ಅಂಕಣವಿನಯ ವಿಶೇಷ

ಏನಿದು ಮರ್ಮ ಚಿಕಿತ್ಸೆ.? ಮರ್ಮ ಚಿಕಿತ್ಸೆಯ ಮರ್ಮವೇನು.? ಬಲ್ಲಿರಾ..?

ಮರ್ಮ ಚಿಕಿತ್ಸೆಯ ಅವಶ್ಯಕತೆ ಏನು.?

ಏನಿದು ಮರ್ಮ ಚಿಕಿತ್ಸೆ?

ಪ್ರಿಯ ಓದುಗರೆ,
ಮರ್ಮ ಚಿಕಿತ್ಸೆಯು ಪ್ರಪಂಚದಲ್ಲಿನ ಅತ್ಯಂತ ಪ್ರಾಚೀನ ವಿದ್ಯೆಯಾಗಿರುತ್ತದೆ. ಈ ವೇಗದ ಜಗತ್ತಿನಲ್ಲಿ ಆಹಾರ, ಗಾಳಿ, ನೀರು ಎಲ್ಲವು ಕಲುಷಿತವಾಗಿರುವುದು ತಮ್ಮೆಲ್ಲರಿಗೂ ತಿಳಿದಿರುವ ಸಂಗತಿ. ದಿನೇ ದಿನೇ ಕಳೆದಂತೆ ಅವಸರದ ಅನಾರೋಗ್ಯಕರ ಜೀವನಶೈಲಿಯಿಂದ ಏನಾದರೂ ಒಂದು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದೇವೆ. ಇದರಿಂದ ಹೊರಬರಲು ಸೆಣಸಾಟ ನಡೆಸುತ್ತಿದ್ದೇವೆ. ಹೀಗಿರುವಾಗ ನಮಲ್ಲಿ ಸಾಮಾನ್ಯವಾಗಿ ಕಾಡುವಂತಹ ಪ್ರಶ್ನೆ ಏನೆಂದರೆ ಹಿಂದೆ ಪೂರ್ವಜರು ಇಂತಹ ಸಮಸ್ಯೆಯಿಂದ ಹೇಗೆ ಹೊರಬರುತ್ತಿದ್ದರು!? ಹಾಗಿದ್ದರೆ ಯಾವುದಾರೂ ಚಿಕಿತ್ಸೆ ಇರಬಹುದೇ? ತಂತ್ರಜ್ಞಾನ, ಆಂಗ್ಲವೈದ್ಯಪದ್ದತಿಯ ಅವಿμÁ್ಕರದ ಅನುಪಸ್ಥಿತಿಯಲ್ಲಿ ಹೇಗೆ ಅವರು ಜೀವನವನ್ನು ಸಾಗಿಸುತ್ತಿದ್ದರು? ಇಂತಹ ಎಲ್ಲಾ ಪ್ರಶ್ನೆಗಳಿಗೆ ಆಯುರ್ವೇದದಲ್ಲಿ ಹೇಳಿರುವ ತಕ್ಷಣವೇ ನೋವು ನಿವಾರಣೆ ಮಾಡುವ ಚಿಕಿತ್ಸೆಯಲ್ಲಿ ಒಂದಾದ ಮರ್ಮ ಚಿಕಿತ್ಸೆಯು ಅತ್ಯಂತ ಪರಿಣಾಮಕಾರಿ. ಆಯುರ್ವೇದ ಚಿಕಿತ್ಸೆಯು ತುಂಬಾ ನಿಧಾನವಾದದ್ದು ಎಂಬ ಪರಿಕಲ್ಪನೆಯನ್ನು ಸಹ ತೊಡೆದುಹಾಕುವಲ್ಲಿ ಮರ್ಮ ಚಿಕಿತ್ಸೆಯು ಸಹಕಾರಿಯಾಗಿದೆ.

ಮರ್ಮ ಎಂದರೆನು?

ಮರ್ಮ ಎಂದರೆ ದೇಹದಲ್ಲಿನ ಸೂಕ್ಷ್ಮವಾದ ಅಂಶ ಅಥವಾ ಬಿಂದು ಎಂದು ಕರೆಯಬಹುದು. ನಮ್ಮ ದೇಹದಲ್ಲಿ ಒಟ್ಟು 107 ಮರ್ಮ ಬಿಂದುಗಳು ಇರುತ್ತವೆ. ಈ ಮರ್ಮ ಬಿಂದುಗಳ ಬಗ್ಗೆ ಮಹರ್ಷಿಗಳು ಆಯುರ್ವೇದದ ರಚನೆಯ ಕಾಲದಲ್ಲಿಯೇ ಬರೆದಿರುತ್ತಾರೆ. ಉದಾಹರಣೆಗೆ ನಮ್ಮ ಶರೀರದಲ್ಲಿ ಹಣೆಯ ಭಾಗದಲ್ಲಿ ಕುಂಕುಮ ಅಥವಾ ಸಿಂಧೂರ ಇಡುವಂತಹದ್ದು, ಕೈಯಲ್ಲಿ ಬಳೆ ಅಥವಾ ಖಡ್ಗ ಧರಿಸುವಂತಹದ್ದು ಹಾಗೂ ಪಾದುಕೆಗಳು ಅಥವಾ ಅಂಗುಷ್ಟವಿರುವ ಪಾದರಕ್ಷೆಗಳನ್ನು ಹಾಕುವಂತಹದ್ದು ಇವೆಲ್ಲವೂ ನಮ್ಮ ಪೂರ್ವಜರ ಕಾಲದಿಂದಲೂ ಉಪಯೋಗಿಸುತ್ತಿರುವ ವಾಡಿಕೆಯನ್ನು ನೀವು ಗಮನಿಸಿರಬಹುದು. ಇತ್ತೀಚಿನ ಸಂಶೋಧನಾ ಅಧ್ಯಯನದಲ್ಲಿ ಪಾದುಕೆಗಳ ಉಪಯೋಗದಿಂದ ಪಾದದ ಸ್ನಾಯು ಹಾಗೂ ನಡುಗೆಯ ಸಮತೋಲನದಲ್ಲಿ ಅಭಿವೃದ್ದಿ ಹೊಂದಿರುವುದು ಗಮನಾರ್ಹ. ಇಂತಹ ಅನೇಕ ವಿಷಯಗಳಿಂದ ನಮ್ಮ ಸಾಂಪ್ರದಾಯಿಕ ವೇಷ ಭೂಷಗಳು ವೈಜ್ಞಾನಿಕ ಹಾಗೂ ವೈಚಾರಿಕತೆಯಿಂದ ಕೂಡಿದೆ ಎಂದು ತಿಳಿದು ಬರುತ್ತದೆ.

ಮರ್ಮ ಚಿಕಿತ್ಸೆ

ಮರ್ಮ ಬಿಂದುಗಳು ಶರೀರ ರಕ್ಷಣೆಗೆ ಇರುವ ಸೂಕ್ಷ್ಮ ಬಿಂದುಗಳು. ಶರೀರದಲ್ಲಿನ ಸೂಕ್ಷ್ಮ ಬಿಂದುಗಳಿಗೆ ಯಾವಾಗ ದೇಹದ ಹೊರಗಿನಿಂದ ಅಥವಾ ಒಳಗಿನಿಂದ ಪೆಟ್ಟು ಬಿಳುತ್ತದೆಯೋ ಆ ಸ್ಥಳದಲ್ಲಿ ನೋವು ಅಥವಾ ತೊಂದರೆ ಸಂಭವಿಸುತ್ತದೆ. ಆ ಮರ್ಮ ಸ್ಥಾನವನ್ನು ನಿಧಾನವಾಗಿ ಮತ್ತು ಕ್ರಮಬದ್ದವಾಗಿ ಉತ್ತೇಜಿಸುವುದರಿಂದ ನೋವು ನಿವಾರಣೆ ಮಾಡಬಹುದು.

ಮರ್ಮ ಬಿಂದುಗಳ ರಕ್ಷಣೆ

ಮರ್ಮ ಸ್ಥಾನಗಳನ್ನು ಆದಷ್ಟು ರಕ್ಷಿಸಬೇಕು ಇದೇ ಕಾರಣಕ್ಕಾಗಿ ರಾಜರ ಮತ್ತು ಸೈನಿಕರ ವೇಷ ಭೂಷಗಳು ಮರ್ಮ ಸ್ಥಾನ ರಕ್ಷಣೆಗೆ ಅನುಗುಣವಾಗಿದ್ದವು. ಮರ್ಮ ಬಿಂದುಗಳು ದೇಹದ ಎಲ್ಲಾ ಭಾಗಗಳಲ್ಲಿ ಇರುವುದರಿಂದ ಮಕ್ಕಳನ್ನು ಶಿಕ್ಷಿಸುವಾಗ ಪೋಷಕರು ಮತ್ತು ಶಿಕ್ಷಕರು ಜಾಗರೂಕರಾಗಿರುವುದು ಒಳ್ಳೆಯದು. ಮಕ್ಕಳು ಅವಶ್ಯಕತೆಗಿಂತ ಭಾರವಾದ ಶಾಲಾ ಚೀಲವನ್ನು ಧರಿಸುವುದರಿಂದ ಮರ್ಮ ಸ್ಥಾನಕ್ಕೆ ಹಾನಿಯುಂಟಾಗಿ ಬೆನ್ನು ನೋವು, ತಲೆನೋವು ಸಮಸ್ಯೆಗಳಿಂದ ಬಳಲುತ್ತಾರೆ. ಜನರು ಮರ್ಮಾಭಿಘಾತದಿಂದ ಪಾರಾದರೆ ಅವರ ದೈಹಿಕ ಮತ್ತು ಮಾನಸಿಕ ಯೋಗ ಕ್ಷೇಮವನ್ನು ವೃದ್ಧಿಸಿಕೊಳ್ಳಬಹುದು. ಅತಿ ಬಿಗಿಯಾದ ವಸ್ತ್ರಗಳನ್ನು ಧರಿಸುವುದರಿಂದ ಮರ್ಮಸ್ಥಾನಕ್ಕೆ ಹಾನಿ ಉಂಟಾಗಿ ಪುರುಷರಲ್ಲಿ ನಪುಂಸಕತೆ ಮತ್ತು ಮಹಿಳೆಯರಲ್ಲಿ ಬಂಜೆತನ ಸಂಭವಿಸುವ ಸಾಧ್ಯತೆ ಇರುತ್ತದೆ.

ಮರ್ಮ ಚಿಕಿತ್ಸೆಯ ಅವಶ್ಯಕತೆ

ಭಾರತದಲ್ಲಿ ಬಡತನದ ರೇಖೆಯಲ್ಲಿ ಇರುವಂತಹ ಜನರು ಶಸ್ತ್ರ ಚಿಕಿತ್ಸೆ ಭರಿಸಲು ಅಸಮರ್ಥರಾಗಿರುತ್ತಾರೆ, ಅದಲ್ಲದೇ ಸರ್ವೇಸಾಮಾನ್ಯವಾಗಿ ಜನರು ಶೀಘ್ರವಾಗಿ ನೋವು ನಿವಾರಣೆ ಹೊಂದಲು ನೋವು ನಿವಾರಕ ಔಷಧಿಗಳ ಮೇಲೆ ಅವಲಂಬಿತರಾಗಿರುತ್ತಾರೆ. ಈ ಔಷಧಿಗಳನ್ನು ದೀರ್ಘಾವಧಿಯಲ್ಲಿ ಮತ್ತು ನಿತ್ಯಸೇವನೆ ಮಾಡುವುದರಿಂದ ದೇಹದ ಪ್ರಮುಖ ಅಂಗಾಂಗಗಳ ಮೇಲೆ ಅಡ್ಡಪರಿಣಾಮ ಉಂಟಾಗುತ್ತದೆ. ಸಾಕಷ್ಟು ರೋಗಿಗಳಲ್ಲಿ ಮರ್ಮ ಚಿಕಿತ್ಸೆಯು ಕಡಿಮೆ ವೆಚ್ಚದಲ್ಲಿ ತಕ್ಷಣೆ ಪರಿಹಾರ ಕೊಟ್ಟಿರುತ್ತದೆ. ಕ್ರಮಬದ್ದವಾಗಿ ಹಾಗೂ ನಿಯಮಿತವಾಗಿ ಚಿಕಿತ್ಸೆ ನೀಡಿದಾಗ ಬಹುತೇಕ ಯಾವುದೇ ಅಡ್ಡಪರಿಣಾಮ ಆಗುವುದಿಲ್ಲ.

ಮರ್ಮ ಚಿಕಿತ್ಸೆಯ ಉಪಯೋಗ

ದೀರ್ಘಾವಧಿಯಲ್ಲಿ ಮರ್ಮಚಿಕಿತ್ಸೆ ಪಡೆಯುವದರಿಂದ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ.
ಅತೀ ಕಡಿಮೆ ಸಮಯದಲ್ಲಿ ಹಾಗೂ ಶೀಘ್ರ ಚಿಕತ್ಸಾ ಫಲಿತಾಂಶ ದೊರೆಯುತ್ತದೆ.
ವೈದ್ಯಕೀಯ ಉಪಕರಣಗಳ ಅವಶ್ಯಕತೆ ಇರುವುದಿಲ್ಲ.
ಅಲೋಪತಿ, ಆರ್ಯುವೇದ, ಯುನಾನಿ, ಹೋಮಿಯೋಪತಿ ಮುಂತಾದ ಚಿಕಿತ್ಸೆಯು ಚಾಲ್ತಿಯಲ್ಲಿದ್ದರೂ ಮರ್ಮ ಚಿಕಿತ್ಸೆಯನ್ನು ಪಡೆಯಬಹುದು.
ಕ್ಯಾನ್ಸನರ್ಂತಹ ಮಾರಕ ರೋಗಗಳು ದಿನೇದಿನೇ ಹೆಚ್ಚಾಗುತ್ತಿದ್ದು ಅಂತಹ ರೋಗಗಳಲ್ಲಿ ಆಂತರಿಕ ಔಷಧಿ ಹಾಗೂ ಶಸ್ತ್ರಚಿಕಿತ್ಸೆಯ ಪ್ರಾಮುಖ್ಯತೆಗೆ ಧಕ್ಕೆಯಾಗದಂತೆ ಯಾವುದೇ ಅಧಿಕ ಔಷಧಿಗಳನ್ನು ನೀಡದೆ ಮರ್ಮ ಚಿಕಿತ್ಸೆಯು ನೋವು ನಿವಾರಣೆ ಮಾಡುವಲ್ಲಿ ಸಹಕಾರಿಯಾಗಿದೆ.

ಅಂಕಿ ಅಂಶಗಳ ಪ್ರಕಾರ, ಇಡೀ ಜಗತ್ತಿನಲ್ಲಿ ಐದು ಜನರಲ್ಲಿ ಒಬ್ಬರು ನೋವಿನಿಂದ ಬಳಲುತ್ತಿದ್ದಾರೆ. ಹೀಗಿರುವಾಗ ಬಹುತೇಕ ಜನರು ಇಂತಹ ನೋವುಗಳಿಂದ ಮುಕ್ತರಾಗಲು ಬಯಸುತ್ತಾರೆ. ಎಲ್ಲಿ ಶಸ್ತ್ರ ಚಿಕಿತ್ಸೆಯು ಅನಿವಾರ್ಯವೋ ಅಂತಹ ಸಂಧರ್ಭಗಳನ್ನು ಹೊರತುಪಡಿಸಿ ಸರ್ವೇಸಾಮಾನ್ಯವಾಗಿ ಕಾಡುವಂತಹ ತಲೆನೋವು, ಭುಜನೋವು, ಕತ್ತುನೋವು, ಸೊಂಟನೋವು, ಮಂಡಿನೋವು, ಪಾದನೋವು, ಗಂಟಲುನೋವು, ನರದೌರ್ಬಲ್ಯ, ಸ್ನಾಯುಸೆಳೆತ, ರಕ್ತದೊತ್ತಡ, ಮಧುಮೇಹ ಇನ್ನೂ ಮುಂತಾದ ಸಮಸ್ಯೆಗಳನ್ನು ನಿಯಂತ್ರಿಸುವಲ್ಲಿ ಮರ್ಮ ಚಿಕಿತ್ಸೆಯು ಅತ್ಯದ್ಭುತವಾಗಿ ಕಾರ್ಯನಿರ್ವಹಿಸುತ್ತದೆ. ಈ ಚಿಕಿತ್ಸೆಯು ಸರ್ವ ರೋಗಗಳಿಗೆ ರಾಮಬಾಣವಾಗಿದೆ. ಇಂತಹ ಒಂದು ಚಿಕಿತ್ಸೆ ಮಾನವ ಕುಲಕ್ಕೆ ಕೊಟ್ಟ ಉಡುಗೊರೆ ಎಂದರೂ ತಪ್ಪಾಗಲಾರದು.

ಡಾ|| ಪ್ರಶಾಂತ್ ಡಿ.
ಮರ್ಮ ಚಿಕಿತ್ಸಾ ತಜ್ಞರು.
ಆಯುರ್ ಸೆಂಟ್ರಲ್
ಕೋರಮಂಗಲ
ಬೆಂಗಳೂರು- 560095
ಮೊಬೈಲ್ ನಂ 9740434407

Related Articles

Leave a Reply

Your email address will not be published. Required fields are marked *

Back to top button