ನಶೆಯಲ್ಲಿ ರೈಲಿನಿಂದ ಬಿದ್ದು ಕೈ ಕಳೆದುಕೊಂಡ ಕುಡುಕ
ನಶೆಯಲ್ಲಿ ರೈಲಿನಿಂದ ಬಿದ್ದು ಕೈ ಕಳೆದುಕೊಂಡ ಕುಡುಕ
ಕುಡಿದ ಮತ್ತಿನಲ್ಲಿ ಚಲಿಸುತ್ತಿದ್ದ ಟ್ರೈನ್ ನಿಂದ ಬಿದ್ದು ಕೈ ಕಳೆದುಕೊಂಡ ಯುವಕ
ರಾಯಚೂರಃ ಕುಡಿದ ಮತ್ತಿನಲ್ಲಿದ್ದ
ಯುವಕನೋರ್ವ ಚಲಿಸುತ್ತಿರುವ ಟ್ರೇನ್ ನಿಂದ ಬಿದ್ದು ತನ್ನ ಬಲಗೈ ಕಳೆದುಕೊಂಡ ಘಟನೆ ರಾಯಚೂರಿನಲ್ಲಿ ನಡೆದಿದೆ.
ನಗರದ ಜಿಲ್ಲಾ ಕ್ರೀಡಾಂಗಣ ಬಳಿ ರೈಲು ಚಲಿಸುತ್ತಿರುವಾಗಲೇ ಈ ದುರ್ಘಟನೆ ನಡೆದಿದೆ.
ಕೈ ಕಳೆದಕೊಂಡು ಯುವಕ ಯಕ್ಲಾಸಪುರ ಗ್ರಾಮದ ಗೋಪಿ ಹುಸೇನಪ್ಪ ಎಂದು ಗುರುತಿಸಲಾಗಿದೆ.
ಟ್ರೇನ್ ನಿಂತಿದೆ ಎಂದುಕೊಂಡು ನಿಶೆಯಲ್ಲಿದ್ದ ಆತ ಇಳಿಯಲು ಹೋಗಿ ಕೈ ಕಳೆದುಕೊಂಡಿದ್ದು, ಗಾಯಗಳನ್ನು ಹೊಂದಿದ್ದಾನೆ ಎನ್ನಲಾಗಿದೆ. ಕೈ ಟ್ರೇನ್ ಪಟ್ರಿಯಡಿ ಸಿಲುಕಿರುವ ಕಾರಣ ಬಲಗೈ ಸಂಪೂರ್ಣ ತುಂಡಾಗಿ ಬೇರಡೆ ಬಿದ್ದಿದ್ದು ಕಂಡ ಜನರು ಮರುಗಿದ್ದಾರೆ.
ಸ್ಥಳೀಯರು ತಕ್ಷಣ ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು, ನರಳುತ್ತಾ ಬಿದ್ದ ಯುವಕನನ್ನು ಇಲ್ಲಿನ ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಈತನನ್ನು ಸಮೀಪದ ಯಕ್ಲಾಸಪುರ ಗ್ರಾಮದ ಗೋಪಿ ಹುಸೇನಪ್ಪ ಎಂದು ಗುರುತಿಸಿದ್ದಾರೆ. ರಾಯಚೂರ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.