ಟೆಂಟ್ನಲ್ಲಿ ಬ್ಲೂಫಿಲ್ಮಂ ತೋರಿಸಿ, ರೌಡಿಗಳಿಗೆ ಮಧ್ಯ ಒಯ್ದು ಕೊಟ್ಟವನಲ್ಲ ನಾನು – ಕುಮಾರಸ್ವಾಮಿ ಟಾಂಗ್
ಪರೋಕ್ಷವಾಗಿ ಡಿಕೆಶಿಗೆ ಟಾಂಗ್ ನೀಡಿದ ಕುಮಾರಸ್ವಾಮಿ
ಟೆಂಟ್ನಲ್ಲಿ ಬ್ಲೂಫಿಲ್ಮಂ ತೋರಿಸಿ, ರೌಡಿಗಳಿಗೆ ಮಧ್ಯ ಒಯ್ದು ಕೊಟ್ಟವನಲ್ಲ ನಾನು – ಕುಮಾರಸ್ವಾಮಿ ಟಾಂಗ್
ಪರೋಕ್ಷವಾಗಿ ಡಿಕೆಶಿಗೆ ಟಾಂಗ್ ನೀಡಿದ ಕುಮಾರಸ್ವಾಮಿ
ವಿವಿ ಡೆಸ್ಕ್ಃ ವರ್ಗಾವಣೆ ದಂಧೆಯಲ್ಲಿ ರಾಜ್ಯ ಸರ್ಕಾರ ಕೋಟಿಗಟ್ಟಲೇ ದುಡ್ಡು ಮಾಡ್ತಿದೆ. CMO corrupt Mony office ಆಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಲವಾದ ಆರೋಪ ಮಾಡಿದ್ದರು.
ಕುಮಾರಸ್ವಾಮಿ ಆರೋಪವನ್ನು ಡಿಕೆಶಿ ಸೇರಿದಂತೆ ಕೈ ನಾಯಕರು ಇದು ಹಿಟ್ ಆಂಡ್ ರನ್ ಆಗಿದೆ. ದಾಖಲೆ ಇಲ್ಲದೆ ಆರೋಪ ಮಾಡುವದು ಓರ್ವ ಮಾಜಿ ಸಿಎಂಗೆ ಶೋಭೆ ತರುವಂತದ್ದಲ್ಲ ಎಂದು ಪ್ರತ್ಯಾರೋಪ ಮಾಡಿದ್ದೆರು.
ಆದರೆ ಇಂದು ಕುಮಾರಸ್ವಾಮಿ ಅವರು ಗಾಳಿಯಲ್ಲಿ ಗುಂಡು ಹೊಡೆಯಲು ನಾನೇನು ಬೀದಿಯಲಿ ಹೋಗುವವನಲ್ಲ.ಅಲ್ಲದೆ ಯಾವುದೇ ರೌಡಿಗಳಿಗೆ ಮಧ್ಯ ತಂದು ಕೊಡುವವನಲ್ಲ,ಗ್ರಾಮದ ಟೆಂಟ್ ನಲ್ಲಿ ಬ್ಲೂಫಿಲ್ಮಂ ತೋರಿಸಿ ಬೆಳೆದವನಲ್ಲ ಎಂದು ಪರೋಕ್ಷವಾಗಿ ಉಪ ಮುಖ್ಯಮಂತ್ರಿ ಡಿಕೆಶಿ ಅವರಿಗೆ ಅವರು ಟಾಂಗ್ ನೀಡಿದರು.
ಅಧೀನವೇಶನದಲ್ಲಿ ದಿನಕ್ಕೊಂದು ಬಾಂಬ್ ಸಿಡಿಸುವ ಮೂಲಕ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರವನ್ನು ಬೆಂಡೆತ್ತುತ್ತಿರುವದು ಕಂಡು ಬರುತ್ತಿದೆ. ಇಂದು ಪೆನ್‌ಡ್ರೈವ್ ಪ್ರದರ್ಶಿಸುವ ಮೂಲಕ ಎಲ್ಲಾ ವರ್ಗಾವಣೆ ಅಕ್ರಮ ದಂಧೆಗೆ ಸಂಬಂಧಿಸಿದ ದಾಖಲೆ ಇದರಲ್ಲಿವೆ ಎಂದು ಘರ್ಜಿಸಿದರು.