ಪ್ರಮುಖ ಸುದ್ದಿ
ಪ್ರಾಮಾಣಿಕರಿಗೆ ಮೋದಿ ಕಂಡ್ರೆ ಇಷ್ಟ ಭ್ರಷ್ಟರಿಗೆ ಕಡು ಕಷ್ಟ.!
ಭ್ರಷ್ಟರ ಪಾಲಿಗೆ ಕೇಂದ್ರ ಸರ್ಕಾರ ಸಿಂಹ ಸ್ವಪ್ನ
ಹುಬ್ಬಳ್ಳಿಃ ಭ್ರಷ್ಟಾಚಾರಿಗಳಿಗೆ ಮೋದಿ ಅಂದ್ರೆ ಕಡುಕಷ್ಟವಾಗಿದೆ. ಪ್ರಾಮಾಣಿಕರಿಗೆ ಮೋದಿ ಬಲು ಇಷ್ಟವಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದರು.
ನಗರದ ಕೆಎಲ್ಇ ಮೈದಾನದಲ್ಲಿ ನಡೆದ ಬಿಜೆಪಿ ಪಕ್ಷದ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಬೇನಾಮಿ ಹಣ ಗಳಿಸಿದ ಪ್ರಭಾವಿಗಳ ಹೆಸರನ್ನು ಹೇಳದೆ ತಮ್ಮ ಭಾಷಣದಲ್ಲಿ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಗೆ ಟಾಂಗ್ ಕೊಟ್ಟ ಮೋದಿಯವರು, ಬೇನಾಮಿ ಹಣ ಗಳಿಸಿದವರು ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡುತ್ತಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಅಧಿನಾಯಕಿ ವಿರುದ್ಧ ಹರಿಹಾಯ್ದರು.