ಪ್ರಮುಖ ಸುದ್ದಿ

’ಖಟ್ಟರ’ ಎಂಬ ಕಠೋರ ರಾಜಕಾರಣಿ.! ಮಾದರಿಯಾಗಲಿ‌

ಖಟ್ಟರ ಉಳಿದ ರಾಜಕಾರಣಿಗಳಿಗೆ ಮಾದರಿ

ಖಟ್ಟರ’ ಎಂಬ ಕಠೋರ ರಾಜಕಾರಣಿ!!

ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಮತ್ತು ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸಬೇಕೆಂದು ಪಕ್ಷ ಅಪೇಕ್ಷೆ ಪಟ್ಟ ತತಕ್ಷಣವೇ ಯಾವ ಅಧಿಕೃತ ಆದೇಶಕ್ಕೂ ಕಾಯದೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಯಾವುದೇ ಬೇಸರ, ಅಸಮಾಧಾನ ಇಲ್ಲದೇ ಪಕ್ಷ ನಿರ್ಧರಿಸಿದ ವ್ಯಕ್ತಿಗೆ ಆ ಸ್ಥಾನದಲ್ಲಿ ಕುಳ್ಳರಿಸಿ ಮನಪೂರ್ತಿ ಆಶಿರ್ವಾದ ನೀಡಿ ಮುಂದಿನ ಕಾರ್ಯಕ್ಕೆ ಸಿದ್ಧರಾದರು ಶ್ರೀ ಮನೋಹರಲಾಲ್ ಖಟ್ಟರ್.

2014 ರಲ್ಲಿ ಬಿಜೆಪಿ ಹರಿಯಾಣಾ ಘಟಕದ ಸಂಘಟನಾ ಕಾರ್ಯದರ್ಶಿಯಾಗಿದ್ದರು ಮನೋಹರಲಾಲ್ ಖಟ್ಟರ್. ಪಕ್ಷ ಆ ಬಾರಿಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಬೇಕೆಂದು ಆದೇಶಿಸಿತು. ಖಟ್ಟರ್ ಚುನಾವಣೆಗೆ ನಿಂತರು, ಭಾರಿ ಅಂತರದಿಂದ ಗೆದ್ದು ಬಂದರು, ಹರಿಯಾಣಾದ ಬಿಜೆಪಿ ಸರಕಾರದ ಮುಖ್ಯಮಂತ್ರಿ ಕೂಡ ಆದರು. ನೂತನ ಸಿ.ಎಮ್. ಅವರ ನಿವಾಸಕ್ಕೆ ಅವರ ವಸ್ತುಗಳನ್ನು ಸಾಗಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದಾಗ ಅವರಿಗೆ ಆಶ್ಚರ್ಯ ಕಾದಿತ್ತು. ಈ ನೂತನ ಸಿ.ಎಮ್. ಕೇವಲ ಒಂದು ಸೂಟಕೇಸ್ ಹಾಗೂ ಹೆಗಲಲ್ಲಿ ಒಂದು ಜೋಳಿಗೆ ಹಾಕಿಕೊಂಡು ಬಂದು ನೂತನ ಗ್ರಹಪ್ರವೇಶ ಮಾಡಿದರು.

ಹೆಚ್ಚು ಕಡಿಮೆ ಹತ್ತು ವರ್ಷಗಳ ಕಾಲ ಯಾವುದೇ ವಿವಾದ ಇಲ್ಲದೇ ಸ್ವಚ್ಛ ಆಡಳಿತ. 2019ರ ಲೋಕಸಭಾ ಚುನಾವಣೆಯಲ್ಲಿ ಹರಿಯಾಣಾದ 10ಕ್ಕೆ 10 ಲೋಕಸಭಾ ಕ್ಷೇತ್ರದಲ್ಲಿ ಪಕ್ಷ ಜಯಬೇರಿ. ನಂತರ ಸಮಿಶ್ರ ಸರಕಾರ ನಡೆಸಿದರೂ ಕೂಡ ವಿವಾದರಹಿತ ಸರಕಾರ. ಈಗ ನವ ಪೀಳಿಗೆ ಮುನ್ನಲೆಗೆ ಬರಬೇಕೆಂದು ಪಕ್ಷ ಅಪೇಕ್ಷೆ ವ್ಯಕ್ತಪಡಿಸಿದಾಗ ಮುಂದಿನ ಮುಖ್ಯಮಂತ್ರಿಗಳ ಪಟ್ಟಾಭಿಷೇಕವನ್ನು ತಾವೇ ಮುಂದೆ ನಿಂತು ನೆರವೇರಿಸಿದರು ಶ್ರೀ ಖಟ್ಟರ್ ಅವರು. ಎಲ್ಲವೂ 24 ಗಂಟೆಗಳಲ್ಲಿ ನಡೆದುಹೋಯಿತು. ಯಾವ ಅಭಿಮಾನಿಗಳ ಸಭೆ ಇಲ್ಲಾ. ಜಾತಿ ಮುಖಂಡರ ಹಾರಾಟ ಚೀರಾಟ ಇಲ್ಲಾ.

ಮನೋಹರಲಾಲ್ ಕಟ್ಟರ್‍ ಅವರು ಈ ಮುಂಚೆ ತಮ್ಮ ಪಾಲಿನ ಪಿತ್ರಾರ್ಜಿತ ಆಸ್ತಿಯ ರೂಪದಲ್ಲಿ ಹುಟ್ಟೂರಿನಲ್ಲಿ ಬಂದಿದ್ದ ಮನೆಯನ್ನು ಅದೇ ಗ್ರಾಮದ ವಿದ್ಯಾರ್ಥಿಗಳಿಗಾಗಿ ಇ-ಗ್ರಂಥಾಲಯವನ್ನಾಗಿ ಮಾಡಿ ಊರಿಗೆ ದಾನ ಮಾಡಿದರು.

ಇತ್ತೀಚಿಗೆ ಅವರ ಮಿತ್ರರಾಗಿರುವ ದೊಡ್ಡ ವ್ಯಾಪಾರಸ್ಥರೊಬ್ಬರು ಖಟ್ಟರ್ ಅವರ ವಿಶ್ರಾಂತ ಜೀವನಕ್ಕಾಗಿ ಒಂದು ಫಾರ್ಮಹೌಸ ಕಟ್ಟಿಕೊಡುವ ಪ್ರಸ್ಥಾಪ ಮುಂದಿಟ್ಟಾಗ ನಯವಾಗಿ ನಿರಾಕರಿಸಿದ ಖಟ್ಟರ್ ಅವರು ತಮ್ಮ ನಂತರ ತಮ್ಮ ಎಲ್ಲ ಆಸ್ತಿಪಾಸ್ತಿ ಪ್ರಧಾನಮಂತ್ರಿ ಪರಿಹಾರ ನಿಧಿಗೆ ಸೇರಬೇಕೆಂದು ಉಯಿಲು ಬರೆದಿಟ್ಟು ನಿರಾಳರಾಗಿ ರಾಜಕೀಯದ ಮೂಲಕ ಸಮಾಜ ಸೇವೆ ಮಾಡಿಕೊಂಡಿದ್ದಾರೆ.

ಕಳೆದ ವಾರ ಪ್ರಧಾನಮಂತ್ರಿಗಳು ಹರಿಯಾಣಾಕ್ಕೆ ಭೇಟಿ ನೀಡಿದಾಗ ತಾವು ಮತ್ತು ಖಟ್ಟರ್ ಅವರು ಸ್ಕೂಟರನಲ್ಲಿ ಮಾಡುತ್ತಿದ್ದ ಸಂಘಟನಾತ್ಮಕ ಪ್ರವಾಸಗಳನ್ನು ನೆನೆಸಿಕೊಂಡರು. ಇಂತಹವರು ರಾಜಕೀಯದಿಂದ ಗಳಿಸಬೇಕಾದುದು ಏನಿದೆ? ಕಳೆದುಕೊಳ್ಳಬೇಕಾದುದು ಏನಿದೆ?

ಇದಂ ನ ಮಮ ನಿಮಿತ್ತ ಮಾತ್ರಂ ಭವ…

(ಅಮೃತ ಜೋಶಿ ಅವರ ಬರಹ)

ಗಮನಿಸಿಃ ಈ ಲೇಖನ ಸಾಮಾಜಿಕ ಜಾಲ ತಾಣದಲ್ಲಿ ಸೌಂಡ್ ಮಾಡಿದ್ದು, ಸಾಕಷ್ಟು ಜನರಿಂದ ಮನ್ನಣೆ ಹೊಂದಿರುವ ಕಾರಣ  ಪ್ರತಿಕ್ರಿಯೆಗಳು ಬರುತ್ತಿವೆ. ವಿವಿ  ಗಮನಿಸಿ ಅದನ್ನು ಯಥಾವತ್ತಾಗಿ ಪ್ರಕಟಿಸಲಾಗಿದೆ..)

Related Articles

Leave a Reply

Your email address will not be published. Required fields are marked *

Back to top button