ಪ್ರಮುಖ ಸುದ್ದಿ
ಅಪ್ರಾಪ್ತ ಬಾಲಕಿ ಮೇಲೆ ಗ್ಯಾಂಗ್ ರೇಪ್, ಬಂಟ್ವಾಳ್ ಠಾಣಾ ವ್ಯಾಪ್ತಿ ಘಟನೆ

ಅಪ್ರಾಪ್ತ ಬಾಲಕಿ ಮೇಲೆ ಗ್ಯಾಂಗ್ ರೇಪ್, ಬಂಟ್ವಾಳ್ ಠಾಣಾ ವ್ಯಾಪ್ತಿ ಘಟನೆ
ದಕ್ಷಿಣ ಕನ್ನಡಃ ಅಪ್ರಾಪ್ತ ಬಾಲಕಿಯನ್ನು ಕಿಡ್ನ್ಯಾಪ್ ಮಾಡಿ ಜಿಲ್ಲೆಯ ಬಂಟ್ವಾಳ್ ತಾಲೂಕಿನ ಗ್ರಾಮವೊಂದಕ್ಕೆ ಐವರು ಕಾಮುಕರು ಹೊತ್ತೊಯ್ದು ಕೋಣೆಯೊಂದರಲ್ಲಿ ಬಲತ್ಕಾರ ಮಾಡಿದ ಘಟನೆ ನಡೆದಿದೆ.
ರಾಜ್ಯದಲ್ಲಿ ಅತ್ಯಾಚಾರ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿದ್ದು, ನಾಗರಿಕರು ತಲೆ ತಗ್ಗಿಸುವಂತ ಸ್ಥಿತಿ ನಿರ್ಮಾಣವಾಗಿದೆ.
ಐವರು ಕಾಮುಕರು ಬಾಲಕಿ ಮೇಲೆ ಅತ್ಯಚಾರ ಎಸಗಿದ್ದು, ಈ ಕುರಿತು ಬಂಟ್ವಾಳ ನಗರ ಠಾಣೆಯಲ್ಲಿ ಫೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಕಾಮುಕರ ಅಟ್ಟಹಾಸ ಮುಂದುವರೆದಿದ್ದು, ಕಠಿಣ ಕಾನೂನು ಜಾರಿಗೆ ಧ್ವನಿ ಕೇಳಿ ಬರುತ್ತಿದೆ.