Homeಅಂಕಣಕ್ಯಾಂಪಸ್ ಕಲರವಜನಮನಪ್ರಮುಖ ಸುದ್ದಿಮಹಿಳಾ ವಾಣಿ
ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ!
ಭಾರತೀಯ ನೌಕಾಪಡೆ ಮೆಡಿಕಲ್ ಅಸಿಸ್ಟಂಟ್ ಹುದ್ದೆಗಳ ಭರ್ತಿಗಾಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ನೇವಿ ಮೆಡಿಕಲ್ ಅಸಿಸ್ಟಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಎತ್ತರ ಕನಿಷ್ಠ 157 ಸೆ.ಮೀ. ಇರಬೇಕು ಎನ್ನಲಾಗಿದೆ. ಹುದ್ದೆಗೆ ಆಯ್ಕೆಯಾದವರಿಗೆ ಮೊದಲು ತರಬೇತಿ ಅವಧಿಯಲ್ಲಿ ಮಾಸಿಕ ಸ್ಟೈಫಂಡ್ ರೂ.14,600 ಸಿಗಲಿದೆ. ಬಳಿಕ ತರಬೇತಿ ಪೂರ್ಣಗೊಂಡು ವೇತನ ಶ್ರೇಣಿ ರೂ.21,700- 69,100 ವರೆಗೆ ಇರುತ್ತದೆ. ಇದರ ಜೊತೆಗೆ ಇತರ ವಿಶೇಷ ಭತ್ಯೆಗಳು, ಇನ್ಸುರೆನ್ಸ್ ಸೌಲಭ್ಯಗಳು ಇರುತ್ತವೆ.