ಪ್ರಮುಖ ಸುದ್ದಿ
ನೂತನ 10 ಸಚಿವರಿಗೆ ಖಾತೆ ಹಂಚಿಕೆ ಮಾಡಿದ BSY
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೂತನವಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಎಲ್ಲಾ ಹತ್ತು ಮಂದಿ ಸಚಿವರಿಗೆ ಖಾತೆ ಹಂಚಿಕೆ ಮಾಡುವ ಮೂಲಕ ಪಕ್ಷದಲ್ಲಿ ಆತಂಕ ಮೂಡಿಸಿದ್ದ ಭಿನ್ನಮತ 80% ಶಮನವಾದಂತಾಗಿದೆ.
ಮುಖ್ಯಮಂತ್ರಿ ಕಾರ್ಯಾಲಯದಿಂದ ಬಿಡುಗಡೆ ಮಾಡಿರುವಂತಹ ಅಧಿಸೂಚನೆ ಪ್ರಕಾರ, ರಮೇಶ್ ಜಾರಕಿಹೊಳಿ(ಬೃಹತ್ ನೀರಾವರಿ), ಬಿಸಿ ಪಾಟೀಲ್(ಇಂಧನ), ಡಾ.ಸುಧಾಕರ್ (ವೈದ್ಯಕೀಯ ಶಿಕ್ಷಣ), ಆನಂದ್ ಸಿಂಗ್(ಗಣಿ ಮತ್ತು ಭೂವಿಜ್ಞಾನ), ನಾರಾಯಣ ಗೌಡ (ಆಹಾರ ಮತ್ತು ನಾಗರಿಕ ಸರಬರಾಜು, ಶಿವರಾಮ್ ಹೆಬ್ಬಾರ(ಪುರಸಭೆ ಆಡಳಿತ), ಎಸ್ ಟಿ ಸೋಮಶೇಖರ್ (ಸಹಕಾರ), ಭೈರತಿ ಬಸವರಾಜು(ನಗರಾಭಿವೃದ್ಧಿ), ಗೋಪಾಲಯ್ಯ(ಕಾರ್ಮಿಕ) ನತ್ತು ಶ್ರೀಮಂತ ಪಾಟೀಲ(ಸಕ್ಕರೆ) ಖಾತೆ ನೀಡಲಾಗಿದೆ ಆದರೆ ಆನಂದ್ ಸಿಂಗ್ ಅವರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.
ಆನಂದ್ ಸಿಂಗ್ ವಿರುದ್ಧ ಹಲವಾರು ಅಕ್ರಮ ಗಣಿಗಾರಿಕೆ ಪ್ರಕರಣಗಳು ಇರುವ ಕಾರಣ ವಿವಾದ ಭುಗಿಲೇಳುವ ಲಕ್ಷಣಗಳು ಗೋಚರಿಸುತ್ತಿವೆ.