Home

ಸಂವಿಧಾನ ವಿರೋಧಿಗಳು ಯಾರೇ ಆಗಲಿ ಗಡಿ ಪಾರು ಮಾಡಿ: ಶರಣು ಗದ್ದುಗೆ

ಸಂವಿಧಾನ ವಿರೋಧಿಗಳು ಯಾರೇ ಆಗಲಿ ಗಡಿ ಪಾರು ಮಾಡಿ: ಶರಣು ಗದ್ದುಗೆ

ಶಹಾಪುರ‌: ಸರ್ಕಾರಿ ಅಧಿಕಾರಿಗಳ ಮೇಲೆ ಗುಂಡಾವರ್ತನೆ ಮಾಡಿ ಹಲ್ಲೆ ನಡೆಸಿದವರು ಯಾರೇ ಆಗಿರಲಿ ಅಂಥವರನ್ನು ಬಂಧಿಸಿ, ಗಡಿ ಪಾರು ಶಿಕ್ಷೆಗೆ ಗುರಿಪಡಿಸಬೇಕೆಂದು ಕರವೇ ಉತ್ತರ ಕರ್ನಾಟಕ ಅದ್ಯಕ್ಷ ಡಾ.ಶರಣು ಬಿ. ಗದ್ದುಗೆ ಆಗ್ರಹಿಸಿದರು.

ವಿನಯವಾಣಿಯೊಂದಿಗೆ ಮಾತನಾಡಿದ ಅವರು, ಬೀದರ ಜಿಲ್ಲೆಯ ಹುಮನಾಬಾದ ತಾಲ್ಲೂಕಿನ ತಹಸೀಲ್ದಾರರಾದ ಡಾ|| ಪ್ರದೀಪಕುಮಾರ ಹಿರೇಮಠ ಅವರ ಮೇಲೆ ಸಮಾಜ ಘಾತಕರು ನಡೆಸಿದ ಹಲ್ಲೆ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಉದ್ದೇಶದಿಂದ್ದಾಗಿದ್ದು, ಸಂವಿಧಾನ ಶಿಲ್ಪಿ ಡಾ || ಬಿ.ಆರ್. ಅಂಬೇಡ್ಕರ್ ರವರ ಹೆಸರನ್ನು ಹೇಳಿಕೊಂಡು ಸಂವಿಧಾನ ವಿರುದ್ದವಾಗಿ ಓರ್ವ ತಾಲೂಕು ದಂಡಾಧಿಕಾರಿ ಮೇಲೆಯೇ ಹಲ್ಲೆ ಮಾಡಿರುವದು ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದಿರುವ ಘಟನೆಯಾಗಿದೆ ಇದು ಖಂಡನೀಯವಾಗಿದೆ.

ಅಲ್ಲದೆ ಡಾ || ಬಿ.ಆರ್,ಅಂಬೇಡ್ಕರವರ ಹೆಸರಿಗೆ ದಕ್ಕೆಯನ್ನು ಉಂಟು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅದೇ ರೀತಿ ರಾಯಚೂರ‌ ನ್ಯಾಯಾಲಯದಲ್ಲಿ ಜ.26 ಗಣರಾಜ್ಯೋತ್ಸವ ವೇಳೆ ಡಾ || ಬಿ.ಆರ್,ಅಂಬೇಡ್ಕರವರ ಭಾವ ಚಿತ್ರವನ್ನು ಅಲ್ಲಿನ ನ್ಯಾಯಧೀಶರೊಬ್ಬರು ತೆಗೆಸಿರುವ ಕೃತ್ಯ ಸತ್ಯವಾಗಿದ್ದರೆ ಅದು ಖಂಡನರ್ಹವಾಗಿದೆ.

ನ್ಯಾಯಧೀಶರಾಗಿ ಅಪಾರ ಕಾನೂನು ಜ್ಞಾನ‌, ಸಂವಿಧಾನದ‌ ಆಶಯಗಳನ್ನು ಎತ್ತಿ ಹಿಡಿಯುವವರೇ ಇಂಥ ದುರ್ವತನೆ ಎಸಗಿದ್ದರೆ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲೇಬೇಕು.

ಸತ್ಯಾಸತ್ಯತೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಅಲ್ಲದೆ ಮುಖ್ಯವಾಗಿ ಇಂಥವರ ವಿರುದ್ಧ ಕ್ರಮಕೈಗೊಂಡಿರುವದು‌ ಸಾರ್ವಜನಿಕವಾಗಿ ನಾಗರಿಕರ ಗಮನಕ್ಕೆ ಬರುವಂತಾಗಬೇಕು‌ ಆಗ ಮಾತ್ರ ಮಾಡಿದ ತಪ್ಪಿನ ಅರಿವುಂಟಾಗಲಿದೆ ಅಲ್ಲದೆ‌ ಇನ್ನುಳಿದ ಕುಚೇಷ್ಠಿಗಳಿಗೂ ಇದು ಎಚ್ಚರಿಕೆ ಗಂಟೆಯಾಗಲಿದೆ.

ಬುದ್ದ,‌ ಬಸವಣ್ಣ ಮತ್ತು ಡಾ || ಬಿ.ಆರ್. ಅಂಬೇಡ್ಕರಂಥ ಮಹಾತ್ಮರ‌ ಹೆಸರಿಗೆ ಕಳಂಕ ತರುವ ಕೆಲಸ ಮಾಡಬಾರದು. ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ನಡೆಯಬೆಕಿದೆ.

ಸಂಘ, ಸಂಸ್ಥೆ ಮುಖಂಡರಾಗಲಿ ಯಾವುದೇ ಪಕ್ಷದ‌ಪ್ರಮುಖರಾಗಲಿ ಅಥವಾ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ತಮ್ಮ ಜವಬ್ದಾರಿ ಅರಿತು ಉತ್ತಮ ನಡತೆ ಮೂಲಕ‌ಗಮನ ಸೆಳೆಯುವಂತೆ ನಡೆದುಕೊಳ್ಳಬೆಕು.

ದೇಶದ, ಸಮಾಜದ ಏಳಿಗೆಗಾಗಿ ಸರ್ವರೂ ಸಮಾನರು‌ ಮೇಲು ಕೀಳೆನ್ನದೆ ಬೇಧಭಾವ ಮಾಡದೆ ಸಂವಿಧಾನದ ಆಶಯದಂತೆ‌‌ ಸರ್ವ ಧರ್ಮದವರೂ ನಡೆದುಕೊಳ್ಳುವ ಮೂಲಕ ಮ‌ತ್ತು ತಪ್ಪು ಹಾದಿ ಹಿಡಿದ ಯಾರೇ ಆಗಿರಲಿ‌ ಅದನ್ನು ಖಂಡಿಸುವ ಮೂಲಕ ಉತ್ತಮ ಸಮಾಜ ನಿರ್ಮಿಸಲು ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button