ಶೇ.70 ರಷ್ಟು ಬೋಧನಾ ಶುಲ್ಕ ಮಾತ್ರ ಪಡೆಯಲು ಸಚಿವ ಸುರೇಶಕುಮಾರ ಮನವಿ
ಶೇ.70 ರಷ್ಟು ಬೋಧನಾ ಶುಲ್ಕ ಮಾತ್ರ ಪಡೆಯಲು ಸಚಿವ ಸುರೇಶಕುಮಾರ ಮನವಿ
ವಿವಿ ಡೆಸ್ಕ್ಃ ರಾಜ್ಯದ ಎಲ್ಲಾ ಮಾದರಿ ಖಾಸಗಿ ಶಾಲೆಗಳು ಕೇವಲ ಬೋಧನಾ ಶುಲ್ಕ ಅದರಲ್ಕೂ ಶೇ.70 ರಷ್ಟು ಮಾತ್ರ ಈ ಶುಲ್ಕ ಪಡೆಯಬೇಕೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಎನ್ನಲಾಗಿದೆ.
ಈ ಕುರಿತು ಶಿಕ್ಷಣ ಸಚಿವ ಸುರೇಶಕುಮಾರ ಮಾಧ್ಯಮಕ್ಕೆ ಮಾಹಿತಿ ನೀಡಿದ್ದು, ಬೋಧನಾ ಶುಲ್ಕ ಹೊರತು ಪಡಿಸಿ ಬೇರೆ ಯಾವುದೇ ಹೆಚ್ಚುವರಿ ಶುಲ್ಕ ಪಡೆಯುವಂತಿಲ್ಲ. ಯಾವುದೇ ಶಾಲಾ ಅಭಿವೃದ್ಧಿ ಶುಲ್ಕ ವಸೂಲಿ ಮಾಡುವಂತಿಲ್ಲ.
ಬೋಧನಾ ಶುಲ್ಕದಲ್ಲಿ ಶೇ.70ಕ್ಕಿಂತ ಇನ್ನೂ ಕಡಿಮೆ ತೆಗೆದುಕೊಂಡರೆ ಒಳಿತು. ಆದರೆ ಯಾವುದೇ ಕಾರಣಕ್ಕೂ ಹೆಚ್ವುವರಿ ಶುಲ್ಕ ಪಡೆಯುವಂತಿಲ್ಲ ಎಂದು ತಿಳಿಸಿದರು.
ಅಲ್ಲದೆ ಈಗಾಗಲೇ ಪೂರ್ಣ ಶುಲ್ಕ ಭರಿಸಿದ ಪೋಷಕರು ಆತಂಕ ಪಡುವ ಅಗತ್ಯವಿಲ್ಲ.
ಪೂರ್ಣ ಪ್ರಮಾಣ ಕಟ್ಟಿದ ಶುಲ್ಕದಲ್ಲಿ ಹೆಚ್ಚಿನ ಶುಲ್ಕವನ್ನು ಮುಂದಿನ ವರ್ಷದ ಶುಲ್ಕದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಮಾಜದ ಎಲ್ಲಾಸ್ತರದ ಜನ ಕೋವಿಡ್ ಹಿನ್ನೆಲೆ ಸಂಕಷ್ಟ ಎದುರಿಸುವಂತಾಗಿದೆ. ಮಕ್ಕಳ ಶೈಕ್ಷಣಿಕ ಭವಿಷ್ಯ ಡೋಲಾಯಮಾನವಾಗಿದ್ದು ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿ ಪರಸ್ಪರರು ಸಹಕಾರ ಮನೋಭಾವದಿಂದ ಕೊಟ್ಟು ಪಡೆದುಕೊಳ್ಳುವ ಮನೋಭಾವನೆಯನ್ನು ಹೊಂದಿರಬೇಕು ಎಂದು ತಿಳಿಸಿದರು.