ಪ್ರಮುಖ ಸುದ್ದಿ

ಬಾಲ್ಯ ವಿವಾಹ ತಡೆದ ಅಧಿಕಾರಿಗಳು, ಪಾಲಕರ ಕಣ್ಣೀರು

ಪಾಲಕರಿಂದ ಮುಚ್ಚಳಿಕೆ ಪತ್ರ ಬರೆಯಿಸಿಕೊಂಡ ಅಧಿಕಾರಿಗಳು

ಯಾದಗಿರಿಃ ತಾಲೂಕಿನ ಬೋರಬಂಡಾ ತಾಂಡಾದಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹ ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಬಾಲ್ಯ ವಿವಾಹ ತಡೆದು ಎರಡು ಕಡೆಯ ಪಾಲಕ ಪೋಷಕರಿಗೆ ಬುದ್ಧಿವಾದ ಹೇಳಿ ಮುಚ್ಚಳಿಕೆ ಬರೆಸಿಕೊಂಡ ಘಟನೆ ಸೋಮವಾರ ನಡೆದಿದೆ.

ದೇವಿಂದ್ರ (26) ಎಂಬ ಯುವಕನ ಜೊತೆ 16 ವರ್ಷದ ಅಪ್ರಾಪ್ತ ಬಾಲಕಿಯ ಮದುವೆ ನಡೆಯುತ್ತಿರುವ ಖಚಿತ ಮಾಹಿತಿ ಪಡೆದುಕೊಂಡ ಅಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿ ಬಾಳ್ಯ ವಿವಾಹ ಮಾಡುವುದು ಅಪರಾಧ ಕುರಿತು ತಿಳುವಳಿಕೆ ನೀಡಿದ್ದಾರೆ. ಅಲ್ಲದೆ ಬಾಲ್ಯ ವಿವಾಹದಿಂದ ಮಕ್ಕಳ ಮೇಳಾಗುವ ದುಷ್ಪರಿಣಾಮಗಳ ಬಗ್ಗೆ ಕಾನೂನಿನ ಬಗ್ಗೆ ಅರಿವು ಮೂಡಿಸುವ ಮೂಲಕ ಪಾಲಕರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಾಲಕ ಪೋಷಕರಿಂದ ಸಮರ್ಪಖ ಮದುವೆ ವಯಸ್ಸಾಗುವವರೆಗೆ ಮದುವೆ ಮಾಡುವದಿಲ್ಲ ಎಂದು ಮುಚ್ಚಳಿಕೆ ಬರೆಯಿಸಿಕೊಂಡಿದ್ದಾರೆ. ಗುರುಮಠಕಲ್ ಪಟ್ಟಣ ವ್ಯಾಪ್ತಿ ಪ್ರಕರಣ ನಡೆದಿದೆ. ಪೊಲೀಸರು ಅಧಿಕಾರಿಗಳ ಮಧ್ಯೆ ಪ್ರಕರಣಕ್ಕೆ ಅಂತ್ಯವಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆದರೆ ಮದುವೆ ತಡೆದ ಪರಿಣಾಮ ಆಗಮಿಸಿದ ಬಂಧುಗಳಲ್ಲಿ ದುಖಃ ಮನೆ ಮಾಡಿತ್ತು. ಈ ಸಂದರ್ಭ ಅವರವರ ಮಧ್ಯೆ ವಾಗ್ವಾದಗಳು ನಡೆದವು ಎನ್ನಲಾಗಿದೆ. ಯಾರೋ ಆಗಲಾರದವರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂಬ ಕೂಗು ಕೇಳಿ ಬಂತು, ಆದರೆ ಅಧಿಕಾರಿಗಳು ಯಾರು ದೂರು ಕೊಟ್ಟಿಲ್ಲ ಮಾಹಿತಿ ಬಂದಿದೆ. ನಮ್ಮ ಕರ್ತವ್ಯ ನಾವು ಮಾಡಿದ್ದೇವೆ. ಕಾನೂನು ಪ್ರಕಾರ ಬಾಲ್ಯ ವಿವಾಹ ಅಸಿಂಧು ಆ ಕಾರಣಕ್ಕೆ ಕಾನೂನು ರೀತ್ಯಾ ಕ್ರಮಕೈಗೊಂಡಿದ್ದವೆ ಎಂದು ಅಧಿಕಾರಿಗಳು ಮನವರಿಕೆ ಮಾಡಿದರು.

ಹಿರಿಯ ಬಂಧುಗಳಲ್ಲಿ ಎಲ್ಲವೂ ವ್ಯವಸ್ಥೆ ಮಾಡಲಾಗಿತ್ತು. ಇನ್ನೇನು ತಾಳಿ ಕಟ್ಟಿದರೆ ಮುಗಿಯುತಿತ್ತು ಎನ್ನುವಷ್ಟರಲ್ಲಿ ಈ ಘಟನೆ ಸಂಭವಿಸಿತು ಎಂಬ ಕೊರಗಿನೊಂದಿಗೆ ಹಿಂದಿರುಗುವಂತಾಯಿತು. ಮದುವೆ ನಿಮಿತ್ತ ಮಾಡಿದ ಸವಿ ಸವಿ ಭೋಜನ ಯಾರು ಮಾಡದೆ ಹಾಗೇ ಜನ ವಾಪಾಸ್ ಹೋದರು. ಈ ಘಟನೆ ಸಾಕಷ್ಟು ನಷ್ಟ, ನೋವು ಆಗಿರುವದಂತು ನಿಜ. ಜಿಲ್ಲೆಯಲ್ಲಿ ಸಾಕಷ್ಟು ಘಟನೆಗಳು ಸಂಭವಿಸುತ್ತಲೆ ಇವೆ. ಆದಾಗ್ಯ ಪಾಲಕರು ಮದುವೆ ವಯಸ್ಸು ಮೀರದೆ ಇದ್ರೂ ಹೊಂಬುತನದಿಂದ ಮದುವೆಗೆ ಏರ್ಪಾಡು ಮಾಡುತ್ತಿರುವುದು ಮಾತ್ರ ದುರಂತ. ಪದೆ ಪದೇ ಇಂತಹ ಘಟನೆಗಳು ಜಿಲ್ಲೆಯಲ್ಲಿ ಸಂಭವಿಸುತ್ತಿರುವುದು ವಿಷಾಧನೀಯವಾಗಿದೆ.

Related Articles

Leave a Reply

Your email address will not be published. Required fields are marked *

Back to top button