ಪ್ರಮುಖ ಸುದ್ದಿ
ಕುಲಭೂಷಣ ಜಾಧವ್ ಗಲ್ಲು ಶಿಕ್ಷೆಗೆ ತಡೆ : “ಪಾಪಿಸ್ತಾನ”ಕ್ಕೆ ಮುಖಭಂಗ
ಹೇಗ್: ನೌಕಾಧಿಕಾರಿಯಾಗಿದ್ದ ಕುಲಭೂಷಣ್ ಜಾಧವ್ ಗೆ ಪಾಕಿಸ್ತಾನ ವಿಧಿಸಿದ ಗಲ್ಲು ಶಿಕ್ಷೆಗೆ ಅಂತಾರಾಷ್ಟ್ರೀಯ ನ್ಯಾಯಾಲಯ ತಡೆಯಾಗ್ನೆ ನೀಡಿದೆ. ಇಂದು ಐಸಿಜೆ ಮಹತ್ವದ ಮಧ್ಯಂತರ ಆದೇಶ ನೀಡಿದ್ದು, ಪಾಕಿಸ್ತಾನದಲ್ಲಿರುವ ಕುಲಭೂಷಣ್ ಜಾಧವ್ ಗೆ ರಾಜತಾಂತ್ರಿಕ ನೆರವು ಪಡೆಯುವುದಕ್ಕೆ ಅನುಮತಿ ಸಿಕ್ಕಿದೆ. ಐಸಿಜೆ ನೀಡಿರುವ ತೀರ್ಪಿನಿಂದಾಗಿ ಪಾಕ್ ಗೆ ಮುಖಭಂಗವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಗೂಢಚಾರ ಹಾಗೂ ಉಗ್ರವಾದದ ಆರೋಪದ ಮೇಲೆ ಪಾಕಿಸ್ತಾನ ಮಿಲಿಟರಿ ಜಾಧವ್ ರನ್ನು ಬಂಧಿಸಿತ್ತು. ಪಾಕಿಸ್ತಾನ ನ್ಯಾಯಾಲಯ ಮರಣದಂಡನೆಯನ್ನು ವಿಧಿಸಿತ್ತು. ಇದು ಭಾರತ ಮತ್ತು ಪಾಕಿಸ್ತಾನ ನಡುವಿನ ಸಮರಕ್ಕೆ ತುಪ್ಪ ಸುರಿದಿತ್ತು. ಇಂದು ಐಸಿಜೆ ನೀಡಿದ ತೀರ್ಪಿನಿಂದಾಗಿ ಭಾರತಕ್ಕೆ ದೊಡ್ಡ ಗೆಲುವು ದಕ್ಕಿದಂತಾಗಿದೆ.