ಪ್ರಮುಖ ಸುದ್ದಿ
ಶಹಾಪುರದಲ್ಲಿ ಪೊಲೀಸರ ಪಥ ಸಂಚಲನ
ಟಿಪ್ಪು ಜಯಂತಿಃ ಮುಂಜಾಗೃತವಾಗಿ ಪೊಲೀಸರಿಂದ ಕವಾಯತ್
ಶಹಾಪುರಃ ನ.10 ರಂದು ಟಿಪ್ಪು ಸುಲ್ತಾನ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಯಾವುದೆ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗೃತಾ ಕ್ರಮವಾಗಿ ಶಾಂತಿ ಸುವ್ಯವಸ್ಥೆ ಕಾಪಾಡಲು ನಗರದಲ್ಲಿ ಪೋಲಿಸರು ಬುಧವಾರ ಸಂಜೆ ಪಥ ಸಂಚಲನ ನಡೆಸಿದರು.
ನಗರದ ಮಹಾತ್ಮ ಚರಬಸವೇಶ್ವರ ಕಮಾನದಿಂದ ಪ್ರಾರಂಭವಾದ ಪಥ ಸಂಚಲನ ನಗರದ ದಿಗ್ಗಿ ಬೇಸ್ ಮಾರ್ಗವಾಗಿ ಗಾಂಧೀ ಚೌಕ್, ಮೋಚಿಗಡ್ಡಾ, ಆಸರ ಮೋಹಲ್ಲಾ, ಕನ್ಯಾಕೋಳೂರ ಅಗಸಿ, ಬಸವೇಶ್ವರ ವೃತ್ತ, ಹಳಿಸಗರ, ದೇವಿನಗರ ಮೂಲಕ ಶಹಾಪುರ ಪೇಠನ್ನು ತಲುಪಿತು.
ಎಎಸ್‍ಪಿ ಶಿವಪ್ರಕಾಶ ದೇವರಾಜ ಪಥ ಸಂಚಲನಕ್ಕೆ ಚಾಲನೆ ನೀಡಿದರು. ಪಥ ಸಂಚಲನದಲ್ಲಿ ಗ್ರಾಮೀಣ ಸಿಪಿಐ ವೀರಣ್ಣ ದೊಡ್ಮನಿ, ನಗರ ಠಾಣೆಯ ಸಿಪಿಐ ನಾಗರಾಜ ಜಿ, ಗೋಗಿ ಪಿಎಸ್‍ಐ ಕೃಷ್ಣ ಸುಬೇದಾರ, ಭೀ.ಗುಡಿ ಪಿಎಸ್‍ಐ ಸೇರಿದಂತೆ ಸುಮಾರು 500 ಜನ ಪೊಲೀಸರು ಮತ್ತು ಜಿಲ್ಲಾ ಮೀಸಲು ಪಡೆ ಭಾಗಿಯಾಗಿತ್ತು.