ಪ್ರಮುಖ ಸುದ್ದಿಮಹಿಳಾ ವಾಣಿ
ಅತ್ಯುತ್ತಮ ಖಳ ನಾಯಕಿ ಪ್ರಶಸ್ತಿಗೆ ಪಾತ್ರಳಾದ ‘ಅಗ್ನಿಸಾಕ್ಷಿ’ ಯ ಚಂದ್ರಿಕಾ
ಅತ್ಯುತ್ತಮ ಖಳ ನಾಯಕಿ ಪ್ರಶಸ್ತಿಗೆ ಚಂದ್ರಿಕಾ ಭಾಜನ
ವಿವಿಡೆಸ್ಕ್ಃ ಕಲರ್ಸ್ ಕನ್ನಡ ವಾಹಿನಿ ಪ್ರತಿ ವರ್ಷ ಆಯೋಜಿಸುವ ಅದ್ದೂರಿ ಅನುಬಂಧ ಕಾರ್ಯಕ್ರಮದಲ್ಲಿ ಧಾರಾವಾಹಿಗಳಲ್ಲಿ ನಟಿಸುವ ಅದ್ಭುತ ಕಲಾವಿದರಿಗೆ ನೀಡುವ ಪ್ರಮುಖ ಪ್ರಶಸ್ತಿಗಳಲ್ಲಿ ಒಂದಾದ ಖಳನಾಯಕಿ ಪಾತ್ರಕ್ಕೆ ಅಗ್ನಿಸಾಕ್ಷಿಯ ಚಂದ್ರಿಕಾ ಪಾತ್ರಕ್ಕೆ ಅತ್ಯುತ್ತಮ ಖಳನಾಯಕಿ ಪ್ರಶಸ್ತಿ ದೊರೆತಿದೆ.
ಚಂದ್ರಿಕಾ ಪಾತ್ರದಲ್ಲಿ ಮಿಂಚಿದ ಪ್ರಿಯಾಂಕಾ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಧಾರಾವಾಹಿಯ ನಾಯಕಿಗೆ ಸಮನಾಗಿ ಈ ಪಾತ್ರವಿದ್ದು, ಅತ್ಯಂತ ಗಟ್ಟಿಯಾಗಿ ಪ್ರಿಯಾಂಕ ನಿರ್ವಹಿಸಿಸುತ್ತಿದ್ದಾರೆ.
ತಮ್ಮ ಉತ್ತಮ ನಟನೆಗೆ ಪ್ರಿಯಾಂಕಾ ಈ ಪ್ರಶಸ್ತಿ ಬಾಚಿಕೊಂಡಿರುವದು ನಟಿಗೆ ಸಂತಸ ಹಿಮ್ಮಡಿಗೊಳಿಸಿದೆ.
ಈ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಸೇರಿದಂತೆ ನಟ ಪುನೀತ್ ರಾಜಕುಮಾರ, ನಟಿ ರಚಿತಾ ರಾಮ್, ಗಣೇಶ ಮತ್ತು ಜಗ್ಗೇಶ ಸೇರಿದಂತೆ ಗಣ್ಯಾತಿಗಣ್ಯರು ಇದ್ದರು.