ ಹೇಳಿದ್ದಾರೆ.