ಪ್ರಮುಖ ಸುದ್ದಿ

ಕೃಷಿ ಮುಂಗಾರು ಹಂಗಾಮಿನಲ್ಲಿ 3.92 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ

ಕೃಷಿ ಮುಂಗಾರು ಹಂಗಾಮಿನಲ್ಲಿ 3.92 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ

ಯಾದಗಿರಿ : 2021-22ನೇ ಸಾಲಿನ ಮುಂಗಾರು ಹಂಗಾಮು ಮೇ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದು, 3,92,799 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹಮ್ಮಿಕೊಳ್ಳಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರಾದ ಶ್ರೀಮತಿ ದೇವಿಕಾ ಆರ್, ಅವರು ತಿಳಿಸಿದ್ದಾರೆ.

ಅದರಲ್ಲಿ ಪ್ರಮುಖವಾಗಿ ಹತ್ತಿ 1,56,467, ಭತ್ತ 8,700 ಹೆಕ್ಟೇರ್, ತೊಗರಿ 1,10,890 ಹೆಕ್ಟೇರ್, ಹೆಸರು 22,500 ಹೆಕ್ಟೇರ್, ಸಜ್ಜೆ 10,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುವ ಗುರಿಯನ್ನು ಹೊಂದಲಾಗಿದೆ ಎಂದು ಅವರು ತಿಳಿಸಿದರು.
ಮುಂಗಾರು ಹಂಗಾಮಿಗೆ ಬೇಕಾಗುವ ಬಿತ್ತನೆ ಬೀಜದ ಸಿದ್ದತೆಯನ್ನು ಇಲಾಖೆಯಿಂದ ಮಾಡಿಕೊಳ್ಳಲಾಗಿದೆ. ಕರ್ನಾಟಕ ರಾಜ್ಯ ಬೀಜ ನಿಗಮ, ರಾಷ್ಟ್ರೀಯ ಬೀಜ ನಿಗಮ ಹಾಗೂ ಖಾಸಗಿ ಬೀಜ ಮಾರಾಟ ಮಳಿಗೆಗಳಲ್ಲಿ ಬಿತ್ತನೆ ಬೀಜದ ದಾಸ್ತಾನು ಮಾಡಿಕೊಳ್ಳಗಾಗಿದೆ.

ಕರ್ನಾಟಕ ರಾಜ್ಯ ಬೀಜ ನಿಗಮದಲ್ಲಿ 3,870 ಕ್ವಿಂಟಾಲ್, ರಾಷ್ಟ್ರೀಯ ಬೀಜ ನಿಗಮದಲ್ಲಿ 4,000 ಕ್ವಿಂ, ಖಾಸಗಿ ಮಾರಾಟಗಾರ ಬಳಿ 3,800 ಕ್ವಿಂಟಾಲ್ ಒಟ್ಟಾರೆಯಾಗಿ 11,670 ಕ್ವಿಂಟಾಲ್ ವಿವಿಧ ಬೆಳೆಗಳ ಬಿತ್ತನೆ ಬೀಜದ ದಾಸ್ತಾನು ಮಾಡಲಾಗಿದ್ದು, ಯಾವುದೇ ಬೀಜದ ಕೊರತೆ ಇರುವುದಿಲ್ಲ. ಜಿಲ್ಲೆಯ ಎಲ್ಲಾ ರೈತಸಂಪರ್ಕ ಕೇಂದ್ರಗಳ ಮುಖಾಂತರ ರಿಯಾಯತಿ ದರದಲ್ಲಿ ಬಿತ್ತನೆ ಬೀಜಗಳನ್ನು ಕೋವಿಡ್-19 ಮಾರ್ಗಸೂಚಿಗಳ ಅನ್ವಯ ವಿತರಿಸಲಾಗುವುದು.

ಅದ್ದರಿಂದ ರೈತಬಾಂಧವರು ಬೀಜ ಪಡೆಯುವಾಗ ಸಾಮಾಜಿಕ ಅಂತರ ಕಾಪಾಡುವುದು ಹಾಗೂ ಮಾಸ್ಕ್‍ಗಳನ್ನು ಕಡ್ಡಾಯವಾಗಿ ಧರಿಸುವುದು. ಮುಂಗಾರು ಹಂಗಾಮಿಗೆ 46,588 ಟನ್ ಯೂರಿಯಾ, 25,912 ಟನ್ ಡಿ.ಎ.ಪಿ, 57,010 ಟನ್ ಕಾಂಪ್ಲೆಕ್ಸ್ಸ್, 3,774 ಟನ್ ಎಮ್.ಒ.ಪಿ, 104 ಟನ್ ಎಸ್.ಎಸ್.ಪಿ ಹೀಗೆ ಒಟ್ಟಾರೆಯಾಗಿ 1,33,388 ಮೆಟ್ರಿಕ್ ಟನ್ ರಸಗೊಬ್ಬರದ ಅವಶ್ಯಕತೆ ಇರುತ್ತದೆ. ಈಗಾಗಲೇ 25,841 ಟನ್ ಯೂರಿಯಾ 2,871 ಟನ್ ಡಿ.ಎ.ಪಿ, 16,956 ಟನ್ ಕಾಂಪ್ಲೆಕ್ಸ್, 2,284 ಟನ್ ಎಮ್.ಒ.ಪಿ ಹೀಗೆ ಒಟ್ಟಾರೆಯಾಗಿ 48,394 ಮೆಟ್ರಿಕ್ ಟನ್ ರಸಗೊಬ್ಬರದ ದಾಸ್ತಾನನ್ನು ಕರ್ನಾಟಕ ರಾಜ್ಯ ಮಾರಾಟ ಮಹಾ ಮಂಡಳಿ ಹಾಗೂ ಖಾಸಗಿ ಮಾರಾಟಗಾರರಲ್ಲಿ ದಾಸ್ತಾನೀಕರಿಸಲಾಗಿದೆ. ರಸಗೊಬ್ಬರದ ಕೊರತೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಜಿಲ್ಲೆಯ ರೈತರು ರೈತ ಸಂಪರ್ಕ ಕೇಂದ್ರಗಳಿಂದ ಬೀಜ ಪಡೆಯಲು ಎಫ್.ಐ.ಡಿ ನಂ ಹಾಗೂ ಖಾಸಗಿ ಮಾರಾಟಗಾರರಿಂದ ರಸಗೊಬ್ಬರ ಪಡೆಯಲು ಆಧಾರ್ ಕಾರ್ಡ್ ತಪ್ಪದೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಹಾಗೂ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button