ನೀರು ಕೇಳಿದವರಿಗೆ ಹಾಲು ನೀಡಿದ ಸಂಸ್ಕೃತಿ ನಮ್ಮದು: ಸಿದ್ಧರಾಮಾನಂದ ಶ್ರೀ
ನೀರು ಕೇಳಿದವರಿಗೆ ಹಾಲು ನೀಡಿದ ಸಂಸ್ಕೃತಿ ನಮ್ಮದು: ಸಿದ್ಧರಾಮಾನಂದ ಶ್ರೀ
ಹಸಿರು ಮತ್ತು ಹಾಲುಮತ ಸಂಸ್ಕೃತಿ ಯಾತ್ರೆಗೆ ಚಾಲನೆ
ಶಹಾಪುರ: ಕಾಯಕ ಸಂಸ್ಕೃತಿ ಆಚರಣೆ ಮೂಲಕ ಕೆಲಸದಲ್ಲಿ ಸಂತೃಪ್ತಿ ಜೊತೆಗೆ ದೈವಾನುಭೂತಿ ಹೊಂದಿದ ಹಾಲುಮತ ಸಮಾಜ ನೀರು ಕೇಳಲು ಬಂದವರಿಗೆ ಹಾಲುಕೊಟ್ಟು ಬೆಳೆಸಿದ ಕೀರ್ತಿ ಹೊಂದಿದೆ ಎಂದು ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಕಲಬುರ್ಗಿ ವಿಭಾಗದ ಪೀಠಾಧ್ಯಕ್ಷ ಸಿದ್ಧರಾಮಾನಂದ ಮಹಾಸ್ವಾಮೀಜಿ ತಿಳಿಸಿದರು.
ನಗರದ ಹಳೆಪೇಟೆಯ ವಗ್ಗರಾಯಣ್ಣ ಶರಣರ ಸನ್ನಿಧಾನದ ಆವರಣದಲ್ಲಿ 9 ನೇ ವರ್ಷದ ಹಸಿರು ಮತ್ತು ಹಾಲುಮತ ಸಂಸ್ಕೃತಿ ಜಾಗೃತಿ ಯಾತ್ರೆಗೆ ಚಾಲನೆ ನೀಡಿ, ನಂತರ ಆಯೋಜಿಸಿದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾಜದ ಆರಾಧ್ಯ ದೇವರಾದ ಶ್ರೀ ಮಾಳಿಂಗರಾಯ, ಬೀರ ದೇವರು, ದಾರ್ಶನಿಕ ಕನಕದಾಸರಂಥ ದಾಸ ಶ್ರೇಷ್ಠರ ಪರಂಪರೆ ಹೊಂದಿದ ಹಾಲುಮತ ಸಮುದಾಯ ಮನುಷ್ಯ ಸಂಸ್ಕೃತಿಯ ಕಾಳಜಿ ಮತ್ತು ಜೀವ ಸಂಕುಲದ ಉಸಿರಾಗಿದೆ. ಕಾರಣ ಸಮಾಜ ಬಾಂಧವರು ನಿಸರ್ಗ ರಕ್ಷಣೆಗೆ ಮುಂದಾಗುವ ಮೂಲಕ ಸಮುದಾಯದ ಸಂಸ್ಕೃತಿ ಉಳಿವಿಗೆ ಸ್ಪಂಧನೆ ನೀಡಬೇಕು.
ಮನುಷ್ಯತ್ವಕ್ಕಾಗಿ ಸಂಸ್ಕøತಿ ಮುಖ್ಯವಾಗಿದ್ದು ಪ್ರತಿಯೊಬ್ಬರು ಇಂದಿನ ಹೊಸ ಸಮಾಜದಲ್ಲಿ ಸದಾಚಾರ ಸಂಪನ್ನರಾಗಬೇಕು. ಕ್ಷಮಾಗುಣ, ಸ್ಪಂಧನಾಗುಣ, ಪ್ರೀತಿ ವಿಶ್ವಾಸ ಮತ್ತು ನಂಬಿದ ದೈವ ದೇವರಲ್ಲಿ ಶ್ರದ್ಧೆ ಭಕ್ತಿಯನಿಟ್ಟು ಮುನ್ನಡೆಯಬೇಕು. ಇದು ಭಂಡಾರ ಜ್ಞಾನದ ಸಂಕೇತವೆಂದು ತಿಳಿಯಬೇಕು. ಪ್ರತಿಯೊಬ್ಬರು ದುಶ್ಚಟಗಳನ್ನು ತ್ಯೇಜಿಸುವ ಸಂಕಲ್ಪವನ್ನು ಮಾಡಬೇಕು.
ಮತ್ತು ಪ್ರಕೃತಿ ದೇವರನ್ನು ಪೂಜಿಸುವ ಪ್ರತಿಯೊಬ್ಬರು ಪ್ರಕೃತಿಯನ್ನು ಮರೆಯುತ್ತಿದ್ದೇವೆ. ಆದ್ದರಿಂದ ಅಸಮರ್ಪಕ ಮಳೆಗಾಲದಿಂದ ಏರುತ್ತಿರುವ ತಾಪಮಾನ, ಕುಸಿಯುತ್ತಿರುವ ಅಂತರ್ಜಲದಿಂದ ಪರಿಸರದಲ್ಲಿ ಅಸಮತೋಲನೆ ಉಂಟಾಗುತ್ತಿದೆ.
ಮಾನವ ಜೀವನದ ಜೊತೆ ಸಮಸ್ತ ಪ್ರಾಣಿಗಳಿಗೂ ಇದರಿಂದ ದುಷ್ಪರಿಣಾಮ ಉಂಟಾಗುತ್ತಿದೆ. ಬರುವ ದಿನಗಳಲ್ಲಿ ಮಕ್ಕಳನ್ನು ಪೋಷಿಸಿದಂತೆ ಗಿಡ ಮರಗಳನ್ನು ಬೆಳೆಸಬೇಕು. ಶ್ರಾವಣ ಮಾಸ ಪರ್ಯಂತ 1 ತಿಂಗಳು ಸಂಸ್ಕøತಿಯ ರಕ್ಷಣೆ, ಪರಿಸರ ಕಾಳಜಿಯಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದಲೇ ಜಾಗೃತಿ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಯಾತ್ರಾ ಉದ್ದೇಶ ಅರಿತು ಪ್ರತಿಯೊಂದು ಗ್ರಾಮೀಣ ಭಾಗದಲ್ಲಿ ಯುವಕರು ಪರಿಸರ ರಕ್ಷಣೆಗೆ ಮುಂದಾಗಬೇಕು. ಕೈಲಾ ಸೇವೆ ಸಲ್ಲಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಶ್ರೀಗಳು ಸಸಿಗಳನ್ನು ವಿತರಿಸಿ ಅವುಗಳ ರಕ್ಷಣೆ ಮಾಡುವಂತೆ ತಿಳಿಸಿದರು. ಕಾರ್ಯಕ್ರಮದಲ್ಲಿ ಕನಕಗುರು ಪೀಠದ ನಿಂಗಬೀರದೇವರು, ನಗರದ ಸಿದ್ಧರಾಮಯ್ಯ ಗುರುವಿನ, ಕುರುಬ ಸಮಾಜದ ಹಿರಿಯ ಮುಖಂಡರಾದ ಬಸವರಾಜ ವಿಭೂತಿಹಳ್ಳಿ, ಮಾಜಿ ಎಂ.ಎಲ್.ಸಿ ಅಮಾತೆಪ್ಪ ಕಂದಕೂರ, ರೈತ ಮುಖಂಡ ಶರಣಪ್ಪ ಸಲಾದಪುರ, ಡಾ|| ಭೀಮಣ್ಣ ಮೇಟಿ, ತಾಲೂಕಾ ಕುರುಬ ಸಮಾಜದ ಅಧ್ಯಕ್ಷ ಸಾಯಬಣ್ಣ ಹೊರಕೇರಿ, ಮುಖಂಡ ವಿಠಲ ವಗ್ಗಿ, ಶಾಂತಗೌಡ ನಾಗನಟಿಗಿ, ಯಮನಪ್ಪ ಭಪ್ಪರಗಿ, ಮಲ್ಲಿಕಾರ್ಜುನ ಕಂದಕೂರು, ಅಯ್ಯಣ್ಣ ಇನಾಂದಾರ, ಮಾನಪ್ಪ ಅರಿಕೇರಿ, ನಾಗಪ್ಪ ಕಣಿಗಲ್, ಹೈಯಾಳಪ್ಪ, ಮುದಕಪ್ಪ ಜಂಗಳಿ, ಅಶೋಕ ದಿನ್ನಿ, ಬಸವರಾಜ ವಗ್ಗನರ, ನಾಗಪ್ಪ ವಗ್ಗನರ, ರಾಯಣ್ಣ ಕನ್ಯಾಕೋಳೂರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೂ ಮುಂಚೆ ನಗರದ ಸಿ.ಬಿ.ಕಮಾನದಿಂದ ರಾಯಣ್ಣ ದೇವರ ಸನ್ನಿಧಾನದವರೆಗೂ ಯಾತ್ರಾ ಮೆರವಣಿಗೆ ಜರುಗಿತು.