ಶಹಾಪುರಃ ಸಿರಿಧಾನ್ಯದಿಂದ ಆರೋಗ್ಯ ಮತ್ತು ಐಶ್ವರ್ಯ ವೃದ್ಧಿ – ಕುಲಕರ್ಣಿ
ಆತ್ಮ ನಿರ್ಭರ- ಸಿರಿಧಾನ್ಯಗಳ ವರ್ಷ ಕಾರ್ಯಕ್ರಮ
ಆತ್ಮ ನಿರ್ಭರ- ಸಿರಿಧಾನ್ಯಗಳ ವರ್ಷ ಕಾರ್ಯಕ್ರಮ
yadgiri,ಶಹಾಪುರಃ ಸಿರಿಧಾನ್ಯ ಬೆಳೆಗಳು ನಮ್ಮ ದೇಶದ ಕೃಷಿಯ ಮೂಲ ಶ್ರೀಮಂತಿಕೆ ಬೆಳೆಗಳಾಗಿವೆ. ಸಿರಿಧಾನ್ಯ ಸೇವನೆಯಿಂದ ಆರೋಗ್ಯವು ವೃದ್ಧಿ ಮತ್ತು ಐಶ್ವರ್ಯ ಬೆಳವಣಿಗೆಗೂ ಅವುಗಳ ಪೂರಕವಾಗಿವೆ ಈ ವಿಷಯವನ್ನು ನಮ್ಮ ಪೂರ್ವಜರು ಕಂಡುಕೊಂಡಿದ್ದರು ಎಂದು ಕೃಷಿ ವಿಜ್ಞಾನಿ ಶ್ಯಾಮರಾವ್ ಕುಲಕರ್ಣಿ ತಿಳಿಸಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಆತ್ಮನಿರ್ಭರ ಮತ್ತು ಸಿರಿಧಾನ್ಯಗಳ ವರ್ಷ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ಈ ವರ್ಷವನ್ನು ಸಿರಿಧಾನ್ಯಗಳ ವರ್ಷವೆಂದು ಪ್ರಕಟಿಸಿದೆ. ಸಿರಿಧಾನ್ಯ ಆರೋಗ್ಯ ಸಿರಿವಂತಿಕೆಯೊಂದಿಗೆ ಸಾಮಾಜಿಕ ಸ್ಥಿತಿವಂತಿಕೆಗೆ ಸಹಕಾರಿಯಾಗಲಿದೆ. ಪ್ರಸ್ತುತ ಸಿರಿಧಾನ್ಯಗಳಿಗೆ ಬೇಡಿಕೆ ಜಾಸ್ತಿ ಇದೆ. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಿರಿಧಾನ್ಯ ಬೆಳೆಗಳ ಅಭಿವೃದ್ಧಿಗೆ ಒತ್ತು ನೀಡುತ್ತಿದೆ. ಈ ಕುರಿತು ಗ್ರಾಮೀಣ ಭಾಗದಲ್ಲಿ ರೈತಾಪಿ ಜನರ ಮನೆ ಬಾಗಿಲಿಗೆ ಈ ಕುರಿತು ಸಮರ್ಪಕವಾಗಿ ತಿಳಿಸಬೇಕಿದೆ. ಸಿರಿಧಾನ್ಯ ಮಹತ್ವ, ಸಂಸ್ಕರಣೆ, ಮತ್ತು ಮೌಲ್ಯ ವರ್ಧನೆ ಕುರಿತು ಅರಿಯಬೇಕಿದೆ. ಮತ್ತು ಅದನ್ನು ತಿಳಿ ಹೇಳಬೇಕಿದೆ. ಸಿರಿಧಾನ್ಯ ಬೆಳೆಗೆ ಆದ್ಯತೆ ನೀಡುವದು ಪ್ರಸ್ತುತ ಕಾಲದಲ್ಲಿ ಅಗತ್ಯವಿದೆ. ಅಲ್ಲದೆ ಕೇಂದ್ರ ಸರ್ಕಾರ ಆತ್ಮನಿರ್ಭರ ಯೋಜನೆಯಡಿ ಆಯಾ ಜಿಲ್ಲೆಯ ಪ್ರಮುಖ ಬೆಳೆಯನ್ನು ಗುರುತಿಸಿ ಅದರ ಅಭೀವೃದ್ಧಿಗೆ ಒತ್ತು ನೀಡಬೇಕೆಂದು ಸೂಚಿಸಿದೆ. ಆ ಹಿನ್ನೆಲೆಯಲ್ಲಿ ರೈತರು ಜಾಗೃತಗೊಂಡಲ್ಲಿ ಭಾರತ ಇಡಿ ವಿಶ್ವದಲ್ಲಿಯೇ ಕೃಷಿಯಲ್ಲಿ ಮಾದರಿ ದೇಶವಾಗಿ ಹೊರಹೊಮ್ಮಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಶೇಖರ ದೊರೆ ವಹಿಸಿದ್ದರು. ರೈತ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯ ಧರ್ಮಣ್ಣ ದೊಡ್ಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡರಾದ ನಾಗನಗೌಡ ರಾಯಚೂರ, ಬಿಜೆಪಿ ತಾಲೂಕು ಅಧ್ಯಕ್ಷ ರಾಜೂಗೌಡ ಉಕ್ಕಿನಾಳ, ದೇವೂ ಕೋನೇರ, ಮರೆಪ್ಪ ಪ್ಯಾಟಿ, ಮಲ್ಲಿಕಾರ್ಜುನ ಕಂದಕೂರ ಉಪಸ್ಥಿತರಿದ್ದರು. ಸಿದ್ರಾಮಪ್ಪ ಕುಂಬಾರ, ಶಾಂತಗೌಡ ದಿಗ್ಗಿ, ಸಿದ್ದಪ್ಪ ಕಿಲಾರಿ, ಚಂದ್ರ ಮುಂಡರಗಿ, ಶರಣು ಶಟ್ಟಿಕೇರಾ, ತಿಮ್ಮಯ್ಯ ಸೈದಾಪುರ, ಹಣಮಂತ್ರಾಯಗೌಡ ಕುಪ್ಪಿ, ಸುರೇಶ ಬಾಬು ಇತರರಿದ್ದರು, ನಾಗನಗೌಡ ಕನ್ಯಾಕೋಳೂರ ನಿರೂಪಿಸಿದರು, ಮೋಹನ್ ಕುಮಾರ್ ವಂದಿಸಿದರು.