YADGIRI- ಕೊಲೆ ಪ್ರಕರಣಃ 11 ಆರೋಪಿಗಳ ಬಂಧನ
ಕರ್ಕಳ್ಳಿ ಕೊಲೆ ಪ್ರಕರಣಃ 11 ಆರೋಪಿಗಳ ಬಂಧನ
YADGIRI,ಶಹಾಪುರ: ತಾಲ್ಲೂಕಿನ ಕರ್ಕಳ್ಳಿ ಗ್ರಾಮದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮಂಗಳವಾರ ನಡೆದಿದ್ದ ಶರಣಪ್ಪ ಹೂಗಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಗೈದ 11 ಆರೋಪಿಗಳನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ ಸೋನಾವಣೆ ಮಾರ್ಗದರ್ಶನದಲ್ಲಿ ಹಾಗೂ ಡಿವೈಎಸ್ಪಿ ವೆಂಕಟೇಶ ಉಗಿಬಂಡಿ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು.
ಅದರಂತೆ ಆರೋಪಿಗಳಾದ ಹಣಮಂತರಾಯ ಹೂಗಾರ, ದೇವಿಂದ್ರಪ್ಪ ಹೂಗಾರ, ಸಂತೋಷ ಹೂಗಾರ ಅಲ್ಲದೆ ಕೊಲೆಯಲ್ಲಿ ಭಾಗಿಯಾದ 8 ಮಹಿಳೆಯರನ್ನು ಬಂಧಿಸಲಾಗಿದೆ ಎಂದು ಗ್ರಾಮೀಣ ಸಿಪಿಐ ಶ್ರೀನಿವಾಸ ಅಲ್ಲಾಪುರೆ ತಿಳಿಸಿದರು.
ಗ್ರಾಮದ ಮಾರುತಿ ದೇವಸ್ಥಾನದ ಆಸ್ತಿ ವಿವಾದವು ಹಲವು ವರ್ಷಗಳಿಂದ ವ್ಯಾಜ್ಯ ನಡೆದಿತ್ತು. ಇದರಿಂದ ಅಣ್ಣ ತಮ್ಮಂದಿರ ನಡುವೆ ದ್ವೇಷಕ್ಕೆ ಕಾರಣವಾಗಿ ಮಂಗಳವಾರ ಬೆಳಿಗ್ಗೆ ಶರಣಪ್ಪ ಹೂಗಾರ ಅವರನ್ನು 17 ಆರೋಪಿಗಳು ಕೂಡಿಕೊಂಡು ಕೊಲೆ ಮಾಡಿದ ಬಗ್ಗೆ ಗೋಗಿ ಠಾಣೆಯಲ್ಲಿ ದೂರು ದಾಖಲಾಗಿತ್ತು.
——————–