ವಿದ್ಯಾರ್ಥಿಗಳಲ್ಲಿ ಮೊದಲು ಆತ್ಮವಿಶ್ವಾಸ ಮುಖ್ಯ – ದರ್ಶನಾಪುರ
ಆತ್ಮ ವಿಶ್ವಾಸದ ಮೂಲಕ ಶಿಕ್ಷಣದಲ್ಲಿ ಮುಂದೆ ಸಾಗಿ: ದರ್ಶನಾಪುರ
ಶಹಾಪುರ: ವಿದ್ಯಾರ್ಥಿಗಳು ಮೊದಲು ಆತ್ಮವಿಶ್ವಾಸ ಮೂಡಿಸಿ ಕೊಳ್ಳುವುದರ ಜೊತೆಗೆ ಸ್ವಪ್ರಯತ್ನದ ಮೂಲಕ ಶಿಕ್ಷಣದಲ್ಲಿ ಯಶಸ್ಸು ಸಾಧಿಸÀಬೇಕು ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ಸಮೀಪದ ಭೀಮರಾಯನ ಗುಡಿ ಹಿರಿಯ ಪ್ರಾಥಮಿಕ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನಮ್ಮನ್ನು ಅಂದರೆ ಪಾಲಕರನ್ನು ನೋಡಿ ಮಕ್ಕಳು ಕಲಿಯುತ್ತವೆ. ಕಾರಣ ಮನೆಯಲ್ಲಿ ಮಕ್ಕಳನ್ನು ಬೆಳೆಸುವ ನಾವೆಲ್ಲರೂ ಅವರ ಕಣ್ಣೆದುರು ಚನ್ನಾಗಿರಬೇಕು. ಕೆಟ್ಟದ್ದನ್ನು ಮಾತನಾಡಬಾರದು, ಕೆಟ್ಟ ಕೆಲಸ ಮಾಡಬಾರದು ಬಹು ಎಚ್ಚರಿಕಯಿಂದ ನಡೆದುಕೊಳ್ಳಬೇಕು. ನಮ್ಮನ್ನೆ ಅನುಸರಿಸುವ ಮಕ್ಕಳು ನಾವು ಪ್ರತಿ ತಪ್ಪನ್ನು ಗ್ರಹಿಸುತ್ತಾರೆ ಆ ಬಗ್ಗೆ ಅರಿತುಕೊಂಡು ನಾವು ಬದುಕನ್ನು ರೂಪಿಸಿಕೊಳ್ಳಬೇಕು.
ಪೋಷಕರು ಮತ್ತು ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಗುಣಾತ್ಮಕ ಶಿಕ್ಷಣಕ್ಕೆ ಬೇಕಾದ ವ್ಯವಸ್ಥೆ ಕಲ್ಪಿಸಬೇಕು. ಬೇರೆ ಭಾμÉ ಕಲಿಯುವುದರ ಜೊತೆಗೆ ಮಾತೃಭಾμÉಯಲ್ಲಿ ಪಡೆದ ಶಿಕ್ಷಣ ಪ್ರಗತಿಗೆ ಮೇಲ್ಪಂಕ್ತಿ ಆಗುತ್ತದೆ. ವಿದ್ಯಾರ್ಥಿಗಳ ನಡೆನುಡಿ ಒಂದಾಗಿರಬೇಕು, ಕನಸು ದೊಡ್ಡದಿರಬೇಕು ಒಳ್ಳೆ ಪುಸ್ತಕ, ಒಳ್ಳೆಯ ಕಾರ್ಯಕ್ರಮಗಳನ್ನು ನೋಡುವ ಮೂಲಕ ಪ್ರತಿಯೊಬ್ಬರು ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ಸಮಾರಂಭ ಅಧ್ಯಕ್ಷತೆಯನ್ನು ಶಾಲೆಯ ಕಾರ್ಯದರ್ಶಿ ಮೂರ್ತಿ ಮುದಗಲ್ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಚೆನ್ನವೀರಯ್ಯ ಮಠಪತಿ ಎಇಇ ಕೆಬಿಜೆಎನ್‍ಎಲ್, ಖಾಸಗಿ ಶಿಕ್ಷಣ ಸಂಸ್ಥೆಯ ಮಲ್ಲಿಕಾರ್ಜುನ ಪಾಟೀಲ ಕನ್ಯಾಕೋಳೂರ, ಮುಖ್ಯಗುರು ಗುಂಡಯ್ಯ, ಸಂಸ್ಥೆಯ ಮುಖ್ಯಸ್ಥ ಶರಣಪ್ಪ ಕಟ್ಟಿಮನಿ, ಅಶೋಕ ಘನಾತೆ, ರಾಮು ಸಗರ ಸೇರಿದಂತೆ ಶಾಲೆಯ ಶಿಕ್ಷಕರು ಪಾಲಕರು ಸಿಬ್ಬಂದಿಯವರು ವಿದ್ಯಾರ್ಥಿಗಳು ಇದ್ದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಶಾಸಕರಿಗೆ ಗೌರವಿಸಲಾಯಿತು. ಮಕ್ಕಳಿಂದ ವೈಶಿಷ್ಟ್ಯಪೂರ್ಣವಾದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲಕರು ಭಾಗವಹಿಸಿದ್ದರು.