ಕಳ್ಳತನದ ಮಾಹಿತಿ ನೀಡಿರುವ ಕಾರಣಕ್ಕೆ ಕೊಲೆ..? ಜಾಪಾ ನಾಯಕ ತಾಂಡಾದಲ್ಲಿ ದೀಪಾವಳಿಗೆ ಕವಿದ ಕಾರ್ಮೋಡ
ಲಿಂಗಸೂಗೂರನಲ್ಲಿ ಕಳ್ಳತನ ಮಾಡಿರುವ ಕುರಿತು ಹತ್ಯೇಗೀಡಾದ ವ್ಯಕ್ತಿ ಮಾಹಿತಿ ನೀಡಿದ ಹಿನ್ನೆಲೆ - ಕಗ್ಗೊಲೆ..!
ಕಳ್ಳತನದ ಮಾಹಿತಿ ನೀಡಿರುವ ಕಾರಣಕ್ಕೆ ಕೊಲೆ..?
ಮುಖಕ್ಕೆ ತಲವಾರ್ ಏಟು, ಬೆಚ್ಚಿಬಿದ್ದ ಜನತೆ
ಲಿಂಗಸೂಗೂರನಲ್ಲಿ ಕಳ್ಳತನ ಮಾಡಿರುವ ಕುರಿತು ಹತ್ಯೇಗೀಡಾದ ವ್ಯಕ್ತಿ ಮಾಹಿತಿ ನೀಡಿದ ಹಿನ್ನೆಲೆ – ಕಗ್ಗೊಲೆ..!
ಜಾಪಾ ನಾಯಕ ತಾಂಡಾದಲ್ಲಿ ದೀಪಾವಳಿಗೆ ಕವಿದ ಕಾರ್ಮೋಡ
yadgiri, ಶಹಾಪುರಃ ಶನಿವಾರ ಸಂಜೆ ತಾಲೂಕಿನ ದೋರನಹಳ್ಳಿ ಗ್ರಾಮ ಬಳಿ ಶಹಾಪುರ – ಯಾದಗಿರಿ ಹೆದ್ದಾರಿಯಲ್ಲಿ ವ್ಯಕ್ತಿಯೋರ್ವನ ಕಗ್ಗೊಲೆ ನಡೆದಿದ್ದು, ಕೊಲೆಯಾದ ವ್ಯಕ್ತಿ ತಾಲೂಕಿನ ಕನ್ಯಾಕೋಳೂರ ವ್ಯಾಪ್ತಿಯ ಜಾಪಾ ನಾಯಕ ತಾಂಡಾದ ನಿವಾಸಿ ತಿಪ್ಪಣ್ಣ ರಾಠೋಡ್(35) ಎಂದು ಗುರುತಿಸಲಾಗಿದೆ.
ಆರೋಪಿಗಳು ಅದೇ ಜಾಪಾ ನಾಯಕ ತಾಂಡಾದ ನಿವಾಸಿಗಳಾಗಿದ್ದು, ಕುಮಾರ @ಕುಮ್ಯಾ ತಂದೆ ಯಮನಪ್ಪ (36) ಮತ್ತು ಹೇಮ್ಯಾ ಚವ್ಹಾಣ (36) ಹಾಗೂ ಲಕ್ಯಾ @ ಲಕ್ಷ್ಮಣ ತಂದೆ ಚಂದು ಚವ್ಹಾಣ (38) ಹತ್ಯೆಯಾದ ತಿಪ್ಪಣ್ಣ ಅವರ ಪತ್ನಿ ಮಂಜುಳಾ ನಗರ ಠಾಣೆಗೆ ನೀಡಿದ ದೂರಿನ ಮೇಲೆ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಆರೋಪಿಗಳ ವೃತ್ತಿ ಕಳ್ಳತನವಾಗಿದ್ದು, ಲಿಂಗಸೂಗೂರಿನಲ್ಲಿ ಕಳ್ಳತನ ಮಾಡಿ ತಾಂಡಾದಲ್ಲಿ ಭೂಗತವಾಗಿದ್ದ ಆರೋಪಿಗಳ ಬಗ್ಗೆ ಲಿಂಗಸೂಗೂರ ಪೊಲೀಸರಿಗೆ ಹತ್ಯೆಗೊಳಗಾದ ವ್ಯಕ್ತಿ ತಿಪ್ಪಣ್ಣ ರಾಠೋಡ್ ಮಾಹಿತಿ ನೀಡಿರುವ ಹಿನ್ನೆಲೆ ಆರೋಪಿಗಳು ಜೈಲು ಪಾಲಾಗಿದ್ದರು.
ಈಚೆಗೆ ಜೈಲಿನಿಂದ ಹೊರ ಬಂದವರೇ ತಿಪ್ಪಣ್ಣನ ಮನೆಗೆ ತೆರಳಿ ವಾರ್ನಿಂಗ್ ಮಾಡಿದ್ದರಂತೆ, ಆಗ ಅಕ್ಕಪಕ್ಕ ತಾಂಡಾದ ಜನರು ಬುದ್ಧಿ ಹೇಳಿ ಗಲಾಟೆ ಬಿಡಿಸಿದ್ದರಂತೆ, ಆಗಲೇ ಅವರು ಆರೋಪಿಗಳು ನೀನು ಭೂಮಿ ಮೇಲೆ ಇದ್ದರೇತಾನೆ.? ಎಂದು ಬೆದರಿಕೆವೊಡ್ಡಿದ್ದರಂತೆ, ಹೀಗಾಗಿ ತನ್ನ ಪತಿಗೆ ಕಾಲ್ ಮಾಡಿ ಕರೆದು ಕುಡಿಸಿ ಹಿಂದಿನಿಂದ ಆರೋಪಿಗಳು ಮಾರಕಾಸ್ತ್ರದಿಂದ ಅಂದರೆ ಮೊನಚಾದ ಅಸ್ತ್ರ, ಮಚ್ಚು ಅಥವಾ ಲಾಂಗ್‍ನಿಂದ ಪತಿ ಮೇಲೆ ಹಲ್ಲೆ ನಡೆಸುವ ಮೂಲಕ ಕೊಂದು ಹಾಕಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಮೂಲಕ ನ್ಯಾಯ ಒದಗಿಸಬೇಕೆಂದು ಪತ್ನಿ ಮಂಜುಳಾ ತಿಪ್ಪಣ್ಣ ರಾಠೋಡ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಅಲ್ಲದೆ ಆರೋಪಿಗಳ ಉದ್ಯೋಗ ಕಳ್ಳತನವಾಗಿದ್ದು, ನನ್ನ ಪತಿ ಅವರ ಕಳ್ಳತನ ಕುರಿತು ಪೊಲೀಸರಿಗೆ ಮಾಹಿತಿ ನೀಡಿರುವದೇ ಮುಳುವಾಯಿತು. ಆರೋಪಿಗಳು ಕೋಪಗೊಂಡ ನನ್ನ ಪತಿಯನ್ನು ಕೊಂದಿದ್ದಾರೆ. ಪೊಲೀಸರು ನ್ಯಾಯ ಒದಗಿಸಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ಈ ಕೊಲೆ ಘಟನೆಯಿಂದ ಜಾಪಾ ನಾಯಕ ತಾಂಡಾದಲ್ಲಿ ನೀರವ ಮೌನ ಆವರಿಸಿದೆ.
ದೀಪಾವಳಿ ಅವರ ಪಾಲಿಗೆ ಕಾರ್ಮೋಡ ಕವಿದಂತಾಗಿದೆ. ದೀಪಾವಳಿಯ ಬೆಳಕು ಮೂಡದೇ ಕರಿ ಮೋಡದ ಛಾಯೆ ಕವಿದಿದೆ ಎಂದರೆ ತಪ್ಪಿಲ್ಲ. ಇಡಿ ತಾಂಡಾ ದುರ್ಘಟನೆ ಕುರಿತು ಚಿಂತೆಗೀಡು ಮಾಡಿದೆ ಎಂದರೆ ತಪ್ಪಿಲ್ಲ. ಒಂದಡೆ ಕೊಲೆಯಾದ ವ್ಯಕ್ತಿ ಕುರಿತು ನೋವುಂಟಾದರೆ, ಇನ್ನೊಂದಡೆ ಕೊಲೆಗೈದು ತಾಂಡಾ ಬಿಟ್ಟು ಓಡಿ ಹೋದ ಆರೋಪಿಗಳ ಬಗ್ಗೆ ಪೊಲೀಸರು ತಾಂಡಾಗೆ ಆಗಮಿಸಿ ಮಾಹಿತಿ ಸಂಗ್ರಹಿಸುವ ಕುರಿತು ತಾಂಡಾ ನಿವಾಸಿಗಳಲ್ಲಿ ಅಕ್ಷರಸಃ ನಿರಾಶೆ ಮೂಡಿದೆ.
ಘಟನಾ ಸ್ಥಳಕ್ಕೆ ಎಸ್‍ಪಿ, ಅಧಿಕಾರಿಗಳ ಭೇಟಿ
ಕೊಲೆ ನಡೆದ ಘಟನಾ ಸ್ಥಳಕ್ಕೆ ಶನಿವಾರ ಸಂಜೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ಹಾಗೂ ಹೆಚ್ಚುವರಿ ಎಸ್ಪಿ ಧರಣೇಶ, ಡಿಎಸ್ಪಿ ಜಾವೀದ್ ಇನಾಂದಾರ ಹಾಗೂ ಸ್ಥಳೀಯ ಠಾಣೆಯ ಪಿಐ ಎಸ್.ಎಂ.ಪಾಟೀಲ್ ಭೇಟಿ ನೀರಿ ಪರಿಶೀಲಿಸಿದರು. ಅಲ್ಲದೆ ಇದೇ ವೇಳೆ ಘಟನೆ ಕುರಿತು ಪೊಲೀಸರಿಂದ ಎಸ್ಪಿ ಅವರು ಸಮರ್ಪಕ ಮಾಹಿತಿ ಪಡೆದುಕೊಂಡರು.
ಹತ್ಯೆಯಾದ ವ್ಯಕ್ತಿಯ ಬೈಕ್, ಮೊಬೈಲ್, ಕೊಡ್ಲಿ ವಶಕ್ಕೆ
ಹತ್ಯೆಗೊಳಗಾದ ವ್ಯಕ್ತಿಯ ಬೈಕ್ ನಲ್ಲಿ ಕೊಡ್ಲಿ ಇದ್ದು, ಕೊಡ್ಲಿ ಸೇರಿದಂತೆ ಆತನ ಮೊಬೈಲ್ ಮತ್ತು ಬೈಕ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಶನಿವಾರ ತಡ ರಾತ್ರಿವರೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಹತ್ಯೆಯಾದ ವ್ಯಕ್ತಿಯ ಮರಣೋತ್ರ ಪರೀಕ್ಷೆ ನಂತರ ಸಂಬಂಧಿಕರಿಗೆ ಶವ ಸಂಸ್ಕಾರ ಮಾಡಲು ಒಪ್ಪಿಸಿದ್ದಾರೆ.
ತನಿಖೆ ಚುರುಕು
ಘಟನೆ ಕುರಿತು ಆರೋಪಿಗಳ ಬಂಧನಕ್ಕೆ ಪಿಐ ಎಸ್.ಎಂ.ಪಾಟೀಲ್ ನೇತೃತರ್ವದ ತಂಡ ಕಾರ್ಯಾಚರಣೆ ಚುರುಕುಗೊಳಿಸಿದ್ದು, ಕನ್ಯಾಕೋಳೂರ ವ್ಯಾಪ್ತಿಯ ಜಾಪಾ ನಾಯಾಕ ತಾಂಡಕ್ಕೆ ಭೇಟಿ ನೀಡಿ ಸಮರ್ಪಕ ಮಾಹಿತಿ ಪಡೆದುಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ. ಈಗಾಗಲೇ ಆರೋಪಿಗಳ ಮಾಹಿತಿ ದೊರೆತಿದ್ದು, ಶೀಘ್ರದಲ್ಲಿ ಬಂಧಿಸುವದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ನನ್ನ ಪತಿ, ಈ ಆರೋಪಿಗಳ ದಂಧೆಯಾಗಿರುವ ಕಳ್ಳತನ ಕುರಿತು ಪೊಲೀಸರಿಗೆ ಮಾಹಿತಿ ನೀಡಿರುವ ಕಾರಣಕ್ಕೆ, ಜೈಲಿನಿಂದ ಬಂದಿದ್ದ ಅವರು ಸೀದಾ ಮನೆಗೆ ಬಂದ ಗಲಾಟೆ ಮಾಡಿದ್ದರು, ಆಗ ತಾಂಡಾದ ಸಂಬಂಧಿಕರು ಎಲ್ಲರೂ ಸೇರಿ ಬುದ್ಧಿವಾದ ಹೇಳಿ ತಡೆದಿದ್ದರು. ನಂತರ ಅವರು ನಿನ್ನ ಮುಗಿಸೋದೆ ಬಿಡುವದಿಲ್ಲ ಎಂದು ಅಂದೇ ಬೆದರಿಕೆಯೊಡ್ಡಿದ್ದರು, ಹೀಗಾಗಿ ಆ ಇಬ್ಬರೇ ಕೊಲೆ ಮಾಡಿದ್ದು, ಅವರಿಗೆ ಸಹಕರಿಸಿದಾತ ಇನ್ನೊಬ್ಬನಿದ್ದಾನೆ. ನನ್ನ ಪತಿಗೆ ಕಾಲ್ ಮಾಡಿ ಕರೆದಿರುವವ ಒಬ್ಬನು ಇವರೊಡನೆ ಸೇರಿ ಪ್ಲಾನ್ ಮಾಡಿ ನನ್ನ ಪತಿಯನ್ನು ಕೊಂದಿದ್ದಾರೆ.
-ಮಂಜುಳಾ ಗಂಡ ತಿಪ್ಪಣ್ಣ ರಾಠೋಡ. ಜಾಪಾ ನಾಯಕ ತಾಂಡ.
—————–