ಪ್ರಮುಖ ಸುದ್ದಿ
ಏರ್ ಚೀಫ್ ಆಗಿದ್ದ ಧನೋವಾ ಅವರಿಗೆ ಮೋದಿ ಶುಭಾಶಯ ಕೋರಿದ್ಯಾಕೆ.?
ವಿವಿ ಡೆಸ್ಕ್ಃ ಭಾರತದ ವಾಯು ಸಿಬ್ಬಂದಿ ಮತ್ತು ಏರ್ ಚೀಫ್ ಮಾರ್ಷಲ್ ಬಿ.ಎಸ್. ಧನೋವಾ ಅವರು ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಧನೋವಾ ಅವರಿಗೆ ಶುಭಕೋರಿದ್ದಾರೆ.
ಈ ಸಂದರ್ಭದಲ್ಲಿ ರಾಷ್ಟ್ರಕ್ಕೆ ಅತ್ಯಂತ ಶೌರ್ಯ, ಶ್ರದ್ಧೆ ಮತ್ತು ವೃತ್ತಿಪರತೆಯಿಂದ ಸೇವೆ ಸಲ್ಲಿಸಿದ ಧನೋವಾ ಅವರು ನಮ್ಮ ವಾಯುಪಡೆಗೆ ಸಮೃದ್ಧ ಕೊಡುಗೆ ನೀಡಿದ್ದಾರೆ. ಅವರ ಮುಂದಿನ ಜೀವನ ಸುಖಮಯವಾಗಿರಲಿ ಅವರ ಆಶಯಗಳು ಈಡೇರಿಲಿ ಎಂದು ಪ್ರಧಾನಿ ನರೇಂದ್ರ ಮೋದಿಯವರು ಅವರ ಕೈಕುಲಕಿ ಶುಭಕೋರಿದ್ದಾರೆ.
ಅಲ್ಲದೆ ಮುಂದಿನ ಜೀವನದಲ್ಲಿ ಅವರು ಪ್ರಯತ್ನಿಸುವ ಪ್ರತಿ ಕ್ಷೇತ್ರದಲ್ಲಿ ಯಶಸ್ವಿಯಾಗಿ ಮುಂದುವರೆಯಲಿ ನಿವೃತ್ತಿಯ ಅವರ ಜೀನವ ಸಂತಸದಿಂದಕೂಡಿರಲಿ ಎಂದು ಶುಭಾಶಯಗಳನ್ನು ಮೋದಿಜಿಯವರು ಅವರ ಟ್ವಿಟ್ ನಲ್ಲಿ ಬರೆದುಕೊಂಡಿದ್ದಾರೆ.