ಪ್ರಮುಖ ಸುದ್ದಿಸರಣಿ

ಪ್ರಧಾನಿ ಮೋದಿ ಮತ್ತು ಮುದ್ದು ಮಗು!

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಇನ್​ಸ್ಟಾಗ್ರಾಂ ಅಕೌಂಟ್ ನಲ್ಲಿ ಪೋಸ್ಟ್ ಮಾಡಿದ ಚಿತ್ರಗಳಿಂದು ಭಾರೀ ವೈರಲ್ ಆಗಿದ್ದು ಜನ ಮೆಚ್ಚುಗೆ ಗಳಿಸಿವೆ. ಮಗುವೊಂದನ್ನು ಎತ್ತಿಕೊಂಡು ಆತ್ಮೀಯವಾಗಿ ಆಡಿಸುತ್ತಿರುವ ಫೋಟೋಸ್ ಲಕ್ಷಾಂತರ ಜನರ ಲೈಕ್ಸ್​ ಪಡೆದುಕೊಂಡಿವೆ.

‘ಸಂಸತ್ತಿನಲ್ಲಿ ಇಂದು ನನ್ನನ್ನು ಭೇಟಿಯಾಗಲು ಬಹಳ ವಿಶೇಷ ಸ್ನೇಹಿತರೊಬ್ಬರು ಬಂದಿದ್ರು’ ಎಂದು ಫೋಟೋ ಕ್ಯಾಪ್ಶನ್​ ಕೊಡಲಾಗಿದ್ದ ಚಿತ್ರಗಳು ಜನರ ಮೆಚ್ಚುಗೆಗೆ ಪಾತ್ರವಾಗಿದ್ದಲ್ಲದೆ ತೀವ್ರ ಕುತೂಹಲ ಮೂಡಿಸಿದ್ದವು. ಪುಟ್ಟ ಮಗು ಬಿಜೆಪಿ ಸಂಸದ ಸತ್ಯನಾರಾಯಣ್ ಅವರ ಮೊಮ್ಮಗು ಎಂದು ತಿಳಿದು ಬಂದಿದೆ.

Related Articles

Leave a Reply

Your email address will not be published. Required fields are marked *

Back to top button