Homeಜನಮನಪ್ರಮುಖ ಸುದ್ದಿಮಹಿಳಾ ವಾಣಿ

ಸಿಂಪಲ್ ಮಶ್ರೂಮ್ ಗ್ರೇವಿ ಈ ರೀತಿ ಮಾಡಿ ರುಚಿ ಸೂಪರ್

ಬೇಕಾಗುವ ಪದಾರ್ಥಗಳು…

ಮಶ್ರೂಮ್ –ಎರಡು ಪ್ಯಾಕೆಟ್
ಬಟಾಣಿ- ಒಂದು ಬಟ್ಟಲು
ಈರುಳ್ಳಿ –2
ಟೊಮೆಟೊ– 4
ದನಿಯಾ ಪುಡಿ– ಎರಡು ಚಮಚ
ಗರಂ ಮಸಾಲ –ಒಂದು ಚಮಚ
ಅರಿಸಿನ ಪುಡಿ– ಒಂದು ಚಮಚ
ಶುಂಠಿ -ಬೆಳ್ಳುಳ್ಳಿ ಪೇಸ್ಟ್- 1 ಚಮಚ
ಕಸ್ತೂರಿ ಮೇಥಿ–ಒಂದು ಚಮಚ
ಸೋಂಪು ಕಾಳು –ಒಂದು ಚಮಚ
ಚಕ್ಕೆ –2
ಲವಂಗ –2
ಸ್ಟಾರ್ ಮಸಾಲ ಹೂ– 2
ಅನಾನಸ್ ಮೊಗ್ಗು-2
ಏಲಕ್ಕಿ –2
ಎಣ್ಣೆ- ನಾಲ್ಕು ಟೇಬಲ್ ಚಮಚ
ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ…

ಪಾತ್ರೆಯಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿಕೊಳ್ಳಬೇಕು. ಕಸ್ತೂರಿ ಮೇಥಿ, ಸೋಂಪು, ಚಕ್ಕೆ -ಲವಂಗ, ಸ್ಟಾರ್ ಮಸಾಲ ಹೂ, ಅನಾನಸ್ ಮೊಗ್ಗು, ಏಲಕ್ಕಿ ಸೇರಿಸಿ ಮಿಶ್ರಣ ಮಾಡಬೇಕು.
ಬಳಿಕ ಹೆಚ್ಚಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು. ಬಳಿಕ ಟೊಮೆಟೊ, ಶುಂಠಿ -ಬೆಳ್ಳುಳ್ಳಿ ಪೇಸ್ಟ್ ಹಾಗೂ ಸ್ವಲ್ಪ ಉಪ್ಪು ಹಾಕಿಕೊಂಡು ಬೆರೆಸಿಕೊಡಬೇಕು.
ನಂತರ ಮಸಾಲ ಪುಡಿಗಳು ಹಾಗೂ ಬಟಾಣಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ನೀರನ್ನು ಹಾಕಿ 5 ನಿಮಿಷಗಳ ಕಾಲ ಬಟಾಣಿ ಬೇಯಲು ಬಿಡಿ. ಇದೀಗ ಕತ್ತರಿಸಿದ ಮಶ್ರೂಮ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
10 ರಿಂದ 15 ನಿಮಿಷ ಬೇಯಲು ಬಿಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಉದುರಿಸಿ. ಇದೀಗ ರುಚಿಕರವಾದ ಮಶ್ರೂಮ್ ಗ್ರೇವಿ ಸವಿಯಲು ಸಿದ್ಧ.

Related Articles

Leave a Reply

Your email address will not be published. Required fields are marked *

Back to top button