ಕ್ಯಾಂಪಸ್ ಕಲರವ

ರೈತ, ಕಾರ್ಮಿಕ ವರ್ಗವನ್ನು ಕಡೆಗಣಿಸಿದ ಕೇಂದ್ರ: ಆಕ್ರೋಶ

ಕಾರ್ಮಿಕರಿಂದ ಎರಡನೇ ದಿನದ ಪ್ರತಿಭಟನೆ

ಯಾದಗಿರಿ, ಶಹಾಪುರ: ರೈತರು ಮತ್ತು ಕಾರ್ಮಿಕರನ್ನು ಕಡೆಗಣಿಸಿದ ಪರಿಣಾಮ ಇತ್ತೀಚೆಗೆ ಪಂಚರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲನುಭವಿಸಿತು.
ಆದಾಗ್ಯು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇನ್ನೂ ಬುದ್ಧಿ ಕಲಿತಿಲ್ಲವೆಂದು ಕರ್ನಾಟಕ ರಾಜ್ಯ ರೈತ ಸಂಘದ ಹಸಿರು ಸೇನೆಯ ಮುಖಂಡ ಮಲ್ಲಿಕಾರ್ಜುನ ಸತ್ಯಂಪೇಟೆ ಆಕ್ರೋಶ ವ್ಯಕ್ತಪಡಿಸಿದರು.

ಬುಧವಾರ ನಗರದಲ್ಲಿ ಬಿಸಿಯೂಟ, ಅಂಗನವಾಡಿ, ಆಶಾ ಕಾರ್ಯಕರ್ತರು ಸೇರಿದಂತೆ ಹಲವು ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳು ನೇತೃತ್ವದಲ್ಲಿ ಅಖಿಲ ಭಾರತ ಬಂದ್ ಕರೆ ಹಿನ್ನಲೆಯಲ್ಲಿ ನಡೆದ ಎರಡನೇ ದಿನ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದರು.

ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಇಲ್ಲ. ರೈತರ ಸಾಲಮನ್ನಾ ಹೆಸರಲ್ಲಿ ಬರೀ ಆಶ್ವಾಸನೆಗಳೇ ನಡೆದಿದ್ದು, ಕಾರ್ಮಿಕರ ರಕ್ಷಣೆಯನ್ನು ಮರೆತು ಬಿಟ್ಟಿದ್ದಾರೆ, ಬರುವ ದಿನಗಳಲ್ಲಿ ಕಾರ್ಮಿಕರ, ರೈತರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಹೋರಾಟ ಇನ್ನೂ ಹೆಚ್ಚಿನ ಸ್ವರೂಪ ಪಡೆಯಲಿದೆ ಎಂದರು.

ಎರಡನೇ ದಿನ ಪ್ರತಿಭಟನೆಯ ಬಿಸಿ ಸ್ವಲ್ಪ ಕಡಿಮೆಯಾಗಿತ್ತು ಎನ್ನಬಹುದು. ಎಂದಿನಂತೆ ಶಾಲಾ ಕಾಲೇಜು ಜರುಗಿದವು. ಅಂಗಡಿ ಮುಂಗಟ್ಟು ಸೇರಿದಂತೆ ಯಾವುದೇ ಸಂಚಾರವು ಸುಗಮವಾಗಿತ್ತು.

ಈ ಸಂದರ್ಭದಲ್ಲಿ ಕ.ಪ್ರಾಂ.ಕೃ.ಕೂ.ಸಂಘ ಜಿಲ್ಲಾಧ್ಯಕ್ಷ ದಾವಲಸಾಬ ನದಾಫ್, ಅಂಗನವಾಡಿ ನೌಕರರ ಸಂಘ ಅಧ್ಯಕ್ಷ ಬಸಲಿಂಗಮ್ಮ ನಾಟೇಕಾರ, ಸಾರಿಗೆ ನೌಕರರ ಸಂಘ ಅಧ್ಯಕ್ಷ ಮಹಾದೇವಪ್ಪ ಪಾಟೀಲ, ಕಟ್ಟಡ ಕಾರ್ಮಿಕರ ಸಂಘ ಸಂಘಟನಾ ಕಾರ್ಯದರ್ಶಿ ಸೈದಪ್ಪ.ಹೆಚ್.ಪಿ, ಮುಖಂಡ ಮಲ್ಲಯ್ಯ ಪೋಲಂಪಲ್ಲಿ, ಮಡಿವಾಳಮ್ಮ ಹೂಗಾರ, ಭೀಮರಡ್ಡಿ, ಕಟ್ಟಡ ಕಾರ್ಮಿಕರ ಸಂಘ ಮಹ್ಮದ್ ಯುಸೂಫ್, ತಾಲ್ಲೂಕಾ ಅಧ್ಯಕ್ಷ ಸವಿತಾ ಪೂಜಾರಿ, ಯಮನಮ್ಮ ಕಸನ್, ಶಿವಾನಂದಸ್ವಾಮಿ ಗೋಗಿ, ದೇವಕ್ಕಿ, ಚಂದ್ರರಡ್ಡಿ ಇಬ್ರಾಹಿಂಪುರಸೇರಿದಂತೆ ಇತರರು ಭಾಗವಹಿಸದ್ದರು.

Related Articles

Leave a Reply

Your email address will not be published. Required fields are marked *

Back to top button