ಶಹಾಪುರಃ ಆಸ್ತಿ ವಿವಾದ ವ್ಯಕ್ತಿ ಕೊಲೆ – ಪೊಲೀಸರ ಭೇಟಿ
ಶಹಾಪುರಃ ಆಸ್ತಿ ವಿವಾದ ವ್ಯಕ್ತಿಯ ಕೊಲೆ
ಯಾದಗಿರಿಃ ಆಸ್ತಿ ವಿವಾದ ಹಳೇ ವೈಷಮ್ಯದಿಂದಾಗಿ ವ್ಯಕ್ತಿಯೋರ್ವನನ್ನ ಬರ್ಬರ ಹತ್ಯೆ ಮಾಡಿದ ಘಟನೆ ತಾಲೂಕಿನ ಕರ್ಕಕಳ್ಳಿ ಗ್ರಾಮದಲ್ಲಿ ನಡೆದಿದೆ.
ಶರಣಪ್ಪ ಹೂಗಾರ(70) ಎಂಬ ವ್ಯಕ್ತಿಯೇ ಕೊಲೆಗೀಡಾಗಿದ್ದು, ಆರೊಪಿಗಳು ಮನೆಗೆ ನುಗ್ಗಿ ಆತನನ್ನು ಗ್ರಾಮದ ಹನುಮಾನ್ ಮಂದಿರ ಹತ್ತಿರ ಕರೆ ತಂದು ಹತ್ಯೆಗೈದಿದ್ದಾರೆ ಎನ್ನಲಾಗಿದೆ. ಜೊತೆಗೆ ಆತನ ಪತ್ನಿ, ಬಾಲಕನಿಗೂ ಪೆಟ್ಟು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಕೊಲೆಗೀಡಾದ ವ್ಯಕ್ತಿಯನ್ನ ಕೆಲ ವರ್ಷಗಳ ಹಿಂದೆಯೇ ಗ್ರಾಮದಿಂದ ಬಹಿಷ್ಕರಿಸಲಾಗಿತ್ತು. ಆಸ್ತಿ ಸಂಬಂಧಿಸಿದಂತೆ ನ್ಯಾಯ ಪಂಚಾಯಿತಿಗಳು ನಡೆದಿದ್ದು, ಹತ್ತಾರು ಪ್ರಕರಣಗಳು ಸಹ ಶರಣಪ್ಪ ಹೂಗಾರ ಕುಟುಂಬ ದಾಖಲಿಸಿತ್ತು ಎನ್ನಲಾಗಿದೆ.
ಇದೀಗ ತಾರ್ಕಿಕ ಹಂತ ತಲುಪಿದ್ದು, ವ್ಯಕ್ತಿಯ ಹತ್ಯೆಯಿಂದ ಕಾಣದ ಕೈಗಳಿದ್ದು ಪ್ರಕರಣ ಕುರಿತು ತೀವ್ರ ಶೋಧ ನಡೆಯಬೇಕಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಘಟನೆ ಕುರಿತು ಗೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹತ್ಯೆ ನಡೆದ ಸ್ಥಳಕ್ಕೆ ಡಿವೈಎಸ್ಪಿ ಸೇರಿದಂತೆ ಪೊಲಿಸರು ಭೇಟಿ ನೀಡಿ ಆರೋಪಿಗಳನ್ನು ಬಂಧಿಸಿವಿ ಚಾರಣೆ ನಡೆಸುತ್ತಿದ್ದಾರೆ.
ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಮೃತ ಶರಣಪ್ಪ ಹೂಗಾರ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತೀವ್ರ ಶೋಧನೆಕೈಗೊಂಡಿದ್ದಾರೆ. ಸತ್ಯಾಸತ್ಯತೆ ಕುರಿತು ಪೊಲೀಸರ ಶೋಧನೆ ಕಾರ್ಯ ನಂತರವೇ ಬಯಲಾಗಲಿದೆ.