ಪ್ರಮುಖ ಸುದ್ದಿ

ಮಕ್ಕಳ ಜತೆ ಮಗುವಾಗುವ ಎಂ.ಬಿ.ಪಾಟೀಲ್.! ಉಪ್ಪಿನ್ ಬರಹ

Mbpatil-Personality

ಮಕ್ಕಳ ಜತೆ ಮಗುವಾಗುವ ಎಂ.ಬಿ.ಪಾಟೀಲ್!

ದಕ್ಕೇ ಇವರ ಗುಣ ಇಷ್ಟವಾಗೋದು. ಇವತ್ತು ಬಬಲೇಶ್ವರ ಕ್ಷೇತ್ರದ ಬಿಜ್ಜರಗಿಗೆ ಹೋಗಿದ್ದಾಗ, ಇವರು ಕಾರಲ್ಲಿದ್ದದ್ದನ್ನು ನೋಡಿದ ಮಕ್ಕಳು ಹುರುಪಿನಿಂದ ಕೈ ಬೀಸಿ ಓ…‌ ಎಂದು ಕೂಗಿದರು.

ಇದನ್ನು ಕಂಡ ಪಾಟೀಲರು ಕಾರು ನಿಲ್ಲಿಸಿ, ಮಕ್ಕಳನ್ನು ಕರಕೊಂಡು ಮಾತಾಡಿಸುತ್ತ ಫೋಟೊ ತೆಗೆಸಿಕೊಂಡರು. ಅವರ ಓದು, ಶಾಲೆಯ ಬಗ್ಗೆ ವಿಚಾರಿಸಿ ತಾವೂ ಮಕ್ಕಳಂತೆ ನಕ್ಕು ನಿರಾಳರಾದರು.

ಇವರು ಹೀಗೇನೆ. ಹಿಂದೊಮ್ಮೆ ನಾನೂ ಇವರ ಜತೆ ಕಾರಲ್ಲಿ ಹೋಗುತ್ತಿರಬೇಕಾದರೆ, ಮಕ್ಕಳು ಮುತ್ತಿಕೊಂಡಿದ್ದರು. ಆಗಲೂ ಅವರ ಜತೆ ಯಾವ ಹಮ್ಮು ಬಿಮ್ಮಿಲ್ಲದೆ ಮಾತಾಡಿಸಿ, ‘ಕ್ರಿಕೆಟ್ ಆಡೋಕೆ ಬ್ಯಾಟ್-ಬಾಲ್ ಕೊಡಿಸಿದ್ದೆನಲ್ಲ.. ಆಡ್ತಿದ್ದೀರಲ್ಲ.. ಛೊಲೊ ಓದ್ರಿ.. ಮತ್ತ ಕೊಡಸ್ತೀನಿ’ ಅಂತ ಹೇಳಿ ಮಮತೆ ಮೆರೆದಿದ್ದರು. ಇವರ ಹಚ್ಚಿಕೊಳ್ಳುವ ಈ ಸ್ವಭಾವದಿಂದಾಗಿ ಕ್ಷೇತ್ರದ ಮಕ್ಕಳು ಇವರನ್ನು ಕಂಡರೆ ಓಡಿ ಬರುತ್ತವೆ, ಪ್ರತಿ ಊರಲ್ಲೂ ಪ್ರೀತಿ ತೋರುತ್ತವೆ.

ಹಣಿಗೆ ಹದಿನಾರು ಗಂಟು ಹಾಕಿ ಓಡಾಡೋ ಮುಖಂಡರೆನ್ನಿಸಿಕೊಂಡವರ ಮಧ್ಯೆ ಒಬ್ಬ ನಾಯಕ ನಮ್ಮವ ಅಂತ ಅನ್ನಿಸುವುದು ಇಂತಹ ಕಾರಣಕ್ಕೇನೆ. ಬಬಲೇಶ್ವರದ ಸಣ್ಣ ಹುಡಗನೇ ಬಂದರೂ ಆತನಿಗೆ ಸ್ಪಂದಿಸುತ್ತಾರೆ.

ಕ್ಷೇತ್ರದ ಜನರಿಗೆ ಇವರದು ಮೊದಲ ಆದ್ಯತೆ, ತಮ್ಮ ಮನೆಯಲ್ಲಿ ಅವರಿಗೆಂದೇ ಭೇಟಿಗೆ ದೊಡ್ಡ ಹಾಲ್. ಅದಕ್ಕೇ ಇವರು ಇಲ್ಲಿ ಸರಳವಾಗಿ ಈ ಜನರ ಪ್ರೀತಿಯಿಂದಲೇ ಪ್ರತಿ ಸಲ ಗೆಲ್ಲೋದು. ಇದು ರಾಜಕಾರಣದ ಸಾರ್ಥ್ಯಕ್ಯವಲ್ಲವೆ?

ಶಿವಕುಮಾರ್ ಉಪ್ಪಿನ

Related Articles

Leave a Reply

Your email address will not be published. Required fields are marked *

Back to top button