ಶಹಾಬಾದ್ ಪುರಸಭೆ ಮಾಜಿ ಅಧ್ಯಕ್ಷನ ಗಿರೀಶ್ ಕಗ್ಗೊಲೆ
ಕಾಂಗ್ರೆಸ್ ಮುಖಂಡ ಗಿರೀಶ್ ಕಗ್ಗೊಲೆ
ಕಲ್ಬುರ್ಗಿಃ ಜಿಲ್ಲೆಯ ಶಹಬಾದ್ ನಗರದ ರೈಲ್ವೇ ಸ್ಟೇಷನ್ ಹತ್ತಿರ ಪುರಸಭೆ ಮಾಜಿ ಅಧ್ಯಕ್ಷ ಗಿರೀಶ್ ಕಂಬಿನೂರ ಅವರ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದ ಘಟನೆ ಮದ್ಯಾಹ್ನ ನಡೆದಿದೆ.
ಘಟನೆಗೆ ಹಳೇ ವೈಷಮ್ಯವೇ ಕಾರಣ ಎನ್ನಲಾಗಿದ್ದು, ಎರಡು ವರ್ಷಗಳ ಹಿಂದೆ ಇದೇ ರೀತಿ ಗಿರೀಶ್ ಸಹೋದರನನ್ನು ನಡು ಬೀದಿಯಲ್ಲೇ ಕೊಲೆ ಮಾಡಲಾಗಿತ್ತು ಎನ್ನಲಾಗಿದೆ.ಇಬ್ಬರು ಸಹೋದರರು ಕೊಲೆಗೀಡಾಗಿರುವದು ದುರಂತವೇ ಸರಿ.
ಕೊಲೆಯಾದ ಗಿರೀಶ್ ಕಾಂಗ್ರೆಸ್ ಮುಖಂಡನಾಗಿದ್ದು, ಅವರ ಪತ್ನಿ ಅಂಜಲಿ ಗಿರೀಶ ಕಂಬಿನೂರ ಪ್ರಸ್ತುತ ನಗರಸಭೆ ಅಧ್ಯಕ್ಷೆಯಾಗಿದ್ದಾಳೆ. ಗಿರೀಶ್ ಕಗ್ಗೊಲೆಯಿಂದ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ.
ಕೊಲೆಗಡುಕರು ಗಿರೀಶ್ ನ ದೇಹದೊಳಗೆ ತಲವಾರೊಂದು ಬಿಟ್ಟು ತೆರಳಿರುವದು ರಕ್ತದೋಕುಳಿಯಲ್ಲಿ ಮುಳುಗಿದ್ದು,ಆತನ ಕೈ ಕೊಚ್ಚಿ ಹಾಕಿರುವ ಭೀಕರ ದೃಶ್ಯ ನೋಡಿ ಶಹಾಬಾದ್ ನಗರ ಜನತೆ ಬೆಚ್ಚಿಬಿದಿದ್ದಾರೆ. ಈ ಹಿಂದೆ ಈತನ ಸಹೋದರನ ಕೊಲೆ ನಡೆದಾಗಲು ಆತನ ದೇಹದಲ್ಲೂ ಇದೇ ರೀತಿ ಮಾರಕಾಸ್ತ್ರ ಬಿಡಲಾಗಿತ್ತು ಎನ್ನಲಾಗಿದೆ. ಈ ಕುರಿತು ಶಹಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.