ಪ್ರಮುಖ ಸುದ್ದಿ
ಮಾವಿನ ಹಣ್ಣು ಕೊರೊನಾ ಸೋಂಕು ಬಾರದಂತೆ ತಡೆಯಲಿದೆ-ಸಚಿವ ನಾರಾಯಣಗೌಡ
ಬೆಂಗಳೂರಃಮಾವಿನ ಹಣ್ಣು ತಿನ್ನುವದರಿಂದ ಕೊರೊನಾ ಸೋಂಕು ಬರುವದಿಲ್ಲ ಎಂದು ತೋಟಗರಿಕೆ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಮಹಿಳಾ ಸಂಘದವರು ಚೀಟಿ ವ್ಯವಹಾರಸ ಸಭೆ ನಡೆಯುತ್ತಿದ್ದಾಗ ಮಾವಿನ ಹಣ್ಣನ್ನು ಹಂಚಿಕೊಂಡು ತಿನ್ನುತಿದ್ದರು ,ಅದರಲ್ಲಿ ಇಬ್ಬರು ಮಹಿಳೆಯರಿಗೆ ಕೊರೊನಾ ಸೋಂಕು ಹರಡಿದೆ ಎಂದು ಶಂಕೆ ವ್ಯಕ್ತವಾಗಿತ್ತು ಅಷ್ಟೆ.
ಆದರೆ ಮಾವಿನ ಹಣ್ಣು ತಿನ್ನುವದರಿಂದ ಕೊರೊನಾ ವೈರಸ್ ತಗುಲುವದಿಲ್ಲ. ಮಾವಿನ ಹಣ್ಣು ಹೆಚ್ಚು ತಿಂದಷ್ಟು ಆರೋಗ್ಯಕ್ಕೆ ಒಳ್ಳೆಯದು. ಅದು ಸೋಂಕು ಹರಡಿಸುವದಿಲ್ಲ ಎಂದು ತಿಳಿಸಿದರು.