‘ಮಾನಸಿ ಮತ್ತು ಆಶಿಶ್’ ಮಂಜುನಾಥ ಸಾಲಿಮಠ ಕಥಾಂಕುರ ಭಾಗ-2
ಮಾನಸಿ ಬೆಳೆದು ದೊಡ್ಡವಳಾಗಿದ್ದಳು. ತಂದೆಗೆ ಮಗಳನ್ನು ಒಳ್ಳೆಯ ಮನೆ ಸೇರಿಸುವ ತವಕ. ಆದಷ್ಟು ಬೇಗ ಅವಳ ಮದುವೆ ಮಾಡಿದರೆ ತಮ್ಮ ಅರ್ಧ ಜವಾಬ್ದಾರಿ ಮುಗಿಯುತ್ತದೆ ಎಂಬ ಅವರ ಆಸೆ ಬೇಗನೆ ನೇರವೇರಿತು. ಮೊದಲ ವಧು ಪರೀಕ್ಷೆಯಲ್ಲಿಯೇ ಮಾನಸಿ ಮಧುಕರನಿಗೆ ಒಪ್ಪಿಗೆಯಾಗಿದ್ದಳು.
ಮಾನಸಿ ರೂಪರಾಶಿಗೆ ಮಾರುಹೋಗಿದ್ದ ಯಾರಾದರೂ ಇನ್ನೊಮ್ಮೆ ತಿರುಗಿ ನೋಡಬೇಕು ಎಂದೆನಿಸಿಕೊಳ್ಳುವಂತಹ ರೂಪ ಅವಳದು. ಮನೆಗೆಲಸ, ಓದು, ಹಾಡು ಎಲ್ಲದರಲ್ಲೂ ಎತ್ತಿದ ಕೈ ಎನಿಸಿಕೊಂಡಿದ್ದವಳು ಮಾನಸಿ. ಮಧುಕರನು ಸ್ಪೂರದ್ರೂಪಿ, ಮಾನಸಿಗೂ ಅವನು ಹಿಡಿಸಿದ್ದ, ಆದರೆ ಅವಳ ಮನಸ್ಸು ಮದುವೆಯನ್ನು ನೆನೆದರೆ ಸಂತೋಷವಾಗುತ್ತಿರಲಿಲ್ಲಾ.
ಅಪ್ಪ ಮತ್ತು ತಮ್ಮನನ್ನು ನೋಡಿಕೊಳ್ಳುವವರು ಯಾರು..? ಆಗ ಆಶುಗೆ ಹನ್ನೊಂದು ವರ್ಷಗಳಾಗಿದ್ದವು. ಆರನೇ ತರಗತಿಯಲ್ಲಿ ಓದುತ್ತಿದ್ದ ಅಕ್ಕನ ಮಾತಿಗೆ ತಪ್ಪದ ತಮ್ಮನಾಗಿದ್ದ. ಅಷ್ಟೊಂದು ಪ್ರೀತಿಸುವ ತಮ್ಮನನ್ನು ಬಿಟ್ಟು ಹೋಗಲು ಅವಳು ಸಿದ್ಧಳಿರಲಿಲ್ಲಾ. ಆದರೂ ಅಪ್ಪನ ಮಾತಿಗೆ ಎದುರಾಡದೆ ಸುಮ್ಮನಿದ್ದಳು.
ಮಧುಕರ ಸ್ವಂತ ಉದ್ಯೋಗ ಮಾಡಿಕೊಂಡಿರುವ ಉದ್ಯಮಿ. ಮನೆಯಲ್ಲಿ ಅವನಿಗೆ ಯಾವುದಕ್ಕೂ ಕೊರತೆಯಿರಲಿಲ್ಲಾ. ಹಳ್ಳಿಯಲ್ಲಿದ್ದ ತಂದೆ ತಾಯಿ ಇವನ ಆಸೆ ಆಕಾಂಕ್ಷಿಗಳಿಗೆ ಎಂದು ಅಡ್ಡಿ ಬಂದವರಲ್ಲಾ. ಮಾನಸಿಯ ತಂದೆಯ ಜೊತೆ ಮಾತನಾಡಿದ್ದ ಮಧುಕರ ಒಂದು ನಿರ್ಧಾರಕ್ಕೆ ಬಂದಿದ್ದನಂತೆ, ಅಕ್ಕ ತಮ್ಮನನ್ನು ಯಾವುದೆ ಕಾರಣಕ್ಕೂ ಬೇರ್ಪಡಿಸಲ್ಲಾ ಮದುವೆಯಾದ ಮೇಲೆ ಆಶಿಶ್ ಜವಬ್ದಾರಿ ತಾನೇ ಹೊತ್ತು ಮಾನಸಿಯ ಜೊತೆ ಅವನನ್ನು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದಾನೆ ಎಂಬ ಅಪ್ಪನ ಮಾತು ಮಾನಸಿಗೆ ತಿಳಿದು ಸಂತೋಷವಾಯಿತು.
ಮಧುಕರನ ಬಗ್ಗೆ ಗೌರವ ಅಭಿಮಾನಗಳು ಮೂಡಿದವು. ಮಾನಸಿಯ ಮದುವೆಯಾಗಿ ಹತ್ತು ವರ್ಷಗಳು ಕಳೆದಿದ್ದವು. ಅವಳಿಗೆ ಒಬ್ಬಳು ಮಗಳಿದ್ದಳು ಅವಳಿಗೆ ಎಂಟು ವರ್ಷಗಳಾಗಿದ್ದವು. ಮನೆಗೆ ಒಬ್ಬ ಮಗನಿರಬೇಕೆಂದು ಮಾನಸಿಯಾಗಲಿ ಮಧುಕರನಾಗಲಿ ಎಂದು ಯೋಚನೆ ಮಾಡಿರಲೇ ಇಲ್ಲಾ. ಏಕೆಂದರೆ ಮಧು ಮತ್ತು ಮಾನಸಿ ಆಶಿಶನನ್ನು ಮಗನೆಂದೆ ತಿಳಿದಿದ್ದರು. ಬಾಲ್ಯದಿಂದಲೇ ಆಶಿಶ ಮಾನಸಿಗೆ ಅಂಟಿಕೊಂಡು ಬೆಳೆದಿದ್ದಾ.
ಆಶಿಶ್ ಚೆನ್ನಾಗಿ ಓದುತ್ತಿದ್ದ ಪಿಯುಸಿಯಲ್ಲಿ ಒಳ್ಳೆಯ ಫಲಿತಾಂಶ ಬಂದಾಗ ಮನೆಯಲ್ಲಿ ದೊಡ್ಡ ಸಂಭ್ರಮವೇ ನಡೆದಿತ್ತು. ಹಳ್ಳಿಯಿಂದ ಮಾನಸಿಯ ಅತ್ತೆ ಮಾವ ತವರಿನಿಂದ ತಂದೆ ಎಲ್ಲರೂ ಬಂದು ಸಂಭ್ರಮಿಸಿದ್ದರು. ಮಾನಸಿಯ ತಂದೆಯಂತೂ ಮಾತೆಯೇ ಹಾಡದೆ ಮೂಕರಾಗಿದ್ದರು. ಮಗನ ಸಾಧನೆ ಮತ್ತು ಮಗಳ ಮಮಕಾರ ನೋಡಿ ಸಂತೋಷಪಟ್ಟಿದ್ದರು.
ಆಶುವಿಗೆ ಅದೇ ಊರಿನಲ್ಲಿ ಇಂಜಿನಿಯರಿಂಗ್ ಸೀಟ್… ಸಿಗುತ್ತಾ ಇಲ್ವಾ ಒಂದಡೆ ಇರುತ್ತಾರ ಅಕ್ಕ ತಮ್ಮ ..ಇಲ್ಲಾ ದೂರವಾಗ್ತಾರಾ…(ಮುಂದುವರೆಯುವುದು.)
ಲೇಖಕರು. ಪತ್ರಕರ್ತರು.