ಪ್ರಮುಖ ಸುದ್ದಿ
ರಾತ್ರಿ ಯುವಕನೋರ್ವನ ಬರ್ಬರ ಹತ್ಯೆ
ಮಂಗಳೂರಲ್ಲಿ ಯುವಕನ ಬರ್ಬರ ಹತ್ಯೆ
ಮಂಗಳೂರು: ಯುವಕನ ಬರ್ಬರ ಹತ್ಯೆಗೈದ ಘಟನೆ ರವಿವಾರ ತಡರಾತ್ರಿ ನಗರದಲ್ಲಿ ನಡೆದಿದೆ.
ನಗರದ ಗೋರಿಗುಡ್ಡ ಎಂಬಲ್ಲಿ ಘಟನೆ ನಡೆದಿದ್ದು, ಮೆರ್ಲಿಕ್ ಡಿಸೋಜಾ(21) ದುಷ್ಕರ್ಮಿಗಳಿಂದ ಹತ್ಯೆಯಾದ ಯುವಕ ಎಂದು ತಿಳಿದು ಬಂದಿದೆ.
ಹತ್ಯೆಗೊಳಗಾದ ಯುವಕ ಡಿಸೋಜಾ 2016ರಲ್ಲಿ ಸಂದೀಪ್ ಶೆಟ್ಟಿ ಎಂಬಾತನ ಹತ್ಯೆ ಪ್ರಕರಣದ ಆರೋಪಿಯಾಗಿದ್ದ ಎನ್ನಲಾಗಿದೆ.ಹೀಗಾಗಿ ಪ್ರಕರಣ ಕುರಿತು ಪೊಲೀಸರು ತೀವ್ರ ತನಿಖೆಕೈಗೊಂಡಿದ್ದಾರೆ.
ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಇಲ್ಲಿನ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾನೂನು ಕ್ರಮಕೈಗೊಂಡಿದ್ದಾರೆ.