ಪ್ರಮುಖ ಸುದ್ದಿ
ಜಮ್ಮು ಕಾಶ್ಮೀರ : ರಾಜ್ಯಸಭೆಯಲ್ಲಿ 370, 35A ವಿಧಿ ರದ್ದು ಪ್ರಸ್ತಾವನೆ ಮಂಡಿಸಿದ ಅಮಿತ್ ಶಾ
ದೆಹಲಿ: ರಾಜ್ಯಸಭೆಯಲ್ಲಿ ಕಲಾಪ ಆರಂಭ ಆಗುತ್ತಿದ್ದಂತೆ ಕಾಂಗ್ರೆಸ್ ನಾಯಕರು ಗದ್ದಲ ಆರಂಭಿಸಿದರು. ಕಾಶ್ಮೀರದಲ್ಲಿ ಮಾಜಿ ಮುಖ್ಯಮಂತ್ರಿಗಳನ್ನು ಗೃಹ ಬಂಧನದಲ್ಲಿಡಲಾಗಿದ್ದು ಪಕ್ಷುಬ್ಧ ಸ್ಥಿತಿ ನಿರ್ಮಾಣ ಮಾಡಲಾಗಿದೆ. ಮೊದಲು ಆ ಬಗ್ಗೆ ಚರ್ಚಿಸಿ ಬಳಿಕ ಮಸೂದೆ ಮಂಡಿಸಿ ಎಂದು ಸಂಸದ ಗುಲಾಂ ನಭಿ ಆಜಾದ್ ಹೇಳಿದರು. ಕೇಂದ್ತ ಸರ್ಕಾರದ ವಿರುದ್ಧ ಪ್ರತಿಪಕ್ಷ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಪಕ್ಷಗಳ ವಿರೋಧದ ನಡುವೆಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಅನುಚ್ಛೆದ 370 ಹಾಗೂ 35A ರದ್ದುಗೊಳಿಸುವ ವಿಧೇಯಕ ಮಂಡಿಸಿದರು. ಕಾಂಗ್ರೆಸ್ ಹಾಗೂ ಇತರೆ ಪಕದ ನಾಯಕರು ಸರ್ಕಾರದ ನಿರ್ಣಯಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.