ಪ್ರಮುಖ ಸುದ್ದಿ
TRENDING : ಮೋದಿ ಮೋಡಿ… ಗುಜರಾತಿನಲ್ಲಿ ಮತ್ತೆ ಕಮಲದ್ದೇ ಕಾರುಬಾರು!
ಗುಜರಾತ: ಮತದಾನೋತ್ತರ ಸಮೀಕ್ಷೆಗಳು ನಿಜವಾಗಲಿವೆ ಎಂಬ ಮುನ್ಸೂಚನೆ ಸಿಕ್ಕಿದೆ. ಗುಜರಾತಿನಲ್ಲಿ ಮತ ಎಣಿಕೆ ಕಾರ್ಯ ಸಾಗಿದ್ದು ಬೆಳಗ್ಗೆ 8:45ರ ವೇಳೆಗೆ 93 ಮತಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿರುವ ಫಲಿತಾಂಶ ವರದಿಯಾಗಿದೆ. ಇನ್ನು 50 ಸ್ಥಾನಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಸದ್ಯದ ಟ್ರೆಂಡ್ ಪ್ರಕಾರ ಗುಜರಾತಿನಲ್ಲಿ ಪ್ರಧಾನಿ ಮೋದಿ ಹವಾ ಕಳೆಗುಂದಿಲ್ಲ. ಮೋದಿ ಹವಾದಲ್ಲಿ ಬಿಜೆಪಿ ಮತ್ತೆ ಗುಜರಾತಿನಲ್ಲಿ ಅಧಿಕಾರ ಹಿಡಿಯಲಿದೆ ಎಂಬುದು ಸ್ಪಷ್ಟವಾಗಿದೆ.
ಬೆಳಗ್ಗೆ 11ಗಂಟೆ ಸುಮಾರಿಗೆ ಗುಜರಾತ ಆಳ್ವಿಕೆ ನಡೆಸುವ ಅಧಿಪತಿ ಯಾರೆಂಬ ಫಲಿತಾಂಶ ಅಧಿಕೃತವಾಗಿ ಹೊರಬೀಳಲಿದೆ. ಮತ್ತೊಂದು ಕಡೆ ಹಿಮಾಚಲ ಪ್ರದೇಶದಲ್ಲೂ ಬಿಜೆಪಿ ಮುನ್ನಡೆಯಲ್ಲಿದ್ದು ಗುಜರಾತ್ ಮತ್ತು ಹಿಮಾಚಲ ಪ್ರದೇಶ ಎರಡೂ ರಾಜ್ಯಗಳಲ್ಲೂ ಕಮಲ ಅರಳುವ ಮುನ್ಸೂಚನೆ ಸಿಕ್ಕಿದೆ. ಮೋದಿ ಮೋಡಿಗೆ ಎರಡೂ ರಾಜ್ಯದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡುವ ಟ್ರೆಂಡ್ ಗೋಚರಿಸುತ್ತಿದೆ.