ಪ್ರಮುಖ ಸುದ್ದಿ
ಕೆ.ಎಸ್.ಈಶ್ವರಪ್ಪಗೆ ತಲೆಕೆಟ್ಟಿದೆಃ ಸಚಿವ ರೇವಣ್ಣ ಹೇಳಿಕೆ
ಕೆ.ಎಸ್.ಈಶ್ವರಪ್ಪಗೆ ತಲೆಕೆಟ್ಟಿದೆಃ ಸಚಿವ ರೇವಣ್ಣ ಹೇಳಿಕೆ
ಯಾದಗಿರಿ: ಕಾಂಗ್ರೆಸ್ ಪಕ್ಷದ ನಡಿಗೆ ಕಳ್ಳರ ನಡಿಗೆ ಎಂದು ಹೇಳಿಕೆ ನೀಡಿದ ಕೆ.ಎಸ್.ಈಶ್ವರಪ್ಪ ಅವರಿಗೆ ತಲೆಕೆಟ್ಟಿದೆ ಎಂದು ಯಾದಗಿರಿಯಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಪ್ರತಿಕ್ರಿಯೆ ನೀಡಿದರು.
ಈಶ್ವರಪ್ಪ ಒಬ್ಬ ತಲೆಕೆಟ್ಟ ನಾಯಕ, ಅವರ ಅಧಿಕಾರದ ಅವಧಿಯಲಿ ಏನೇನು ಅಭಿವೃದ್ಧಿ ಮಾಡಿದ್ದಾರೆಂದು ಜನರಿಗೆ ತಿಳಿಸಲಿ. ನಂತರ ಯಾವ ಯಾತ್ರೆಯಾದರೂ ಆರಂಭಿಸಲಿ.
ಬಿಜೆಪಿ ನಾಯಕರು ಯಾವ ಯಾತ್ರೆ ಮಾಡಿದರು ಜನರನ್ನು ಮರಳು ಮಾಡಲು ಸಾಧ್ಯವಿಲ್ಲ. ಜನರು ಅಭಿವೃದ್ಧಿ ನೋಡಿ ಮತ ಹಾಕುತ್ತಾರೆ ಎಂದರು.
ಸಿಎಂ ಸಿದ್ದ ರಾಮಯ್ಯ ಪಲಾಯನವಾದಿ ಅಲ್ಲ ಅವರೊಬ್ಬರು ಜನನಾಯಕ.
ಕಾಂಗ್ರೆಸ್ ನಾಯಕರ ಮೇಲೆ ಕೇಂದ್ರ ಸರದಕಾರ ಐಟಿ ಅಸ್ತ್ರ ಬಳಸುವ ಮೂಲಕ ವ್ಯವಸ್ಥಿತ ಸಂಚು ರೂಪಿಸಿದೆ ಎಂದು ಆರೋಪಿಸಿದರು. ಗೋಷ್ಠಿಯಲ್ಲಿ ಮಾಜಿ ಸಚಿವರಾದ ಬಾಬುರಾವ್ ಚಿಂಚನಸೂರ, ವರ್ತೂರ ಪ್ರಕಾಶ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಹುಲಕಲ್ ಇತರರು ಉಪಸ್ಥಿತರಿದ್ದರು.