ಪ್ರಮುಖ ಸುದ್ದಿವಿನಯ ವಿಶೇಷ

ಪ್ರತ್ಯೇಕ ನಾಡ ಕಚೇರಿಯಿಂದ ಜನರಿಗೆ ಅನುಕೂಲ- ದರ್ಶನಾಪುರ

ಹೊಸ ನಾಡ ಕಾರ್ಯಾಲಯ ಉದ್ಘಾಟನೆ

ಪ್ರತ್ಯೇಕ ನಾಡ ಕಚೇರಿಯಿಂದ ಜನರಿಗೆ ಅನುಕೂಲ- ದರ್ಶನಾಪುರ

ಹೊಸ ನಾಡ ಕಾರ್ಯಾಲಯ ಉದ್ಘಾಟನೆ

yadgiri, ಶಹಾಪುರಃ ತಹಸೀಲ್ ಕಚೇರಿಯ ಒಂದು ಕೋಣೆಯಲ್ಲಿ ನಾಡ ಕಾರ್ಯಾಲಯದ ಎಲ್ಲಾ ಕಾರ್ಯಚಟುವಟಿಕೆಗೆ ನಡೆಸಲು ಸ್ಥಳ ಅಭಾವದಿಂದ ಜನರಿಗೆ ತೊಂದರೆಯಾಗುತ್ತಿತ್ತು. ಪ್ರಸ್ತುತ ಹೊಸ ನಾಡ ಕಚೇರಿ ಪ್ರತ್ಯೇಕ ಕಟ್ಟಡ ನಿರ್ಮಾಣದಿಂದ ಜನರ ಕೆಲಸ ಕಾರ್ಯಚಟುವಟಿಕೆಗೆ ಅನೂಕಲವಾಗಲಿದೆ ಎಂದು ಸಚಿವ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.

ನಗರದ ತಹಸೀಲ್ ಕಚೇರಿ ಆವರಣದಲ್ಲಿ ಸುಮಾರು 18 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾದ ಹೊಸ ನಾಡ ಕಾರ್ಯಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಪ್ರತ್ಯೇಕ ನಾಡ ಕಚೇರಿ ಇಂದಿನಿಂದಲೇ ಕಾರ್ಯಾರಂಭ ಮಾಡಲಿದ್ದು, ಇಲ್ಲಿ ಪಹಣಿ ವಿತರಣೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾಸಸ್ಥಳ, ಆಧಾರ ಕಾರ್ಡ್‍ಗೆ ಅರ್ಜಿ ಸಲ್ಲಿಸುವದು ಮತ್ತು ತಿದ್ದುಪಡಿ ಮಾಡುವದು, ಸೇವಾ ಸಿಂಧೂ, ಅಟಲ್ ಜೀ ಕೇಂದ್ರದ ಕಾರ್ಯ ಚಟುವಟಿಕೆಗಳು ಸೇರಿದಂತೆ ಸುಮಾರು 43 ಸೇವೆಗಳನ್ನು ಜನರು ಈ ಕಚೇರಿಯಲ್ಲಿಯೇ ಪಡೆಯಬಹುದು. ಪ್ರತಿ ಅರ್ಜಿಗೆ ನಿಗದಿತ ಫೀಸ್ ಮಾಡಲಾಗಿದೆ. ಅದನ್ನು ಕಟ್ಟಿ ಸೇವೆ ಪಡೆಯಬಹುದು. ನಾಗರಿಕರು ಇದರ ಸದುಪಯೋಗ ಪಡೆಯಬೇಕು ಎಂದರು.

ಯಾದಗಿರಿ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮಾತನಾಡಿ, ಶಹಾಪುರಕ್ಕೆ ಪ್ರತ್ಯೇಕ ನಾಡ ಕಚೇರಿಯ ಅಗತ್ಯ ಇರುವದನ್ನು ಮನಗಂಡು ಇಂದು ನಾಡ ಕಚೇರಿ ಕಟ್ಟಡ ನಿರ್ಮಿಸುವ ಮೂಲಕ ನಾಗರಿಕರ ಸೇವೆಗೆ ಇಂದಿನಿಂದ ಲಭ್ಯವಿದ್ದು, ಇದರ ಸದುಪಯೋಗ ಪಡೆಯಬೇಕು. ಸುಮಾರು 43 ಸೇವೆಗಳು ಇಲ್ಲಿ ದೊರೆಯಲಿವೆ. ಸಾರ್ವಜನಿಕರು ನಿಗದಿತ ಫೀಸ್ ತುಂಬುವ ಮೂಲಕ ಸೇವೆ ಪಡೆಯಬೇಕೆಂದರು. ಇದೇ ಸಂದರ್ಭದಲ್ಲಿ ತಹಸೀಲ್ ಆವರಣದಲ್ಲಿ ಸಚಿವ ದರ್ಶನಾಪುರ ಸಸಿಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಒತ್ತು ನೀಡಿದರು.

ಈ ಸಂದರ್ಭದಲ್ಲಿ ಯಾದಗಿರಿ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ, ಜಿಲ್ಲಾಧಿಕಾರಿ ಸ್ನೇಹಲ್. ಆರ್. ತಹಸೀಲ್ದಾರ ಉಮಾಕಾಂತ ಹಳ್ಳೆ, ಉಪ ತಹಸೀಲ್ದಾರ ಸಂಗಮೇಶ, ನೌಕರರ ಸಂಘದ ಅಧ್ಯಕ್ಷ ರಾಯಪ್ಪಗೌಡ ಹುಡೇದ, ತಾಪಂ ಇಓ ಸೋಮಶೇಖರ ಬಿರೆದಾರ, ಗ್ರೇಡ್-2 ತಹಸೀಲ್ದಾರ ಸೇತುಮಾಧವ ಇತರರು ಉಪಸ್ಥಿತರಿದ್ದರು. ಕಂದಾಯ ನಿರೀಕ್ಷರಾದ ಗಿರೀಶ, ಭೀಮರಡ್ಡಿ ಕಂದಕೂರ ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿ ವರ್ಗ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದಿಂದ ಸಚಿವ ದರ್ಶನಾಪುರ ಅವರಿಗೆ ಕಂದಾಯ ಭವನ ನಿರ್ಮಾಣ ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಮನವಿ ಪತ್ರ ಸಲ್ಲಿಸಿದರು.

ಸೇವೆಗೆ ನಿಗದಿ ಮಾಡಿದ ದರ ಪರಿಶೀಲಿಸಿ- ಶಾಸಕ ಚನ್ನಾರಡ್ಡಿ

ಹೊಸ ನಾಡ ಕಚೇರಿಯಿಂದ ನಾಗರಿಕರಿಗೆ ಅನುಕೂಲವೇನು ಆಗಲಿದೆ. ಆದರೆ ಇದರಲ್ಲಿ 43 ಸೇವೆಗಳಿದ್ದು, ಕೆಲವೊಂದು ಉಚಿತವಾಗಿವೆ. ಕೆಲವೊಂದಕ್ಕೆ ನಿಗದಿತ ದರ ಕಟ್ಟಬೇಕಾಗುತ್ತದೆ. ಅದರಲ್ಲಿ ಕೆಲವೊಂದು ಸೇವೆಯ ದರ ಹೆಚ್ಚಾಗಿದ್ದು, ಜಿಲ್ಲಾಧಿಕಾರಿಗಳು ಮರು ಪರಿಶೀಲನೆ ಮಾಡಿ ನಾಗರಿಕರಿಗೆ ಸುಲಭವಾಗಿ ಕಡಿಮೆ ದರದಲ್ಲಿ ಸೇವೆ ಲಭ್ಯವಾಗುವಂತೆ ಸೂಕ್ತ ದರ ನಿಗದಿ ಮಾಡಬೇಕೆಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಯಾದಗಿರಿ ಶಾಸಕರಾದ ಚನ್ನಾರಡ್ಡಿ ಪಾಟೀಲ್ ತುನ್ನೂರ ಸಲಹೆ ನೀಡಿದರು.

 

 

ನಗರಸಭೆ ಮೂರು ನೂತನ ವಾಹನಗಳು

ಶವ ಸಾಗಿಸುವ ನೂತನ ರಥ, ನೀರಿನ ಟ್ಯಾಂಕ್, ಸಣ್ಣ ಜೆಸಿಬಿ

ಶಹಾಪುರಃ ಹೊಸ ನಾಡ ಕಚೇರಿ ಉದ್ಘಾಟನೆ ನಂತರ ಸಚಿವ ದರ್ಶನಾಪುರ ಅವರು ನಗರಸಭೆಗೆ ಅಗತ್ಯವಿದ್ದ ಒಂದು ಸಣ್ಣ ಜೆಸಿಬಿ, ಶವ ಸಾಗಿಸುವ ನೂತನ ವಾಹನ ಮತ್ತು ನೀರಿನ ಟ್ಯಾಂಕ್ ವಾಹನಗಳಿಗೆ ಪೂಜೆ ಸಲ್ಲಿಸುವ ಮೂಲಕ ನಾಗರಿಕ ಸೇವೆಗೆ ನೂತನ ವಾಹನಗಳನ್ನು ಸಮರ್ಪಿಸಿದರು.

ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವ ದರ್ಶನಾಪುರ, ನಗರಸಭೆಗೆ ನೂತನವಾಗಿ ಅಗತ್ಯತೆ ಅರಿತು ಶವ ಸಾಗಿಸುವ ವಾಹನ ತಂದಿರುವದು ನಾಗರಿಕರಿಗೆ ಅನುಕೂಲವಾಗಲಿದೆ. ಸಮರ್ಪಕ ದರ ನಿಗದಿ ಮಾಡಿ ನಗರಸಭೆಯಲ್ಲಿ ಶವ ಸಾಗಿಸುವ ರಥ ನೀಡಲಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಮತ್ತು ನೀರಿನ ಟ್ಯಾಂಕ್ ನೀರು ಸರಬರಾಜಿಗೆ ಅದೇ ರೀತಿ ಗಲ್ಲಿಗಳಲ್ಲಿರುವ ಚರಂಡಿಯಲ್ಲಿನ ಹೂಳೆತ್ತಲು ಈ ಸಣ್ಣ ಜೆಸಿಬಿ ಸಹಾಯಕರವಾಗಲಿದೆ. ಇದು ಸಂದಿಗೊಂದಿಗಳಲ್ಲಿ ಸಂಚರಿಸುವಂತದ್ದಾಗಿದೆ. ಇದರಿಂದ ಚರಂಡಿ, ನಾಲೆ ಸ್ವಚ್ಛಗೊಳಿಸಲು ಅನುಕೂಲವಾಗಲಿದೆ ಎಂದರು. ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ರಮೇಶ ಬಡಿಗೇರ, ಎಇಇ ನಾನಾಸಾಬ ಸೇರಿದಂತೆ ಇತರರಿದ್ದರು.
——————

 

Related Articles

Leave a Reply

Your email address will not be published. Required fields are marked *

Back to top button