ಪ್ರಮುಖ ಸುದ್ದಿ

ಹಾಡು ನಿಲ್ಲಿಸಿದ ಜಾನಪಾದ ಗಾರುಡಿ ಮೈಲಾರಪ್ಪ ಸಗರ

ಕಂಚಿನ ಕಂಠದ ಜಾನಪದ ಗಾರುಡಿ ಮೈಲಾರಪ್ಪ ಸಗರ ವಿಧಿವಶ

ಸಗರನಾಡ ಜಾನಪದ ಗಾರುಡಿಗೆ ಭಾವಪೂರ್ಣ ಶ್ರದ್ಧಾಂಜಲಿ

ಶಹಾಪುರಃ ಕಂಚಿನ ಕಂಠದ ಗಾಯಕ, ಗೋಕಾಕ ಚಳುವಳಿಗಾರ, ರೈತ ಸಂಘದ ದಿಟ್ಟ ಹೋರಾಟಗಾರ ಛಲದಂಕಮಲ್ಲ ರೈತ ಹೋರಾಟದಲ್ಲಿ ತಮ್ಮ ಗಾಯನದಿಂದಲೇ ಜನ ಸೇರಿಸುವ ಸಂಘಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮೈಲಾರಪ್ಪ ಸಗರ ಇಂದು ಬೆಳಗಿನಜಾವ ವಿಧಿವಶರಾದರು ಎಂದು ಹೇಳಲು ವಿಷಾಧಿಸುತ್ತೇವೆ.
ಸಗರನಾಡಿನ ಭಾಗದ ರೈತ ಸಂಘದ ಅಪ್ಪಟ ಪ್ರತಿಭೆ,

ಮೈಲಾರಪ್ಪ ಸಗರ ಎಂದರೆ ಸಗರನಾಡಿನ ಭಾಗದಲ್ಲಿ ಹೆಸರು ವಾಸಿ. ಅವರು ಹಾಡಲು ನಿಂತರೆ ಮುಗೀತು ಜನ ತಲೆತೂಗಿ ಹೌದೌಹುದು ಎಂದು ಚಪ್ಪಾಳೆ ಕೇಕೆ ಹಾಕಬೇಕು ಅಂತಹ ಗಾಯನ ಶಕ್ತಿ ಅವರಲ್ಲಿತ್ತು.

ಮತ್ತು ಆಯಾ ಹೋರಾಟ ಸಭೆ ಸಮಾರಂಭಕ್ಕೆ ತಕ್ಕ ಹಾಡುಗಳನ್ನು ಅವರು ಹಾಡುತ್ತಿದ್ದರು. ಅಲ್ಲದೆ ಸಭೆ, ಹೋರಾಟ ಸಂದರ್ಭಕ್ಕನುಸಾರವಾಗಿ ಅಲ್ಲಿಯೇ ಹಾಡು ಕಟ್ಟಿ ತಮ್ಮದೆ ರಾಗದಲ್ಲಿ ಹಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು.

ನೀರಾವರಿ, ರೈತರ ಸಮಸ್ಯೆ ಕುರಿತು ತಾವೇ ಹಾಡುಗಳನ್ನು ಕಟ್ಟಿ ತಮ್ಮದೇ ಶೈಲಿಯಲ್ಲಿ ಹಾಡುವ ಮೂಲಕ ಜನರ ಮನಸೂರೆಗೊಂಡಿದ್ದರು.

ಇತ್ತೀಚೆಗೆ ವಯೋಸಹಜ ಖಾಯಿಲೆಯಿಂದ ಅವರು ಬಳಲುತ್ತಿದ್ದರು. ಸಗರನಾಡಿನ ಜಾನಪದ ಗಾಯಕ ಹಿರಿಯ ಜೀವಿ ಕಳೆದಕಿಂಡ ಸಾಂಸ್ಕೃತಿಕ ವಲಯ ಬಡವಾಗಿದೆ.

ಸಗರನಾಡಿನ ಸಾಂಸ್ಕೃತಿಕ ಜಾನಪದ ಗಾರುಡಿಗ ಮೈಲಾರಪ್ಪನವರಿಗೆ 8 ಗಂಡು ನಾಲ್ಕು ಹೆಣ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಅಭಿಮಾನಿ ವರ್ಗವನ್ನು ಅವರು ಅಗಲಿದ್ದಾರೆ.
ವಿನಯವಾಣಿ ಬಳಗದಿಂದ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.

ಓರ್ವ ಮಗ ದೇಶ ಕಾಯುವ ಯೋಧ ತಂದೆಯಾದ ನಾನು ರೈತನ ಮಗ ನನಗಿದೋ ಹೆಮ್ಮೆ ನನ್ನ ಜನ್ಮ ಸಾರ್ಥಕ ಎನ್ನುತ್ತಿದ್ದ ಅವರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸುವ ವಿವಿ ಬಳಗ ಹಾಗೂ ಸ್ನೇಹಿತರು.
-ಸಂ

Related Articles

Leave a Reply

Your email address will not be published. Required fields are marked *

Back to top button