ಆಧ್ಯಾತ್ಮಿಕ ಚಿತ್ರಪ್ರದರ್ಶನಿ ಹೊಂದಿರುವ ಬಸ್ ಮಾ.13 ರಂದು ನಗರಕ್ಕೆ ಆಗಮನ- ಬ್ರಹ್ಮಕುಮಾರೀಸ್ ಶಹಾಪುರ
ಸ್ವರ್ಣಿಮ ಭಾರತ ನಿರ್ಮಾಣಕ್ಕಾಗಿ..! ಬ್ರಹ್ಮಾಕುಮಾರಿ ವಿಶ್ವವಿದ್ಯಾಲಯದಿಂದ ಜಾಗೃತಿ ಅಭಿಯಾನ
ಯುವ ಶಕ್ತಿ ಜಾಗೃತಿಗಾಗಿ ವಿಶೇಷ ಕಾರ್ಯಕ್ರಮ
ಶಹಾಪುರಃ ಭಾರತೀಯ ಸಂಸ್ಕøತಿಯ ಮೂಲಭೂತ ಗುಣಗಳನ್ನು ಪುನಃ ಜಾಗೃತಿಗೊಳಿಸಿ ನಮ್ಮ ಭಾರತಕ್ಕೆ ವಿಶ್ವಗುರುವಿನ ಮುಕುಟ ತೊಡಿಸುವ ಸ್ವರ್ಣಿಮ ಸಮಯದಲ್ಲಿ ಸ್ವರ್ಣಿಮ ಭಾರತ ನಿರ್ಮಾಣಕ್ಕಾಗಿ ದೇಶದ ಯುವ ಶಕ್ತಿ ಜಾಗೃತಿಗಾಗಿ ಸುಂದರವಾಗಿ ಶೃಂಗರಿಸಿರುವ ಆಧ್ಯಾತ್ಮಿಕ ಚಿತ್ರಪ್ರದರ್ಶನಿ ಹೊಂದಿರುವ ವಿಶೇಷ ಬಸ್ ಮಾ.13 ರಂದು ನಗರಕ್ಕೆ ಆಗಮಿಸಲಿದೆ ಎಂದು ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಅಂದು ಬೆಳಗ್ಗೆ ಭೀಮರಾಯನ ಗುಡಿ ಮೂಲಕ ಶಹಾಪುರ ನಗರದ ಪ್ರವೇಶಿಸುವ ವಿಶೇಷ ಬಸ್‍ನ್ನು ಸ್ವಾಗತಿಸಿಕೊಳ್ಳುವ ಮೂಲಕ, ನಗರದ ಡಿಗ್ರಿ ಕಾಲೇಜು, ವಿಶ್ವಜ್ಯೋತಿ ಮತ್ತು ಯಶಸ್ವಿನಿ ಸೇರಿದಂತೆ ಇತರೆ ಕಾಲೇಜುಗಳಲ್ಲಿ ಅಭಿಯಾನ ಸಂದೇಶ ಕಾರ್ಯಕ್ರಮಗಳು ಜರುಗಲಿವೆ. ನಂತರ ಸಂಜೆ ನಗರದಲ್ಲಿ ಹಳೇ ಬಸ್ ನಿಲ್ದಾಣ, ಬಸವೇಶ್ವರ ವೃತ್ತ, ಮೋಚಿಗಡ್ಡಾ, ಗಾಂಧಿ ವೃತ್ತ ಮತ್ತು ಸಿಬಿ ಕಮಾನ್ ಮೂಲಕ ಸಿಪಿಎಸ್ ಶಾಲಾ ಮೈದಾನದವರೆಗೆ ಬೈಕ್ ರ್ಯಾಲಿ ನಡೆಯಲಿದೆ.
ನಂತರ ಸಿಪಿಎಸ್ ಮೈದಾನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವಿಶೇಷ ಜಾಗೃತಿ ಸಂದೇಶ ನೀಡುವ ಕಾರ್ಯಕ್ರಮ ನಡೆಯಲಿದೆ. ನಗರದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆಯಬೇಕು ಎಂದು ಆಯೋಕರು ತಿಳಿಸಿದ್ದಾರೆ.
ಈ ಸಮಾರಂಭ ಉದ್ಘಾಟಕರಾಗಿ ಶಾಸಕ ಗುರು ಪಾಟೀಲ್ ಶಿರವಾಳ, ಗೌರವಾನ್ವಿತ ಅತಿಥಿಗಳಾಗಿ ಮಾಜಿ ಸಚವಿ ಶರಣಬಸ್ಸಪ್ಪಗೌಡ ದರ್ಶನಾಪುರ ಸೇರಿದಂತೆ ಸರ್ವ ಧರ್ಮದ ಗುರುಗಳು ಗಣ್ಯರು ಇತರರು ಭಾಗವಹಿಸಲಿದ್ದಾರೆ. ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಆಯೋಜಕರು ಕೋರಿದ್ದಾರೆ.