ಪ್ರಮುಖ ಸುದ್ದಿ
ವಲಸಿಗರು ರಾಜೀನಾಮೆಗೆ ಚಿಂತನೆ ಎಂಬುದು ಸುಳ್ಳು – ಬಿ.ಸಿ.ಪಾಟೀಲ್
ವಲಸಿಗರು ರಾಜೀನಾಮೆಗೆ ಚಿಂತನೆ ಎಂಬುದು ಸುಳ್ಳು – ಬಿ.ಸಿ.ಪಾಟೀಲ್
ಬೆಂಗಳೂರಃ ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಿಂದ ವಲಸೆ ಬಂದಿದ್ದ ಬಿಜೆಪಿಗೆ ಸೇರ್ಪಡೆಯಾಗಿ ಶಾಸಕರಾಗಿ ಸಚಿವರಾಗಿರುವ ಎಲ್ಲರೂ ರಾಜೀನಾಮೆಗೆ ಚಿಂತನೆ ನಡೆಸಿದ್ದಾರೆ ಎಂಬುದು ಶುದ್ಧ ಸುಳ್ಳು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.
ಯಡಿಯೂರಪ್ಪ ನವರನ್ನು ಭೇಟಿ ಮಾಡಿ ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ನಾವ್ಯಾರು ರಾಜೀನಾಮೆ ನೀಡುವ ಪ್ರಮೇಯವೇ ಬರುವದಿಲ್ಲ ಎಂದಿದ್ದಾರೆ. ಸಚಿವ ಎಂಟಿಬಿ ನಾಗರಾಜ & ಸಚಿವ ಸುಧಾಕರ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಲು ಬಂದಿದ್ದೇವೆ.
ಹೈಕಮಾಂಡ್ ಸೂಚಿಸಿದರೆ ನಾವು ರಾಜೀನಾಮೆ ನೀಡುತ್ತೇವೆ. ಬಿಎಸ್ ವೈ ಇರೋವರೆಗೂ ಜೊತೆಗೆ ಇರುತ್ತೇವೆ. ಹೈಕಮಾಂಡ್ ಕೊಡುವ ನಿರ್ದೇಶನವನ್ನು ಎಲ್ಲರೂ ಪಾಲಿಸುತ್ತೇವೆ ನಮಗ್ಯಾವ ಆತಂಕವಿಲ್ಲ ಎಂದು ಜಂಟಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.