ಕಾವ್ಯ
ನೀ ನೀಡಿದ ಪ್ರೀತಿಗೆ ಏನಂತ ಹೆಸರಿಸಲಿ.!
ಮಮತೆಯ ಒಡಲು
ಸುಮಧುರ ಬಂಧು ನಿನಾದೆ
ಒಡಲತುಂಬ ಕಡಲ ನಿನಾದವಾದೆ
ದಿನದ ನಿಮಿಷಗಳೆಲ್ಲ ಸಾಲಲಿಲ್ಲ
ಒಲವ ಅಂಬರ ಹುಚ್ಚು ಹೆಚ್ಚಿತಲ್ಲ
ನೆನೆದಾಗಲೆಲ್ಲ ಹತ್ತಿರ ಬರತಿದ್ದೆ
ಎಂದೂ ಮರೆಯದ ಹಾಡಿನ ತೆರದಿ
ಜನುಮ ಜನುಮದ ಸಂಗಾತಿಯೇ..
ನೀ ನೀಡಿದ ಪ್ರೀತಿಗೆ ಏನಂತ ಹೆಸರಿಸಲಿ
ನೀ ತಂದ ಕಾಣಿಕೆಯ ಹೇಗೆ ಮರೆಯಲಿ
ಅಕ್ಕರೆಯ ಸಕ್ಕರೆಯ ಅಮ್ಮನಾಗಿ
ಸಗ್ಗವನೆ ಪಾದತಲದಲಿ ತಂದವನೆ
ಕಣ್ಣಂಚು ಒದ್ದೆಯಾಗದಂತೆ ತಡೆದೆ ಅಪ್ಪನಾಗಿ
ನೋವುಗಳಿಗೆಲ್ಲ ಉತ್ತರವಾದೆ ಮಿತ್ರನಾಗಿ
ಮಮತೆ ಇರುವೆಡೆಯಲ್ಲ ಆಸರೆಯಾಗಿ
ಹನಿ ಜಾರಿದರೂ ಕಂಬನಿಯಲಿ
ಸಹಿಸದ ನನ್ನವನೆ ಜಾರಿದೆ ಏಕೆ
ಒಂಟಿ ಮಾಡಿ ದೂರ ಹೋದೆಯೇಕೆ
ಎದೆಯಲಿ ನಿನ್ನದೆ ಡಂಗುರ ಸಖನೆ
ಮೌನ ಮಾತಾಗಿ ಒಮ್ಮೇ ಬಾ
ಪ್ರೀತಿ ಜೇನಾಗಿ ಒಮ್ಮೆ ಬಾ ಕೂಸೆ
ಅಪ್ಪಾಜಿ ಎನ್ನುವ ನಿನ್ನ ಕರೆಗೆ ಕಿವಿಯಾಗೋ ಆಸೆ
ಕನಸು ಅಂತ ಮರೆಯೋ ಮುನ್ನ….
ಮಮತೆಯ ಒಡಲ ಮೋಡವೇ ಸುರಿಸು ಬಾ….
-ಜಯಶ್ರೀ ಭ.ಭಂಡಾರಿ.
ಬಾದಾಮಿ.
9986837446.